Connect with us

Corona

ದಕ್ಷಿಣ ಆಫ್ರಿಕಾ ಕ್ರಿಕೆಟಿಗನಿಗೆ ಕೊರೊನಾ ಪಾಸಿಟಿವ್

Published

on

ಜೋಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾ ಫಸ್ಟ್ ಕ್ಲಾಸ್ ಕ್ರಿಕೆಟಿಗ ಸೋಲೋ ಎನ್‍ಕ್ವಿನಿ ಅವರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಈಗಾಗಲೇ ಗಿಲ್ಲನ್ ಬಾರ್ರೆ ಸಿಂಡ್ರೋಮ್ ಎಂಬ ಅಪರೂಪದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಸೋಲೋ ಎನ್‍ಕ್ವಿನಿ ಅವರ ಸ್ಥಿತಿ ಸದ್ಯ ಗಂಭೀರವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಕೊರೊನಾ ಪಾಸಿಟಿವ್ ಬಂದ ಮೂರನೇ ಕ್ರಿಕೆಟಿಗ ಸೋಲೋ ಗಾಗಿದ್ದು, ಇದಕ್ಕೂ ಮುನ್ನ ಪಾಕ್ ಕ್ರಿಕೆಟಿಗ ಜಾಫರ್ ಸರ್ಫರಾಜ್, ಸ್ಕಾಟ್‌ಲೆಂಡ್ ನ ಮಜಿದ್ ಹಕ್ ಅವರಿಗೆ ಕೊರೊನಾ ಸೋಂಕು ಹರಡಿತ್ತು.

ಕಳೆದ ವರ್ಷ ನನಗೆ ಜಿಬಿಎಸ್ ಸಮಸ್ಯೆ ಕಾಣಿಸಿಕೊಂಡಿತ್ತು. ಕಳೆದ 10 ತಿಂಗಳಿಂದ ಈ ರೋಗದೊಂದಿಗೆ ಹೋರಾಟ ಮಾಡುತ್ತಿದ್ದೇನೆ. ಈಗಾಗಲೇ ಜಿಬಿಎಸ್‍ನಿಂದ ಅರ್ಧದಷ್ಟು ಚೇತರಿಕೆ ಹೊಂದಿದ್ದು, ಟಿಬಿ, ಮೂತ್ರಪಿಂಡ ಸಮಸ್ಯೆ ಕೂಡ ಕಾಣಿಸಿಕೊಂಡಿತ್ತು. ಈಗ ಕೊರೊನಾ ಪಾಸಿಟಿವ್ ಇರುವುದು ವರದಿಯಲ್ಲಿ ಖಚಿತವಾಗಿದೆ. ನನಗೆ ಈ ರೀತಿ ಏಕೆ ಆಗುತ್ತಿದೆ ಅರ್ಥವಾಗುತ್ತಿಲ್ಲ ಎಂದು ಸೋಲೋ ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.

ಸೋಲೋ ಎನ್‍ಕ್ವಿನಿ ಕಳೆದ ವರ್ಷ ಜಿಬಿಎಸ್‍ಗೆ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಕೆಲ ವಾರಗಳ ಕಾಲ ಕೋಮಾ ಸ್ಥಿತಿಗೆ ತಲುಪಿದಿದ್ದರು. 2012ರಲ್ಲಿ ದಕ್ಷಿಣ ಆಫ್ರಿಕಾ ಅಂಡರ್-19 ತಂಡದ ಸಾರಥ್ಯವನ್ನು ಸೋಲೋ ಎನ್‍ಕ್ವಿನಿ ವಹಿಸಿದ್ದರು. ಅಲ್ಲದೇ ಈ ಹಿಂದೆ ದಕ್ಷಿಣ ಆಫಿಕಾ ಈಸ್ಟರ್ನ್ ಪ್ರಾವಿನ್ಸ್, ವಾರಿಯರ್ಸ್ ಫ್ರಾಂಚೈಸಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಸದ್ಯ ಸೋಲೋ ಎನ್‍ಕ್ವಿನಿ ಶೇರ್ ಕ್ಲಬ್ ತಂಡದ ಪರ ಆಡುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in