Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕಳಪೆ ಬೌಲಿಂಗ್‌ – ಭಾರತಕ್ಕೆ ಹೀನಾಯ ಸೋಲು, ಆಫ್ರಿಕಾಗೆ 51 ರನ್‌ಗಳ ಭರ್ಜರಿ ಗೆಲುವು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Sports | Cricket | ಕಳಪೆ ಬೌಲಿಂಗ್‌ – ಭಾರತಕ್ಕೆ ಹೀನಾಯ ಸೋಲು, ಆಫ್ರಿಕಾಗೆ 51 ರನ್‌ಗಳ ಭರ್ಜರಿ ಗೆಲುವು

Cricket

ಕಳಪೆ ಬೌಲಿಂಗ್‌ – ಭಾರತಕ್ಕೆ ಹೀನಾಯ ಸೋಲು, ಆಫ್ರಿಕಾಗೆ 51 ರನ್‌ಗಳ ಭರ್ಜರಿ ಗೆಲುವು

Public TV
Last updated: December 11, 2025 11:07 pm
Public TV
Share
3 Min Read
Tilak Varma
SHARE

ಚಂಡೀಗಢ: ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯ, ಬೌಲರ್‌ಗಳ ಹೀನಾಯ ಪ್ರದರ್ಶನದಿಂದ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ ಭಾರತ ಹೀನಾಯ ಸೋಲು ಕಂಡಿದೆ. ಮೊದಲ ಪಂದ್ಯದಲ್ಲಿ 101 ರನ್‌ಗಳ ಭರ್ಜರಿ ಜಯ ಸಾಧಿಸಿದ್ದ ಭಾರತ, 2ನೇ ಪಂದ್ಯದಲ್ಲಿ 51 ರನ್‌ಗಳ ಸೋಲು ಕಂಡಿದೆ. ಈ ಮೂಲಕ ಸರಣಿ 1-1ರಲ್ಲಿ ಸಮಬಲಗೊಂಡಿದೆ.

ಇಲ್ಲಿನ ಮಲ್ಲನ್‌ಪುರ್‌ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾ ತಂಡ ಕ್ವಿಂಟನ್‌ ಡಿಕಾಕ್‌ ಅವರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ 20 ಓವರ್‌ಗಳಲ್ಲಿ ಕೇವಲ 4 ವಿಕೆಟ್‌ ನಷ್ಟಕ್ಕೆ 213 ರನ್‌ ಕಲೆಹಾಕಿತು. 214 ರನ್‌ಗಳ ಬೃಹತ್‌ ಗುರಿ ಪಡೆದ ಭಾರತ 19.1 ಓವರ್‌ಗಳಲ್ಲಿ 162 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು ಸೋಲೊಪ್ಪಿಕೊಂಡಿತು.

South Africa

ಆರಂಭದಲ್ಲೇ ಆಘಾತ
ಬೃಹತ್‌ ಚೇಸಿಂಗ್‌ ಪಡೆದ ಭಾರತ ಆರಂಭದಲ್ಲೇ ಆಘಾತಕ್ಕೆ ಒಳಗಾಯಿತು. ಉಪನಾಯಕ ಶುಭಮನ್‌ ಗಿಲ್‌ ಮೊದಲ ಓವರ್‌ನಲ್ಲಿ ತನ್ನ ಪಾಲಿನ ಮೊದಲ ಎಸೆತಕ್ಕೆ ವಿಕೆಟ್‌ ಒಪ್ಪಿಸಿ ಹೊರನಡೆದರು. ಇನ್ನೂ ಸ್ಫೋಟಕ ಪ್ರದರ್ಶನಕ್ಕಿಳಿದ ಅಭಿಷೇಕ್‌ ಶರ್ಮಾ ಕೂಡ 8 ಎಸೆತಗಳಲ್ಲಿ 17 ರನ್‌ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಈ ಬೆನ್ನಲ್ಲೇ ನಾಯಕ ಸೂರ್ಯಕುಮಾರ್‌ ಯಾದವ್‌ ಕೇವಲ 5 ರನ್‌ ಗಳಿಸಿ ಔಟಾದರು. ಹೀಗಾಗ ಪವರ್‌ ಪ್ಲೇನಲ್ಲೇ ಭಾರತ ಪ್ರಮುಖ ಮೂರು ವಿಕೆಟ್‌ ಕಳೆದುಕೊಂಡಿತ್ತು. ಆ ಬಳಿಕ ನಿಧಾನಗತಿಯಲ್ಲಿ ರನ್‌ ಕಲೆಹಾಕುತ್ತಿದ್ದ ಅಕ್ಷರ್‌ ಪಟೇಲ್‌ ಕೂಡ ಕ್ಯಾಚ್‌ ನೀಡಿ ಔಟಾದರು.

ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್‌ ಪಾಂಡ್ಯ- ತಿಲಕ್‌ ವರ್ಮಾ ಜೋಡಿ ಸಣ್ಣ ಪ್ರಮಾಣದ ಜೊತೆಯಾಟ ನೀಡಿದರು. ಮೊದಲ 10 ಓವರ್‌ಗಳಲ್ಲಿನ ಹಿನ್ನಡೆಯಿಂದ ಭಾರತ ಹೀನಾಯ ಸೋಲಿಗೆ ತುತ್ತಾಯಿತು. ಟೀಂ ಇಂಡಿಯಾ ಪರ ಏಕಾಂಗಿ ಹೋರಾಟ ನಡೆಸಿದ ತಿಲಕ್‌ ವರ್ಮಾ 34 ಎಸೆತಗಳಲ್ಲಿ 62 ರನ್‌ ಗಳಿಸಿದ್ರೆ, ಹಾರ್ದಿಕ್‌ ಪಾಂಡ್ಯ 20 ರನ್‌, ಜಿತೇಶ್‌ ಶರ್ಮಾ 27 ರನ್‌, ಅಕ್ಷರ್‌ ಪಡೇಲ್‌ 21 ರನ್‌ ಕೊಡುಗೆ ನೀಡಿದರು.

Ind vs SA

ಕೆಟ್ಟ ದಾಖಲೆ ಬರೆದ ಅರ್ಷ್‌ದೀಪ್‌
ಟಾಸ್‌ ಗೆದ್ದು ಫೀಲ್ಡಿಗಿಳಿದ ಭಾರತ ನಿರೀಕ್ಷೆಗೆ ತಕ್ಕಂತೆ ಬೌಲಿಂಗ್ ನಡೆಸಲೇ ಇಲ್ಲ. ಅದರಲ್ಲೂ ಟಿ20 ಕ್ರಿಕೆಟ್‌ನ ಸ್ಪೆಷಲಿಸ್ಟ್ ಎಂದೇ ಖ್ಯಾತರಾಗಿರುವ ಅರ್ಷ್‌ದೀಪ್‌ ಸಿಂಗ್ ಬೇಕಾಬಿಟ್ಟಿ ವೈಡ್ ಎಸೆದು ತೀವ್ರ ಮುಜುಗರಕ್ಕೀಡಾದರು. ಸಾಮಾನ್ಯವಾಗಿ ತಮ್ಮ ನಿಖರವಾದ ಯಾರ್ಕರ್‌ ಮತ್ತು ಸ್ವಿಂಗ್ ಬೌಲಿಂಗ್‌ಗೆ ಹೆಸರಾಗಿರುವ ಅವರು ಇನಿಂಗ್ಸ್‌ನ 11ನೇ ಓವರ್‌ನಲ್ಲಿ ನಿಯಂತ್ರಣ ಕಳೆದುಕೊಂಡಂತೆ ಕಂಡುಬಂದರು. ಅವರು ಎಸೆದ 11ನೇ ಓವರ್ ನಲ್ಲಿ 18 ರನ್ ಹರಿದು ಬಂತು. 