ಸಿಹಿ ಸುದ್ದಿ – ಕೇರಳಕ್ಕೆ ಮುಂಗಾರು ಪ್ರವೇಶ

Public TV
1 Min Read
weather

ನವದೆಹಲಿ: ನೈಋತ್ಯ ಮುಂಗಾರು ಮಾರುತಗಳು (Southwest Monsoon) ಕಡೆಗೂ ದೇಶವನ್ನು ಪ್ರವೇಶಿಸಿವೆ. ಇಂದು ಮುಂಗಾರು ಮಾರುತಗಳು ಕೇರಳ (Kerala) ತೀರಕ್ಕೆ ಅಪ್ಪಳಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಪ್ರಕಟಿಸಿದೆ.

ಹವಾಮಾನ ಇಲಾಖೆ ಅಂದಾಜಿಗಿಂತ ಮೂರು ದಿನ ತಡವಾಗಿ ಮುಂಗಾರು ದೇಶವನ್ನು ಪ್ರವೇಶಿಸಿದೆ. ಪ್ರಸ್ತುತ ಲಕ್ಷದ್ವೀಪ, ಕೇರಳ ಪ್ರಾಂತ್ಯದಲ್ಲಿ ಮುಂಗಾರು ಮಾರುತಗಳು ವಿಸ್ತರಿಸಿವೆ.

ಮುಂಗಾರು ಪ್ರವೇಶದ ಬೆನ್ನಲ್ಲೇ ಬುಧವಾರದಿಂದ ಕೇರಳದಲ್ಲಿ ವಿಸ್ತಾರವಾಗಿ ಮಳೆ ಆಗುತ್ತಿದೆ. ಮುಂದಿನ 48 ಗಂಟೆಯಲ್ಲಿ ಕೇರಳದ ಇತರೇ ಪ್ರಾಂತ್ಯಗಳು ಸೇರಿ, ಕರ್ನಾಟಕ, ತಮಿಳುನಾಡಿಗೂ ಮುಂಗಾರು ಮಾರುತಗಳು ಹಬ್ಬಲಿವೆ. ಇದನ್ನೂ ಓದಿ: ಹೊಸ ಷರತ್ತು – ಮಗ ತೆರಿಗೆದಾರನಾಗಿದ್ದರೆ ತಾಯಿಗೆ 2 ಸಾವಿರ ಸಿಗಲ್ಲ

ಸಾಧಾರಣವಾಗಿ ಪ್ರತಿ ವರ್ಷ ಮೇ ಕೊನೆಯ ವಾರ ಅಥವಾ ಜೂನ್‌ ಮೊದಲ ವಾರದಲ್ಲಿ ನೈಋತ್ಯ ಮಾನ್ಸೂನ್‌ ಮಾರುತಗಳು ಕೇರಳವನ್ನು ಪ್ರವೇಶಿಸುತ್ತವೆ. ಕಳೆದ ವರ್ಷ ಮೇ 29, 2021ರಲ್ಲಿ ಜೂನ್‌ 3, 2020ರಲ್ಲಿ ಜೂನ್‌ 1, 2019ರಲ್ಲಿ ಜೂನ್‌8, 2018ರಲ್ಲಿ ಮೇ 29ಕ್ಕೆ ನೈರುತ್ಯ ಮಾರುತ ದೇಶವನ್ನು ಪ್ರವೇಶಿಸಿದ್ದವು.

Share This Article