ಚಿಕ್ಕಮಗಳೂರು: ಒಂದೆಡೆ ಧೋ ಎಂದು ಸುರಿಯುತ್ತಿದ್ದ ಮಳೆ. ಮತ್ತೊಂದೆಡೆ ನೋಡ-ನೋಡುತ್ತಿದ್ದಂತೆ ನಾನಾ-ನೀನಾ ಅಂತ ಸರತಿ ಸಾಲಲ್ಲಿ ಕುಸಿಯುತ್ತಿದ್ದ ಗುಡ್ಡಗಳ ಸಾಲು. ಮಗದೊಡೆ ಟ್ರಾಫಿಕ್ ಜಾಮ್‍ನಿಂದ ಮಕ್ಕಳು-ಮರಿ-ರೋಗಿಗಳ ನರಳಾಟ. ಶೌಚಾಲಯಕ್ಕೂ ಹೋಗಲಾಗದೆ ಹೆಣ್ಮಕ್ಕಳ ಪರದಾಟ.
ಕಳೆದೊಂದು ವಾರದ ಹಿಂದೆ ಚಾರ್ಮಾಡಿಯಲ್ಲಿ ಸುರಿದ ವರುಣನ ರೌದ್ರನರ್ತನಕ್ಕೆ ಸಾವಿರಾರು ಪ್ರವಾಸಿಗರು ಅನುಭವಿಸಿದ ಪರಿಪಾಟಲು ಒಂದೆರಡಲ್ಲ. ಸ್ಥಳಿಯರು, ಅರಣ್ಯ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಹೋರಾಡುತ್ತಿದ್ದರು. ಪ್ರಕೃತಿ ಎದುರು ಕೈಕಟ್ಟಿ ನಿಲ್ಲುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಏಕೆಂದರೆ ಎರಡ್ಮೂರು ಜೆಸಿಬಿ ಹಾಗೂ ನೂರಾರು ಕೆಲಸಗಾರರಿದ್ದರೂ ವರುಣನ ಅಬ್ಬರದ ಮುಂದೆ ಮೂಕ ವಿಸ್ಮಿತರಾಗಿದ್ದರು.
Advertisement
Advertisement
ಆದರೆ ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಹಾಗೂ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸ್ಥಳಕ್ಕೆ ಬಂದ ಮೇಲೆ ನಡೆದ ಕೆಲಸವೇ ಬೇರೆ. ಸುರಿಯೋ ಮಳೆಗೂ ಸೆಡ್ಡು ಹೊಡೆದು ಟ್ರಾಫಿಕ್ ಕ್ಲಿಯರ್ ಮಾಡಿ ವಾಹನ ಸಾಗಿಸೋದಕ್ಕೆ ಮುಂದಾದರು.
Advertisement
ಮೊಣಕಾಲುದ್ದ ಕೆಸರನ್ನೂ ಲೆಕ್ಕಿಸದೆ ತಾನೊಬ್ಬ ಶಾಸಕನೆಂದು ಹರೀಶ್ ಹಾಗೂ ನಾನೊಬ್ಬ ಐಪಿಎಸ್ ಆಫೀಸರ್ ಎಂಬ ಅಹಂ ಇಲ್ಲದ ಅಣ್ಣಾಮಲೈ ಕಾರು ನಿಲ್ಲುತ್ತಿದ್ದಂತೆ ಸುರಿಯೋ ಮಳೆಯಲ್ಲೂ ಟ್ರಾಫಿಕ್ ಕ್ಲಿಯರ್ ಮಾಡಲು ಮುಂದಾದರು. ಅವರಿಗೆ ಶಾಸಕ ಹರೀಶ್ ಪೂಂಜಾ ಕೂಡ ಅಷ್ಟೇ ಸಾಥ್ ನೀಡಿದರು.
Advertisement
ಎಸ್ಪಿ ಅಣ್ಣಾಮಲೈ ಮಳೆಯಲ್ಲಿ ಕೊಚ್ಚಿಕೊಂಡು ಬಂದಿದ್ದ ಮುಷ್ಟಿ ಗಾತ್ರದ ಕಲ್ಲನ್ನ ಎತ್ತಿ ಹಾಕ್ತಿದರೆ, ಹರೀಶ್ ಕೂಡ ಮುರಿದು ಬಿದ್ದಿದ್ದ ಮರದ ಟೊಂಗೆಗಳನ್ನ ಕೆಳಗೆ ಎಸೆಯುತ್ತಿದರು. ಧಾರಾಕಾರ ಮಳೆಯ ನಡುವೆ ಎದುರಿನ ವ್ಯಕ್ತಿಯೂ ಕಾಣದಂತ ಮಂಜಿನ ನಡುವೆಯೂ, ಎಸ್ಪಿ ಅಣ್ಣಾಮಲೈ ಜೆಸಿಬಿಯ ಡ್ರೈವರ್ ನಿರ್ದೇಶನ ಮಾಡ್ತಾ ಕುಸಿದಿದ್ದ ಗುಡ್ಡಗಳ ಮಣ್ಣನ್ನು ಎತ್ತಿ ಹಾಕಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಈ ನಡುವೆ ಕಳೆದ ಚಾರ್ಮಾಡಿ ಮಾರ್ಗದಲ್ಲಿ ಮಂಗಳೂರಿಗೆ ಹೋಗ್ತಿದ್ದ ರೋಗಿಗಳು ಕೂಡ ಅಸ್ವಸ್ಥರಾಗಿದರು. ಕೂಡಲೇ ಅಂಬುಲೆನ್ಸ್ ಕರೆಸಿ ಅವರನ್ನೂ ಆಸ್ಪತ್ರೆಗೆ ಸೇರಿಸಿದರು. ಇಷ್ಟೆಲ್ಲಾ ಕೆಲಸ ಮಾಡುವ ಹೊತ್ತಿಗೆ ಶಾಸಕ ಹರೀಶ್ ಹಾಗೂ ಎಸ್ಪಿ ಅಣ್ಣಾಮಲೈ ಮಳೆಯಲ್ಲಿ ತೊಯ್ದು ಹೋಗಿದರು.
ಕೆಲಸದ ಬಗೆಗಿನ ಇವರ ಕಮಿಟ್ಮೆಂಟ್ ಕಂಡ ಸ್ಥಳಿಯರು ಹಾಗೂ ಕೆಲಸಗಾರರಿಗೆ ಇಷ್ಟವಾದರೆ ಪ್ರವಾಸಿಗರು ಹಾಗೂ ಮಕ್ಕಳು ತುಂಬು ಹೃದಯದ ಥ್ಯಾಂಕ್ಸ್ ಹೇಳಿದರು. ಒಂದು ವೇಳೆ, ಹರೀಶ್ ಹಾಗೂ ಅಣ್ಣಾಮಲೈ ನಾವು ಕೆಲಸ ಮಾಡೋರಲ್ಲ, ಮಾಡಿಸೋರೆಂದು ಅನ್ನೋರಾಗಿದರೆ ಚಾರ್ಮಾಡಿಯಲ್ಲಿನ ಸಮಸ್ಯೆ ಬಗೆಹರಿಯಲು ವಾರವೇ ಬೇಕಾಗಿತ್ತೋ ಏನೋ ಎಂದು ಅಲ್ಲಿದ್ದ ಜನ ಮಾತನಾಡಿಕೊಳ್ಳುತ್ತಿದ್ದಾರೆ.