ಕ್ಯಾಲಿಫೋರ್ನಿಯಾ: ಬಟ್ಟೆಯಂತೆ ಧರಿಸಿರುವ ವಿಶ್ವದ ಮೊದಲ ಉದ್ಯಾನವನ್ನು ಪರಿಚಯಿಸಲಾಗಿದ್ದು, ಇದರಲ್ಲಿದೆ 22 ಬಗೆಯ ತರಕಾರಿ ಬೆಳೆಯಲಾಗಿದೆ.
ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅರುಸಿಯಕ್ ಗೇಬ್ರಿಯಲ್ ಅವರು ಉದ್ಯಾನವನ್ನು ವಿನ್ಯಾಸಗೊಳಿಸಿದ್ದು, ಅದನ್ನು ಬಟ್ಟೆಯಂತೆ ಧರಿಸಬಹುದಾಗಿದೆ. ಇದನ್ನು ವಿಶ್ವದ ಮೊದಲ ಬಟ್ಟೆಯಂತೆ ಧರಿಸುವ ಮೊದಲ ಉದ್ಯಾನ ಎಂದು ಕರೆಯಲಾಗುತ್ತಿದೆ.
Advertisement
Advertisement
ನಿಮ್ಮ ಆಹಾರವನ್ನು ನೀವೇ ಬೆಳೆಸಿಕೊಳ್ಳಿ ಎಂದು ಪ್ರಾಧ್ಯಾಪಕ, ಉದ್ಯಾನದ ವಿನ್ಯಾಸಕಾರ ಗೇಬ್ರಿಯಲ್ ಹೇಳುತ್ತಾರೆ. ಈ ಉದ್ಯಾನದಲ್ಲಿ ಗೇಬ್ರಿಯಲ್ ಅವರು ಎಲೆಕೋಸು, ಕ್ಯಾರೆಟ್, ಸ್ಟ್ರಾಬೆರಿ, ಕಡಲೆಕಾಯಿ ಸೇರಿದಂತೆ 22ಕ್ಕೂ ಹೆಚ್ಚು ಬಗೆಯ ತರಕಾರಿಗಳನ್ನು ಬೆಳೆದಿದ್ದು, ಅದನ್ನು ಬಟ್ಟೆಯಾಗಿ ಧರಿಸುತ್ತಾರೆ. ಈ ಎಲ್ಲ ಸಸಿಗಳು ಒಟ್ಟಿಗೆ ಬೆಳೆದಾಗ, ಅವು ಬಟ್ಟೆಯನ್ನು ವರ್ಣಮಯವಾಗಿಸುತ್ತವೆ. ಮತ್ತೊಂದು ವಿಶೇಷವೆಂದರೆ ಗೇಬ್ರಿಯಲ್ ಅವರು ಈ ಸಸ್ಯಗಳನ್ನು ತಮ್ಮ ಮೂತ್ರದಿಂದ ನೀರಾವರಿ ಮಾಡಿಕೊಂಡಿದ್ದಾರೆ. ಹೀಗಾಗಿ ಇದಕ್ಕೆ ಕೆಲವರು ಟೀಕೆ ವ್ಯಕ್ತಪಡಿಸಿದ್ದಾರೆ.
Advertisement
ಗೇಬ್ರಿಯಲ್ ಅವರ ಈ ಯೋಜನೆಯು ಫ್ರೆಂಚ್ ಸಸ್ಯವಿಜ್ಞಾನಿ ಪ್ಯಾಟ್ರಿಕ್ ಬ್ಲಾಂಕ್ ಅವರ ಸಸ್ಯೋದ್ಯಾನಗಳಿಂದ ಬಲವಾಗಿ ಪ್ರಭಾವಿತವಾಗಿದೆ ಎಂದು ಹೇಳಲಾಗುತ್ತಿದೆ. ಬ್ಲಾಂಕ್ ಅವರು ಸ್ಥಳಾವಕಾಶದ ಕೊರತೆಯಿಂದ ಲಂಬ ಉದ್ಯಾನವನ್ನು ಬೆಳೆಸಿದ್ದರು.
Advertisement
ಹೇಗಿದೆ ಉದ್ಯಾನ?:
ಗೇಬ್ರಿಯಲ್ ಅವರು ಬಟ್ಟೆಯ ಪದರವನ್ನು ತಯಾರಿಸಿ, ಅದರ ಮೇಲೆ ಸಸ್ಯಗಳ ಬೀಜಗಳು ಅಂಟಿಸಿದ್ದಾರೆ. ಒದ್ದೆಯಾದ ಬಟ್ಟೆಯ ಪದರದಲ್ಲಿರುವ ಬೀಜಗಳು ಎರಡು ವಾರಗಳ ಬಳಿಕ ಮೊಳಕೆಯೊಡೆಯುತ್ತವೆ. ನಂತರ ಬೆಳೆಯಲು ಆರಂಭಿಸುತ್ತದೆ. ಜೊತೆಗೆ ಮೂತ್ರದಿಂದ ಉಂಟಾಗುವ ತೇವಾಂಶವು ಸಸ್ಯಗಳ ಬೆಳೆವಣಿಗೆಗೆ ಸಹಾಯ ಮಾಡುತ್ತದೆ. ಈ ಮೂಲಕ ಬೆಳೆದು ಒಂದು ಹಂತಕ್ಕೆ ಬಂದ ಸಸ್ಯಗಳು ಹಣ್ಣು, ತರಕಾರಿ ಕೊಡುತ್ತವೆ.