ಸೆಂಚೂರಿಯನ್: ಇಂಗ್ಲೆಂಡ್ ತಂಡದ ಆಲ್‍ರೌಂಡರ್, ಉಪನಾಯಕ ಬೆನ್ ಸ್ಟೋಕ್ಸ್ ಬಿರುಸಿನಿಂದ ಮಾತನಾಡುವುದು ಸ್ವಲ್ಪ ಹೆಚ್ಚು. ಈ ಹಿಂದೆಯೂ ಕೂಡ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಕೂಡ ಕೇಳಿ ಬಂದ ಹಿನ್ನೆಲೆಯಲ್ಲಿ ತಂಡದಿಂದ ಕೆಲ ಸಮಯ ದೂರ ಉಳಿದಿದ್ದರು. ಮೈದಾನದಲ್ಲೂ ಎದುರಾಳಿ ಆಟಗಾರನನ್ನು ಸ್ಲೆಡ್ಜಿಂಗ್ ಮಾಡುವುದರಲ್ಲೂ ಸ್ಟೋಕ್ಸ್ ಮುಂದು. ಈಗ ಬ್ರಾಡ್ ಜೊತೆ ವಾಗ್ವಾದ ಮಾಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯಾವ ಕಾರಣದಿಂದ ಇಬ್ಬರು ಆಟಗಾರರು ವಾಗ್ವಾದಕ್ಕೆ ಮುಂದಾಗಿದ್ದಾರೆ ಎಂಬುವುದು ಮಾತ್ರ ಈವರೆಗೂ ಸ್ವಷ್ಟವಾಗಿಲ್ಲ. ಆದರೆ ತಂಡದ ಆಟಗಾರರ ನಡುವೆಯೇ ಇಬ್ಬರು ಆಟಗಾರರು ವಾಗ್ವಾದ ನಡೆಸಿದ್ದಾರೆ. ಈ ವೇಳೆ ಜೋ ರೂಟ್, ಜೋಸ್ ಬಟ್ಲರ್ ನಡುವೆ ಬಂದು ಇಬ್ಬರನ್ನು ಸಮಾಧಾನ ಪಡಿಸಿದ್ದಾರೆ.
Advertisement
What did I miss? pic.twitter.com/0xWqxQv5Gw
— Kourageous ✨✨✨ (@AN_EVILSOUL) December 28, 2019
Advertisement
ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ 3ನೇ ದಿನದಾಟದ ಬ್ರೇಕ್ ವೇಳೆ ಘಟನೆ ನಡೆದಿದೆ. ಸ್ಟೋಕ್ಸ್‍ಗೆ ಬ್ರಾಡ್ ಏನೋ ಹೇಳುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ. ಘಟನೆಗೂ ಮುನ್ನ ಸ್ಟೋಕ್ಸ್ ಏನೋ ಅಂದ ಕಾರಣ ಬ್ರಾಡ್ ವಾಗ್ವಾದಕ್ಕಿಳಿದರು ಎನ್ನಲಾಗಿದೆ. ಈ ಘಟನೆಯೊಂದಿಗೆ ಇಂಗ್ಲೆಂಡ್ ತಂಡದ ಆಟಗಾರರ ನಡುವೆ ಶೀತಲ ಸಮರ ನಡೆಯುತ್ತಿದೆಯೇ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ.
Advertisement
ಆಟಗಾರರು ಮೈದಾನದಲ್ಲೇ ವಾಗ್ವಾದಕ್ಕೆ ಇಳಿದಿರುವ ಕುರಿತು ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಉತ್ತಮ ಬೆಳವಣಿಗೆಯಲ್ಲ ಎಂದಿದ್ದಾರೆ. ಅಲ್ಲದೇ ಯಾವುದೇ ಅತೃಪ್ತಿ ಇದ್ದರೆ ಆಟಗಾರರು ಕುಳಿತು ಬಗೆಹರಿಸಿಕೊಳ್ಳಬೇಕಿದೆ ಎಂಬ ಸಲಹೆಯನ್ನು ನೀಡಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳು ಈ ಕುರಿತು ಪ್ರಶ್ನಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.