ಸಿಯೋಲ್: ನೈಸರ್ಗಿಕ ಜೀವವಿಜ್ಞಾನದಿಂದ ಪ್ರೇರಿತವಾದ ದಕ್ಷಿಣ ಕೊರಿಯಾದ ಸಂಶೋಧಕರು ಊಸರವಳ್ಳಿಯಂತೆ ಬದಲಾಗುವ ಕೃತಕ ಚರ್ಮವನ್ನು ಕಂಡು ಹಿಡಿದಿದ್ದಾರೆ.
Advertisement
sದಕ್ಷಿಣ ಕೊರಿಯಾದ ಸಿಯೋಲ್ ರಾಷ್ಟ್ರೀಯ ವಿಶ್ವವಿದ್ಯಾಲಯದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪ್ರಾಧ್ಯಾಪಕ ಕೋ ಸೆಯುಂಗ್ ಹ್ವಾನ್ ಈ ಕೃತಕ ಚರ್ಮವನ್ನು ಕಂಡು ಹಿಡಿದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು, ನೈಸರ್ಗಿಕ ಜೀವವಿಜ್ಞಾನದಿಂದ ಪ್ರೇರಿತನಾಗಿ ಕೃತಕ ಚರ್ಮದಂತಹ ವಸ್ತುವನ್ನು ಕಂಡು ಹಿಡಿದಿದ್ದೇನೆ. ಈ ಕೃತಕ ಚರ್ಮ ತಾಪಮಾನಕ್ಕೆ ತಕ್ಕಂತೆ ಊಸರವಳ್ಳಿಯ ರೀತಿ ತಕ್ಷಣ ತನ್ನ ಬಣ್ಣವನ್ನ ಬದಲಾಯಿಸುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ಕುಟುಂಬಗಳ ಮಧ್ಯೆ ಮಾರಾಮಾರಿ- ಮೂವರಿಗೆ ಗಾಯ
Advertisement
ಒಂದು ವೇಳೆ ನಾವು ಮರುಭೂಮಿ ರೀತಿಯ ಪ್ರದೇಶಕ್ಕೆ ಹೋದರೆ ಈ ರೀತಿಯ ಚರ್ಮವನ್ನು ಧರಿಸಬಹುದು. ಈ ಮೂಲಕ ನಾವು ಎಷ್ಟೇ ಬಿಸಿಲಿನಲ್ಲಿದ್ದರೂ ಸುಲಭವಾಗಿ ಓಡಾಡಬಹುದು. ಅದೇ ರೀತಿ ನಾವು ತಯಾರಿಸುವ ಈ ಕೃತಕ ಚರ್ಮವನ್ನು ಆ ವಾತಾವರಣಕ್ಕೆ ತಕ್ಕಂತೆ ಬದಲಾಯಿಸಬೇಕು ಎಂದಿದ್ದಾರೆ. ಇದನ್ನೂ ಓದಿ: ಸಾಲಬಾಧೆ ತಾಳದೆ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ
Advertisement
Advertisement
ಕೋ ಸೆಯುಂಗ್ ಹ್ವಾನ್ ಮತ್ತು ಅವರ ತಂಡ ವಿವಿಧ ಬಣ್ಣಗಳ ಮೇಲೆ ರೋಬೋಟ್ ಅನ್ನು ಬಿಟ್ಟು ತಮ್ಮ ಪ್ರಯೋಗವನ್ನು ಪ್ರದರ್ಶಿಸಿದರು. ರೋಬೋಟ್ ಕೆಂಪು, ನೀಲಿ ಮತ್ತು ಹಸಿರು ಬಣ್ಣಗಳ ಮೇಲೆ ಹೋಗುತ್ತ ಇದ್ದಂತೆ ಆ ಬಣ್ಣಗಳಿಗೆ ತಿರುಗುತ್ತಿತ್ತು ಇದನ್ನು ನೋಡಿದ ವಿದ್ಯಾರ್ಥಿಗಳು ಮತ್ತು ಸ್ಥಳೀಯರು ಬೆರಗಾಗಿ ನಿಂತಿದ್ದರು. ಇದನ್ನೂ ಓದಿ: ಸಿಲಿಂಡರ್ ಸ್ಫೋಟ- ಮೊಮ್ಮಗಳ ಸಮಯ ಪ್ರಜ್ಞೆಯಿಂದ ಉಳೀತು ಅಜ್ಜಿ ಜೀವ
ಈ ಕುರಿತು ಪ್ರತಿಕ್ರಿಯಿಸಿದ ಕೋ, ಸೆನ್ಸರ್‍ಗಳಿಂದ ಪತ್ತೆಯಾದ ಬಣ್ಣದ ಮಾಹಿತಿಯನ್ನು ಮೈಕ್ರೊಪ್ರೊಸೆಸರ್ ಗೆ ಮತ್ತು ನಂತರ ಸಿಲ್ವರ್ ನ್ಯಾನೊವೈರ್ ಹೀಟರ್‍ಗಳಿಗೆ ವರ್ಗಾಯಿಸಲಾಗುತ್ತದೆ. ಹೀಟರ್‍ಗಳು ಒಂದು ನಿರ್ದಿಷ್ಟ ತಾಪಮಾನವನ್ನು ತಲುಪಿದ ನಂತರ, ಥರ್ಮೋಕ್ರೋಮಿಕ್ ಲಿಕ್ವಿಡ್ ಸ್ಫಟಿಕ ಪದರವು ಅದರ ಬಣ್ಣವನ್ನು ಬದಲಾಯಿಸುತ್ತೆ ಎಂದು ತಿಳಿಸಿದರು.