– ಟೆಸ್ಟ್‌ನಲ್ಲಿ ಸೋಲೇ ಕಾಣದ ಟೆಂಬಾ ಬವುಮಾ
– ಗಾಯಾಳುವಾಗಿ ಪಂದ್ಯದಿಂದ ಹೊರಗುಳಿದ ಗಿಲ್
ಕೋಲ್ಕತ್ತಾ: ಸ್ಪಿನ್ ಬೌಲಿಂಗ್‌ಗೆ ನೆರವಾಗುತ್ತಿದ್ದ ಈಡನ್ ಗಾರ್ಡನ್ (Eden Gardens) ಮೈದಾನದಲ್ಲಿ ಟೀಂ ಇಂಡಿಯಾ, ಚಾಂಪಿಯನ್ ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲು ಕಂಡಿದೆ. 124 ರನ್‌ಗಳ ಸುಲಭ ಗುರಿ ಪಡೆದ ಭಾರತ 93 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 30 ರನ್‌ಗಳ ಅಂತರದಿಂದ ಸೋಲು ಕಂಡಿದೆ. ನಾಯಕ ಶುಭಮನ್ ಗಿಲ್ (Shubman Gill) ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದೂ ಈ ಸೋಲಿಗೆ ಮತ್ತೊಂದು ಕಾರಣವಾಗಿದೆ.

ಈ ಗೆಲುವಿನೊಂದಿಗೆ 2 ಪಂದ್ಯಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾ (South Africa) ತಂಡ 1-0 ಮುನ್ನಡೆ ಸಾಧಿಸಿದೆ. ವಿಶ್ವ ಟೆಸ್ಟ್ ಚಾಂಪಿಯನ್ ಆಗಿರುವ ದಕ್ಷಿಣ ಆಫ್ರಿಕಾ ತಂಡ ಇದೀಗ 15 ವರ್ಷಗಳ ನಂತರ ಭಾರತದಲ್ಲಿ ನಡೆದ ಟೆಸ್ಟ್‌ನಲ್ಲಿ ಟೀಂ ಇಂಡಿಯಾವನ್ನ (Team India) ಸೋಲಿಸಿದಂತಾಗಿದೆ. ಇದನ್ನೂ ಓದಿ: IPL retentions 2026: ಯಾವ್ಯಾವ ತಂಡದಿಂದ ಯಾವ ಆಟಗಾರರು ಔಟ್ – ಇಲ್ಲಿದೆ ಫುಲ್ ಲಿಸ್ಟ್

ಈಡನ್ ಗಾರ್ಡನ್‌ನಲ್ಲಿ 3ನೇ ದಿನದಾಟದಲ್ಲಿ ತನ್ನ 2ನೇ ಇನ್ನಿಂಗ್ಸ್ ಮುಕ್ತಾಯಕ್ಕೆ ದಕ್ಷಿಣ ಆಫ್ರಿಕಾ 153 ರನ್ ಗಳಿಸಿ, ಭಾರತದ ಗೆಲುವಿಗೆ 124 ರನ್‌ಗಳ ಗುರಿ ನೀಡಿತ್ತು. ನಾಯಕ ಟೆಂಬ ಬವುಮಾ ಅರ್ಧಶತಕ ಗಳಿಸುವ ಮೂಲಕ ತಂಡಕ್ಕೆ ನೆರವಾದರು. ಸುಲಭ ಗುರಿ ಪಡೆದಿದ್ದ ಭಾರತ ತಂಡ 93 ರನ್ ಗಳಿಗೆ ಸರ್ವಪತನ ಕಂಡಿತು. ವಾಷಿಂಗ್ಟನ್ ಸುಂದರ್ 31 ರನ್ ಮತ್ತು ಅಕ್ಷರ್ ಪಟೇಲ್ 26 ರನ್ ಹೊರತುಪಡಿಸಿದ್ರೆ ಉಳಿದ ಅಗ್ರಕ್ರಮಾಂದ ಬ್ಯಾಟರ್‌ಗಳು ಕಳಪೆ ಪ್ರದರ್ಶನ ನೀಡಿದರು. ನಾಯಕ ಶುಭಮನ್ ಗಿಲ್ ಅವರು ಗಾಯಾಳುವಾಗಿ ನಿರ್ಣಾಯಕ ಹಂತದಲ್ಲಿ ಹೊರಗುಳಿದಿದ್ದು ಭಾರತದ ಪಾಲಿಗೆ ಮುಳುವಾಯಿತು. ಇದನ್ನೂ ಓದಿ: ಆಸ್ಪತ್ರೆಗೆ ದಾಖಲು; ಆಫ್ರಿಕಾ ವಿರುದ್ಧದ ಟೆಸ್ಟ್ ಮಧ್ಯೆ ಟೀಂ ಇಂಡಿಯಾಕ್ಕೆ ಶಾಕ್ ಕೊಟ್ಟ ಕ್ಯಾಪ್ಟನ್ ಗಿಲ್!

ಸುಲಭ ಗುರಿ ಪಡೆದಿದ್ದ ಭಾರತ ತಂಡಕ್ಕೆ ದಕ್ಷಿಣ ಆಫ್ರಿಕಾ ತಂಡದ ಮಧ್ಯಮ ವೇಗಿ ಮಾರ್ಕೋ ಯಾನ್ಸನ್ ಆರಂಭದಲ್ಲೇ ಡಬಲ್ ಆಘಾತ ನೀಡಿದರು. ಯಶಸ್ವಿ ಜೈಸ್ವಾಲ್ ಖಾತೆ ತೆರೆಯುವ ಮುನ್ನವೇ ಪೆಲಿವಿಯನ್‌ಗೆ ದಾರಿ ತೋರಿದ್ರು. ಇದನ್ನೂ ಓದಿ: IPL 2026: ಇಬ್ಬರು ಕನ್ನಡಿಗರು ಸೇರಿ 8 ಆಟಗಾರರಿಗೆ RCB ಗೇಟ್‌ಪಾಸ್
ಇನ್ನು ಅನುಭವಿ ಕೆ.ಎಲ್ ರಾಹುಲ್ (KL Rahul) ಅವರೂ ಕೇವಲ 1 ರನ್‌ಗೆ ಔಟಾದರು. ಆ ಬಳಿಕ ಸೈಮನ್ ಹಾರ್ಮರ್, ಕೇಶವ್ ಮಹಾರಾಜ್ ಮತ್ತು ಏಡೆನ್ ಮಾರ್ಕ್ರಂ ತಮ್ಮ ಸ್ಪಿನ್ ಮೋಡಿಯಿಂದ ಟೀಂ ಇಂಡಿಯಾವನ್ನು ಖೆಡ್ಡಕ್ಕೆ ಕೆಡವಿದರು. ಆಫ್ರಿಕಾ ಪರ ಸೈಮನ್ ಹಾರ್ಮರ್ 4 ವಿಕೆಟ್ ಕಿತ್ತರೆ, ಕೇಶವ್ ಮಹಾರಾಜ್, ಮಾರ್ಕೊ ಜಾನ್ಸೆನ್ ತಲಾ 2 ವಿಕೆಟ್ ಕಿತ್ತರೆ ಮತ್ತು ಏಡೆನ್ ಮಾರ್ಕ್ರಂ 1 ವಿಕೆಟ್ ಪಡೆದರು.

