ಹುಬ್ಬಳ್ಳಿ: ಸಾಕಷ್ಟು ಜನಪರ ಯೋಜನೆ ಅನುಷ್ಠಾನದ ಮೂಲಕ ಜನಮನ್ನಣೆ ಪಡೆದ ನೈಋತ್ಯ ರೈಲ್ವೆಯು(South Western Railway) ಮತ್ತೊಂದು ಸಾಧನೆ ಮಾಡಿದೆ. ತನ್ನ ಜವಾಬ್ದಾರಿಯ ಜೊತೆಗೆ ಈಗ ಆದಾಯ ಸಂಗ್ರಹದಲ್ಲಿಯೂ ದಾಖಲೆ ನಿರ್ಮಿಸಿದೆ.
ನೈಋತ್ಯ ರೈಲ್ವೆ ವಲಯವು ಈ ಆರ್ಥಿಕ ವರ್ಷದ(Financial Year) ನವೆಂಬರ್‌ವರೆಗೆ 4,447.67 ಕೋಟಿ ರೂ. ಆದಾಯ ಗಳಿಸಿದೆ. ಕಳೆದ ವರ್ಷ ಈ ಅವಧಿಗೆ 3,400.83 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು. ಈ ಬಾರಿಯ ಆದಾಯ ಶೇ. 30.78ರಷ್ಟು ಹೆಚ್ಚಾಗಿದೆ. ಅಲ್ಲದೇ ಹೊಸ ಹೊಸ ಯೋಜನೆ ಮೂಲಕ ಕೋವಿಡ್ ನಂತರದಲ್ಲಿ ದಾಖಲೆಯ ಆದಾಯವನ್ನು ತನ್ನ ಬೊಕ್ಕಸಕ್ಕೆ ಜಮಾ ಮಾಡಿಕೊಂಡಿದೆ. ಇದನ್ನೂ ಓದಿ: ಅಧಿಕಾರಿಗೆ ಹಲ್ಲೆ ನಡೆಸಲು ಮಚ್ಚು ಹಿಡಿದು ಬಂದ ಮಹಿಳೆ
Advertisement
Advertisement
ಈ ನವೆಂಬರ್‌ವರೆಗೆ ಪ್ರಯಾಣಿಕರ ಸಂಚಾರದಿಂದ 1,813.58 ಕೋಟಿ ರೂ. ಆದಾಯ ಗಳಿಕೆಯಾಗಿದ್ದು, ಕಳೆದ ವರ್ಷ 927.31 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿತ್ತು. ಕಳೆದ ಬಾರಿಗಿಂತ ಶೇ. 95.57ರಷ್ಟು ಹೆಚ್ಚಿನ ಆದಾಯ ಪ್ರಯಾಣಿಕರ ಸಂಚಾರದಿಂದ ಬಂದಿದೆ.
Advertisement
ಟಿಕೆಟ್ ಪರಿಶೀಲನೆಯಿಂದ ಕಳೆದ ಬಾರಿ 15.72 ಕೋಟಿ ರೂ. ದಂಡ ವಸೂಲಿಯಾಗಿತ್ತು. ಈ ಬಾರಿ 37.74 ಕೋಟಿ ರೂ. ಸಂಗ್ರಹಣೆಯಾಗಿದ್ದು, ಇದರಲ್ಲಿಯೂ ಶೇ. 104.08ರಷ್ಟು ಹೆಚ್ಚಳವಾಗಿದೆ.
Advertisement
ಸರಕು ಸಾಗಣೆಯಿಂದ ಬರುವ ಆದಾಯ ಶೇ. 16.32ರಷ್ಟು ಹೆಚ್ಚಳವಾಗಿದೆ. ಸರಕು ಸಾಗಣೆಯಿಂದ ಕಳೆದ ವರ್ಷ 80.20 ಕೋಟಿ ರೂ. ಆದಾಯ ಸಂಗ್ರಹಣೆಯಾಗಿದ್ದರೆ, ಈ ಬಾರಿ 93.29 ಕೋಟಿ ರೂ. ಆದಾಯ ಸಂಗ್ರಹಗೊಂಡಿದೆ. ರೈಲ್ವೆ ಸಿಬ್ಬಂದಿಯ ಕಾರ್ಯಕ್ಷಮತೆಯಿಂದಾಗಿ ನೈಋತ್ಯ ವಲಯ ಉತ್ತಮ ಆದಾಯ ಗಳಿಸಿದೆ ಎಂದು ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ ಕುಮಾರ ತಿಳಿಸಿದ್ದಾರೆ.