ಹೈದರಾಬಾದ್: ದಕ್ಷಿಣ ಭಾರತದ ಟಾಲಿವುಡ್ ಸ್ಟೈಲಿಶ್ ನಟ ಅಲ್ಲು ಅರ್ಜುನ್ 1.3 ಕೋಟಿ ಫಾಲೋವರ್ಸ್‍ಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹೊಂದಿದ್ದು, ಈ ಮೂಲಕ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸ್ಟೈಲ್ ಮೂಲಕವೇ ಎಲ್ಲರನ್ನು ಸೆಳೆಯುವ ನಟ ಅಲ್ಲು ಅರ್ಜುನ್. ಇವರಿಗೆ ಕೋಟ್ಯಂತರ ಅಭಿಮಾನಿ ಬಳಗವನ್ನೆ ಹೊಂದಿದ್ದಾರೆ. ಈಗ ಇನ್‍ಸ್ಟಾಗ್ರಾಮ್‍ನಲ್ಲಿಯೂ ಅತೀ ಹೆಚ್ಚು ಫಾಲೋವರ್ಸ್‍ಗಳಿಂದ ಇವರ ಗರಿ ಹೆಚ್ಚಿದೆ. ಅದು ಅಲ್ಲದೆ ಇವರು ಅತೀ ಹೆಚ್ಚು ಫಾಲೋವರ್ಸ್ ಹೊಂದಿದ ದಕ್ಷಿಣದ ಮೊದಲ ನಟ ಎಂಬ ಖ್ಯಾತಿಗೂ ಒಳಗಾಗಿದ್ದಾರೆ.ಇದನ್ನೂ ಓದಿ :ಚಂದನವನದಲ್ಲಿ ಸುದೀಪ್ ಸಿನಿ ಜರ್ನಿ
ದಕ್ಷಿಣ ಭಾರತದ ಸಿನಿಮಾ ನಟರ ಪಟ್ಟಿಯಲ್ಲಿ ವಿಜಯ್ ದೇವರಕೊಂಡ 2ನೇ ಸ್ಥಾನವನ್ನು ಹೊಂದಿದ್ದು, 12.9 ಮಿಲಿಯನ್(1.2 ಕೋಟಿ) ಜನರು ಇನ್‍ಸ್ಟಾದಲ್ಲಿ ಫಾಲೋ ಮಾಡುತ್ತಿದ್ದಾರೆ. ಮಹೇಶ್ ಬಾಬು 71 ಲಕ್ಷ, ಪ್ರಭಾಸ್ 69 ಲಕ್ಷ, ವಿಜಯ್ ಸೇತುಪತಿ 43 ಲಕ್ಷ, ರಾಮ್ ಚರಣ್ 41 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ.ಇದನ್ನೂ ಓದಿ :ಗಂಡನ ಮನೆ ಬಿಟ್ಟು ಹೋದ್ರಾ ಶಿಲ್ಪಾ ಶೆಟ್ಟಿ?
ಅಲ್ಲು ಅರ್ಜುನ್ ಅವರ ‘ಪುಷ್ಪ’ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದು, ಕೊರೊನಾ ಕಾರಣದಿಂದ ಚಿತ್ರದ ಬಿಡುಗಡೆ ಡಿಸೆಂಬರ್‍ಗೆ ಹೋಗಿದೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ಡಾಲಿ ಧನಂಜಯ್ ನಟಿಸಿರುವುದು ಕನ್ನಡಿಗರಿಗೆ ಇನ್ನೂ ಸಂತೋಷ ತಂದಿದ್ದು, ಈ ಸಿನಿಮಾ ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
ನಮ್ಮ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಮೂಲಕ ಇಡೀ ಇಂಡಿಯಾದಲ್ಲೇ ಅಲೆ ಎಬ್ಬಿಸಿದ್ದರು. ಇವರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಿಂದೆ ಬಿದ್ದಿಲ್ಲ. ಇವರಿಗೂ 50 ಲಕ್ಷ ಫಾಲೋವರ್ಸ್ ಮತ್ತು ಟ್ಚೀಟರ್‍ನಲ್ಲಿ 7 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ.ಇದನ್ನೂ ಓದಿ :ತಂದೆ ಸಮಾಧಿ ಬಳಿ ಹುಟ್ಟುಹಬ್ಬ ಆಚರಿಸಿದ ಬಾಲಕಿ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 13 ಲಕ್ಷ ಫಾಲೋವರ್ಸ್‍ಗಳನ್ನು ಇನ್‍ಸ್ಟಾಗ್ರಾಮ್ ನಲ್ಲಿ ಹೊಂದಿದ್ದು, ತಮ್ಮ ಮೂವೀ ಅಪ್ಡೇಟ್ ಕೊಡುವ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ.