ಜೋಹಾನ್ಸ್‌ಬರ್ಗ್: ಮ್ಯೂಸಿಕ್ ವೀಡಿಯೋ ಶೂಟ್ ವೇಳೆ 8 ಮಹಿಳಾ ರೂಪದರ್ಶಿಗಳ ಸಾಮೂಹಿಕ ಅತ್ಯಾಚಾರವಾಗಿರುವ ಆಘಾತಕಾರಿ ಪ್ರಕರಣ ದಕ್ಷಿಣ ಆಫ್ರಿಕಾದಲ್ಲಿ ವರದಿಯಾಗಿದೆ.
ಪೊಲೀಸ್ ಸಚಿವ ಭೆಕಿ ಸೆಲೆ ಈ ಕುರಿತು ಪ್ರತಿಕ್ರಿಯೆ ಕೊಟ್ಟಿದ್ದು, ಬಂದೂಕುಧಾರಿಗಳ ತಂಡವೊಂದು ಮ್ಯೂಸಿಕ್ ವೀಡಿಯೋ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಿದೆ. ಈ ವೇಳೆ ಅಲ್ಲಿದ್ದ ಎಂಟು ರೂಪದರ್ಶಿಗಳನ್ನು ಬಲವಂತವಾಗಿ ಎಳೆದುಕೊಂಡು ಹೋಗಿದ್ದಾರೆ. ಜೋಹಾನ್ಸ್‌ಬರ್ಗ್‍ನ ಪಶ್ಚಿಮದಲ್ಲಿರುವ ಸಣ್ಣ ಪಟ್ಟಣವಾದ ಕ್ರುಗರ್ಸ್‍ಡಾರ್ಪ್‍ನ ಹೊರವಲಯದಲ್ಲಿ ಅತ್ಯಾಚಾರ ಮಾಡಿದ್ದಾರೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಫೈನಲ್ ತಲುಪಿದ ಕನ್ನಡಿಗ, ಈಜುಪಟು ಶ್ರೀಹರಿ ನಟರಾಜ್
Advertisement
Advertisement
ದಾಳಿಗೆ ಸಂಬಂಧಿಸಿದಂತೆ ಇದುವರೆಗೆ ಸುಮಾರು 20 ಶಂಕಿತರಲ್ಲಿ, ಮೂವರನ್ನು ಭದ್ರತಾ ಪಡೆ ಬಂಧಿಸಿದೆ. ಆರೋಪಿಗಳು ವಿದೇಶಿ ಪ್ರಜೆಗಳಂತೆ ಕಾಣುತ್ತಿದ್ದು, ಮೂಲತಃ ಅವರನ್ನು ‘ಜಮಾಗಳು’ ಎಂದು ಕರೆಯಲಾಗುತ್ತೆ. ಇವರು ಅಕ್ರಮವಾಗಿ ಗಣಿಗಳನ್ನು ಬಳಸಿಕೊಳ್ಳುವ ಜನರು ಎಂದು ತಿಳಿಸಿದ್ದಾರೆ.
Advertisement
Advertisement
ನಡೆದಿದ್ದೇನು?
ಶೂಟ್‍ಗಾಗಿ ಸಿಬ್ಬಂದಿ ಸೆಟ್ ಸಿದ್ಧಪಡಿಸುವಾಗ ದಿಢೀರ್ ಎಂದು ಗ್ಯಾಂಗ್‍ವೊಂದು ದಾಳಿ ಮಾಡಿದೆ. ಈ ವೇಳೆ ಶೂಟ್‍ಗೆಂದು ಬಂದಿದ್ದ ಮಹಿಳಾ ರೂಪದರ್ಶಿಯರನ್ನು ಎಳೆದುಕೊಂಡು ಹೋಗಿದ್ದಾರೆ. ಒಬ್ಬ ಮಹಿಳೆಯನ್ನು 10 ಪುರುಷರು ಅತ್ಯಾಚಾರ ಮಾಡಿದ್ದು, ಉಳಿದ ಮಹಿಳೆಯರನ್ನು 4 ಕ್ಕಿಂತ ಹೆಚ್ಚು ಪುರುಷರು ಅತ್ಯಾಚಾರ ಮಾಡಿದ್ದಾರೆ. ಅಲ್ಲದೇ ಈ ವೇಳೆ ಸೇಟ್‍ನಲ್ಲಿದ್ದ ದುಬಾರಿ ವಸ್ತುಗಳನ್ನು ದೋಚಿಕೊಂಡು ಹೋಗಿದ್ದಾರೆ ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾನೆ. ಇದನ್ನೂ ಓದಿ: ಅಂಬುಲೆನ್ಸ್ ಟಯರ್ ಬದಲಿಸಲು ಸಹಾಯ ಮಾಡಿದ ರೇಣುಕಾಚಾರ್ಯ