ಕೇಪ್‍ಟೌನ್: ದಕ್ಷಿಣ ಆಫ್ರಿಕಾದ ಯುವ ಕ್ರಿಕೆಟ್ ಪಟು ಏಕದಿನ ಕ್ರಿಕೆಟ್ ನಲ್ಲಿ 151 ಎಸೆತಗಳಲ್ಲಿ ಬರೋಬ್ಬರಿ 490 ರನ್ ಗಳಿಸುವ ಮೂಲಕ ಹೊಸ ದಾಖಲೆಯೊಂದನ್ನು ತಮ್ಮ ಹೆಸರಿನಲ್ಲಿ ಬರೆದಿದ್ದಾರೆ.
ದಕ್ಷಿಣ ಆಫ್ರಿಕಾದ 20 ವರ್ಷದ ಬ್ಯಾಟ್ಸ್ ಮನ್ ಶೇನ್ ಡ್ಯಾಡ್ಸ್ ವೆಲ್ 151 ಎಸೆತಗಳಲ್ಲಿ 490 ರನ್ ಚಚ್ಚಿದ್ದಾರೆ. ಕ್ಲಬ್ ಕ್ರಿಕೆಟ್ ನಲ್ಲಿ ಎನ್‍ಡಬ್ಲ್ಯೂಯು ಪುಕ್ಕೆ ತಂಡ ಪರ ಆಡಿದ ಶೇನ್ ಎದುರಾಳಿ ಪೋಚ್ ಡ್ರಾಪ್ ವಿರುದ್ಧ ಈ ವಿಶೇಷ ಸಾಧನೆ ಮಾಡಿದ್ದಾರೆ.
Advertisement
Advertisement
ಶೇನ್ ಅಮೋಘ ಇನ್ನಿಂಗ್ಸ್ ನಲ್ಲಿ 27 ಬೌಂಡರಿ, 57 ಸಿಕ್ಸರ್ ಸಿಡಿಸಿದ್ದರು. ಶೇನ್ ಜೊತೆಯಾಗಿ ಆಡಿದ ರವೂನ್ ಹ್ಯಾಸ್‍ಬ್ರೋಕ್ 104 ರನ್(54 ಎಸೆತ, 6 ಸಿಕ್ಸ್, 12 ಬೌಂಡರಿ)ಗಳಿಸುವ ತಂಡದ ಮೊತ್ತ ಹೆಚ್ಚಿಸಲು ಕಾರಣರಾದರು.
Advertisement
ಪುಕ್ಕೆ ತಂಡದ ಬ್ಯಾಟ್ಸ್ ಮನ್ ಗಳ ಬ್ಯಾಟಿಂಗ್ ಆರ್ಭಟ ಹೇಗಿತ್ತು ಎಂದರೆ 63 ಸಿಕ್ಸ್, 48 ಬೌಂಡರಿಗಳು ಸಿಡಿಯಲ್ಪಟ್ಟಿತ್ತು. ಪರಿಣಾಮ ಎನ್‍ಡಬ್ಲ್ಯೂಯು ಪುಕ್ಕೆ ನಿಗದಿತ 50 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ ದಾಖಲೆಯ 677 ರನ್ ಗಳ ಮೊತ್ತವನ್ನು ಕಲೆ ಹಾಕಿತು. ಭಾರೀ ಮೊತ್ತವನ್ನು ಬೆನ್ನಟ್ಟಿದ್ದ ಪೋಚ್ ಡ್ರಾಪ್ 9 ವಿಕೆಟ್ ಕಳೆದುಕೊಂಡು 290 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು.
Advertisement
ಬೌಲಿಂಗ್‍ನಲ್ಲಿಯೂ ಕಮಾಲ್: 490 ರನ್ ಹೊಡೆದಿದ್ದ ಶೇನ್ ಬಾಲಿಂಗ್ ನಲ್ಲಿ ತಮ್ಮ ಮೋಡಿ ಮಾಡಿದ್ದು, 7 ಓವರ್ ಗಳಲ್ಲಿ 32 ರನ್ ನೀಡಿ 2 ವಿಕೆಟ್ ಕಬಳಿಸಿದರು. ಅಷ್ಟೇ ಅಲ್ಲದೇ ಒಂದು ಮೇಡನ್ ಓವರ್ ಮಾಡಿದ್ದರು. ಪುಕ್ಕೆ ತಂಡದ ಬ್ಯಾಟ್ ಮನ್‍ಗಳು ಮೊದಲ ಮೂರು ವಿಕೆಟ್‍ಗೆ ಅನುಕ್ರಮವಾಗಿ 194, 204 ಮತ್ತು 220 ಜೊತೆಯಾಟವಾಡಿದ್ದರು. ಶೇನ್ ಅವರು ತಮ್ಮ 20ನೇ ಹುಟ್ಟುಹಬ್ಬದ ದಿನದಂದೇ ಈ ಸಾಧನೆ ಮಾಡಿರುವುದು ವಿಶೇಷ.
A 20 year old South African batsman Shane Dadswell made a record 490 in 151 balls, with 27 fours and 57 sixes! in a 50 over club game.
His side finally made 677/3 in 50 overs! https://t.co/ki1CU08SNK
— Mohandas Menon (@mohanstatsman) November 18, 2017
Insane batting in a 50-over club match in Potch. Is this ground the size of a postage stamp? And if CricInfo is to be believed, today is Dadswell's 20th birthday. pic.twitter.com/XwA2QzXkbK
— Ros Brodie (@ros_brodie) November 18, 2017