11ನೇ ಓವರ್ (10.1) ಎಸೆಯಲು ಬಂದ ಅರ್ಶದೀಪ್ ಸಿಂಗ್ ಅವರ ಮೊದಲ ಎಸೆತವನ್ನೇ ಕ್ವಿಂಟನ್ ಡಿ ಕಾಕ್ ಅವರು ಸೈಟ್‌ ಸ್ಕ್ರೀನ್‌ಗೆ ಅಪ್ಪಳಿಸುವಂತೆ ಸಿಕ್ಸರ್ ಬಾರಿಸಿದರು. ಈ ಹೊಡೆತದ ನಂತರ ಬೌಲರ್ ಅರ್ಷ್‌ದೀಪ್‌ ಸಂಪೂರ್ಣ ಒತ್ತಡಕ್ಕೆ ಒಳಗಾದಂತೆ ಕಂಡುಬಂದರು. ಇದಾದ ಬಳಿಕ ನಡೆದದ್ದು ಮಾತ್ರ ಮೈದಾನದಲ್ಲಿದ್ದವರನ್ನ ಅಚ್ಚರಿಗೆ ತಳ್ಳಿತು. ಎರಡನೇ ಎಸೆತದಿಂದಲೇ ಅರ್ಷ್‌ದೀಪ್ ಲಯ ತಪ್ಪಿದರು. ಆಫ್‌ ಸ್ಟಂಪ್‌ಗಿಂತ ತೀರಾ ಆಚೆಗೆ ಚೆಂಡನ್ನು ಎಸೆಯುವ ಮೂಲಕ ಸತತ ವೈಡ್‌ಗಳನ್ನು ಎದುರಾಳಿ ತಂಡಕ್ಕೆ ಕೊಡುಗೆಯಾಗಿ ನೀಡಿದರು. ಇದು ಎಷ್ಟರ ಮಟ್ಟಿಗೆ ಮುಂದುವರಿಯಿತು ಎಂದರೆ 3ನೇ ಎಸೆತವನ್ನು ಪೂರ್ಣಗೊಳಿಸಲು ಅವರು ಬರೋಬ್ಬರಿ 5 ಬಾರಿ ಬೌಲಿಂಗ್ ಮಾಡಬೇಕಾಯಿತು.
‌
ಆಫ್‌ ಸೈಡ್‌ನಲ್ಲಿ ವೈಡ್ ಯಾರ್ಕರ್ ಹಾಕಲು ಪ್ರಯತ್ನಿಸಿ ವಿಫಲರಾದ ಸಿಂಗ್‌, ಸತತವಾಗಿ ವೈಡ್ ಲೈನ್ ದಾಟಿದರು. ಇದನ್ನು ಕಂಡ ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಕೂಡ ಗಂಭೀರವಾಗಿ ತಲೆಕೆಡಿಸಿಕೊಂಡಂತೆ ಕಂಡುಬಂದರು. ಅಂತಿಮವಾಗಿ 10.6ನೇ ಎಸೆತದಲ್ಲಿಯೂ ಲೆಗ್‌ ಸೈಡ್‌ಗೆ ವೈಡ್ ಹಾಕುವ ಮೂಲಕ, ಒಂದೇ ಓವರ್‌ನಲ್ಲಿ ಒಟ್ಟು 7 ವೈಡ್‌ಗಳನ್ನ ಎಸೆದರು.

Suryakumar Yadav

22 ರನ್‌ ಎಕ್ಸ್ಟ್ರಾ
ಭಾರತ ತಂಡ ಇತರೆ ರನ್ ಗಳ ರೂಪದಲ್ಲಿ 22 ರನ್ ಬಿಟ್ಟುಕೊಟ್ಟಿತು. ಅದರಲ್ಲಿ ಒಂದು ಬೈ, 5 ಲೈಗ್ ಬೈ, 16 ವೈಡ್ ಗಳಿದ್ದವು.

ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾ ಪರ ಕ್ವಿಂಟನ್‌ ಡಿಕಾಕ್‌ ಸ್ಫೋಟಕ 90 ರನ್‌ (46 ಎಸೆತ, 7 ಸಿಕ್ಸ್‌, 5 ಬೌಂಡರಿ), ಡೊನಿವಾನ್‌ ಫೆರೇರಾ ಸ್ಫೋಟಕ 30 ರನ್‌ (16 ಎಸೆತ, 3 ಸಿಕ್ಸ್‌, 1 ಬೌಂಡರಿ), ಏಡನ್‌ ಮಾರ್ಕ್ರಂ 29 ರನ್‌, ಬ್ರೇವಿಸ್ 14 ರನ್‌‌, ರೀಝಾ ಹೆನ್‌ಡ್ರಿಕ್ಸ್‌ 8 ರನ್‌ ಗಳಿಸಿದ್ರೆ, ಡೇವಿಡ್‌ ಮಿಲ್ಲರ್‌ ಅಜೇಯ 20 ರನ್‌ ಗಳಿಸಿದರು.

TAGGED:Aiden MarkramQuinton De KockShubman Gillsouth africaSuryakumar Yadavt20 cricketTeam india
Share This Article
Facebook Whatsapp Whatsapp Telegram

Cinema news

Monalisa
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಈಗ ಗರ್ಭಿಣಿ
Cinema Latest Main Post National
Ranya Rao
ಇಂದಿಗೆ ಕಾಫಿಫೋಸಾ ಅವಧಿ ಅಂತ್ಯ – ಜೈಲಿನಿಂದ ರನ್ಯಾರಾವ್‌ ಬಿಡುಗಡೆ
Cinema Crime Karnataka Latest Main Post
ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories
Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories

You Might Also Like

Wild elephant attacks three ETF staff in Hassan Beluru
Districts

ಮೂವರು ಇಟಿಎಫ್‌ ಸಿಬ್ಬಂದಿ ಮೇಲೆ ಕಾಡಾನೆ ದಾಳಿ – ಗಾರ್ಡ್‌ ಸ್ಥಿತಿ ಗಂಭೀರ

Public TV
By Public TV
46 minutes ago
Donald Trump Angry
Latest

ಭಾರತ, ಚೀನಾ ನರಕದ ಕೂಪಗಳು| ಲ್ಯಾಪ್‌ಟಾಪ್ ಹೊಂದಿರುವ ದರೋಡೆಕೋರರು: ಟ್ರಂಪ್‌ ಕೆಂಡಾಮಂಡಲ

Public TV
By Public TV
47 minutes ago
Arvind Kejriwal 4
Court

ಕೋರ್ಟ್‌ ವಿಚಾರಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್‌ – ಅರವಿಂದ್ ಕೇಜ್ರಿವಾಲ್‌ಗೆ ನೋಟಿಸ್

Public TV
By Public TV
48 minutes ago
PETROL
Latest

ಪೆಟ್ರೋಲ್, ಡೀಸೆಲ್ ದರ ಏರಿಕೆಯ ಚಿಂತನೆ ಇಲ್ಲ – ವದಂತಿಗಳಿಗೆ ಬ್ರೇಕ್ ಹಾಕಿದ ಕೇಂದ್ರ ಸರ್ಕಾರ

Public TV
By Public TV
1 hour ago
bad touch for young women 2 arrested in bengaluru
Bengaluru City

ಬೈಕ್‌ಲ್ಲಿ ಬಂದು ಯುವತಿಯರಿಗೆ ಬ್ಯಾಡ್ ಟಚ್ – ಬೀದಿ ಕಾಮಣ್ಣರು ಅಂದರ್‌

Public TV
By Public TV
1 hour ago
thaad
Latest

ಅಮೆರಿಕ ಬಳಿಯಿದ್ದ 50% ಕ್ಷಿಪಣಿಗಳು ಖಾಲಿ – ಯುದ್ಧ ಮುಂದುವರಿದರೆ ʻದೊಡಣ್ಣʼನಿಗೆ ಆಪತ್ತು!

Public TV
By Public TV
1 hour ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?