`ಗಂಧದ ಗುಡಿ’ (Gandadagudi) ಇದೇ ಅಕ್ಟೋಬರ್ 28ಕ್ಕೆ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್ ಜೊತೆ ದಕ್ಷಿಣದ ಸ್ಟಾರ್ಸ್ ಸಾಥ್ ಕೊಡಲಿದ್ದಾರೆ. `ಪುನೀತ ಪರ್ವ’ (Puneetha Parva) ಕಾರ್ಯಕ್ರಮದಲ್ಲಿ ಸೌತ್ ಸ್ಟಾರ್‌ಗಳ ದಂಡೇ ಬೆಂಗಳೂರಿಗೆ ಬರಲಿದೆ.
ಅಪ್ಪು ನಟನೆಯ ಕೊನೆಯ ಕನಸಿನ ಸಿನಿಮಾ `ಗಂಧದ ಗುಡಿ’ಗೆ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಇಡೀ ಅಣ್ಣಾವ್ರ ಕುಟುಂಬವೇ ಕೈ ಜೋಡಿಸಿದೆ. ಈ ಚಿತ್ರವನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲು ಸಕಲ ತಯಾರಿ ನಡೆಯುತ್ತಿದೆ. ಚಿತ್ರದ ಪ್ರೀ -ರಿಲೀಸ್ ಇವೆಂಟ್‌ಗೆ ಕರ್ನಾಟಕದ ಮೂಲೆ ಮೂಲೆಯಿಂದ ಅಪ್ಪು ಫ್ಯಾನ್ಸ್ ಬರಲಿದ್ದಾರೆ. ಇನ್ನೂ ಕಾರ್ಯಕ್ರಮ ರಂಗು ಹೆಚ್ಚಿಸಲು ಸೌತ್‌ನ ಸೂಪರ್ ಸ್ಟಾರ್ಸ್ ಕೂಡ ಸಾಥ್ ಕೊಡಲಿದ್ದಾರೆ. ಇದನ್ನೂ ಓದಿ:ಮತ್ತೆ ಬೋಲ್ಡ್ ಲುಕ್‌ನಲ್ಲಿ ಮಿಂಚಿದ ಗೋಲ್ಡನ್ ಗರ್ಲ್ ರಶ್ಮಿಕಾ ಮಂದಣ್ಣ
ಅಪ್ಪು ಸ್ನೇಹಜೀವಿ ಆಗಿದ್ದರು. ಎಲ್ಲಾ ಚಿತ್ರರಂಗದ ಕಲಾವಿದರ ಜೊತೆಗೆ ಒಡನಾಟವಿದ್ದ ಕಾರಣ ದಕ್ಷಿಣದ ಸ್ಟರ‍್ಸ್ಗಳಾದ ನಂದಮುರಿ ಬಾಲಕೃಷ್ಣ(Nandamuri Balakrishna), ಸೂರ್ಯ(Surya), ಕಮಲ್ ಹಾಸನ್ (Kamal Hassan), ರಾಣಾ ದಗ್ಗುಬಾಟಿ (Rana Daggubati) ಅವರಿಗೆ ಅಣ್ಣಾವ್ರ ಕುಟುಂಬದಿಂದ ಆಹ್ವಾನ ನೀಡಲಾಗಿದೆ. ಅಪ್ಪು ನಟನೆಯ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಈ ಎಲ್ಲಾ ಸ್ಟಾರ್‌ಗಳು ಬರಲಿದ್ದಾರೆ.
ಅಕ್ಟೋಬರ್ 21ರಂದು ಸಂಜೆ 6.30ಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿ ಕಾರ್ಯಕ್ರಮ ನಡೆಯಲಿದೆ. 5 ಲಕ್ಷಕ್ಕೂ ಅಧಿಕ ಜನ ಈ ಕಾರ್ಯಕ್ರಮಕ್ಕೆ ಬರುವ ನಿರೀಕ್ಷೆಯಿದೆ.