23 ವರ್ಷಗಳ ಬಳಿಕ ಗೆದ್ದು ಪಾಕ್‌ ವಿರುದ್ಧ ಸೇಡು ತೀರಿಸಿಕೊಂಡ ಆಫ್ರಿಕಾ – ಸೆಮಿಫೈನಲ್‌ ರೇಸ್‌ನಿಂದ ಪಾಕ್‌ ಔಟ್‌

Public TV
4 Min Read
Pak vs SA 4

ಚೆನ್ನೈ: ಜಿದ್ದಾಜಿದ್ದಿನಿಂದ ಕಣದಲ್ಲಿ ವಿಶ್ವ ಕಪ್​ನ 26ನೇ ಪಂದ್ಯದಲ್ಲಿ (ICC World Cup 2023) ದಕ್ಷಿಣ ಆಫ್ರಿಕಾ ತಂಡವು ಪಾಕಿಸ್ತಾನದ ವಿರುದ್ಧ 1 ವಿಕೆಟ್​ ರೋಚಕ ಜಯ ಸಾಧಿಸಿದೆ. ಈ ಮೂಲಕ ಬರೋಬ್ಬರಿ 23 ವರ್ಷಗಳ ಬಳಿಕ ICC ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿ ಸೇಡು ತೀರಿಸಿಕೊಂಡಿದೆ. ಅಲ್ಲದೇ ಅಂಕಪಟ್ಟಿಯಲ್ಲಿ ಭಾರತವನ್ನೂ ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದೆ.

ಇಲ್ಲಿನ ಚೇಪಾಕ್‌ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಪಾಕ್‌ 46.4 ಓವರ್‌ಗಳಲ್ಲಿ 270 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ತಂಡ 47.2 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 271 ರನ್‌ ಗಳಿಸಿ ರೋಚಕ ಜಯ ಸಾಧಿಸಿತು. 6 ಪಂದ್ಯಗಳಲ್ಲಿ ಕೇವಲ 4ರಲ್ಲಿ ಗೆಲುವು ಸಾಧಿಸಿರುವ ಪಾಕ್‌ ಸೆಮಿಫೈನಲ್‌ ರೇಸ್‌ನಿಂದ ಹೊರಬಿದ್ದಿತು. 1979, 1983, 1987 ಮತ್ತು 2011ರಲ್ಲಿ 4 ಬಾರಿ ಸೆಮಿ ಫೈನಲ್‌, 1996 ಮತ್ತು 2015ರಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದ ಪಾಕಿಸ್ತಾನ ತಂಡ ಬೌಲಿಂಗ್‌ನಲ್ಲಿ ಚೇತರಿಕೆ ಕಂಡರೂ ಕಳಪೆ ಬ್ಯಾಟಿಂಗ್‌ನಿಂದ ಸೋತು ಸೆಮಿಸ್‌ ರೇಸ್‌ನಿಂದ ಹೊರಬಿದ್ದಿತು.

Pak vs SA

37 ಓವರ್‌ಗಳಲ್ಲಿ 235 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ 41ನೇ ಓವರ್‌ನಲ್ಲಿ 251 ರನ್‌ಗಳಿಗೆ 8 ವಿಕೆಟ್‌ ಕಳೆದುಕೊಂಡಿತ್ತು. ಶಾಹೀನ್‌ ಶಾ ಅಫ್ರಿದಿ (Shaheen Shah Afridi) ಮಾರಕ ದಾಳಿಗೆ ಪ್ರಮುಖ ವಿಕೆಟ್‌ಗಳು ಉರುಳಿದ್ದರಿಂದ ಪಾಕ್‌ ತಂಡದಲ್ಲಿ ಗೆಲುವಿನ ಭರವಸೆ ಚಿಮ್ಮಿತು. ಕೊನೆಯ 36 ಎಸೆತಗಳಲ್ಲಿ 15 ರನ್‌ ಬೇಕಿದ್ದಾಗ ಮೊಹಮ್ಮದ್ ವಾಸಿಂ ತಮ್ಮ 9ನೇ ಓವರ್‌ನಲ್ಲಿ 4 ರನ್‌ ಬಿಟ್ಟುಕೊಟ್ಟರು. ಹ್ಯಾರಿಸ್‌ ರೌಫ್‌ ಎಸೆದ 10ನೇ ಓವರ್‌ನಲ್ಲಿ 3ನೇ ಎಸೆತದಲ್ಲಿ ಕ್ಲೀನ್‌ ಕ್ಯಾಚ್‌ ಪಡೆಯುವ ಮೂಲಕ ಗೆಲುವಿನ ಭರವಸೆ ಮತ್ತಷ್ಟು ಇಮ್ಮಡಿಗೊಳಿಸಿದ್ದರು. ನಂತ್ರ ತಮ್ಮ 7ನೇ ಓವರ್‌ ಬೌಲಿಂಗ್‌ ಮಾಡಿದ ಮೊಹಮ್ಮದ್‌ ನವಾಜ್‌ 2ನೇ ಎಸೆತದಲ್ಲಿ ಬೌಂಡರಿ ಬಿಟ್ಟುಕೊಡುವ ಮೂಲಕ ಪಾಕ್‌ ವಿರೋಚಿತ ಸೋಲಿಗೆ ಕಾರಣವಾದರು.

Pak vs SA 2

ಚೇಸಿಂಗ್‌ ಆರಂಭಿಸಿದ ದಕ್ಷಿಣ ಆಫ್ರಿಕಾ ಪರ ಆರಂಭಿಕರಾದ ಕ್ವಿಂಟನ್‌ ಡಿಕಾಕ್‌ (Quinton de Kock) ನಾಯಕ ತೆಂಬಾ ಬವುಮಾ ಸ್ಫೋಟಕ ಇನ್ನಿಂಗ್ಸ್‌ ಕಟ್ಟಲು ಪ್ರಯತ್ನಿಸಿದ್ದರು. ಕೇವಲ 14 ಎಸೆತಗಳಲ್ಲಿ 24 ರನ್‌ ಚಚ್ಚಿದ್ದ ಡಿಕಾಕ್‌ ಸಿಕ್ಸರ್‌ ಸಿಡಿಸುವ ಬರದಲ್ಲಿ ಕ್ಯಾಚ್‌ ನೀಡಿ ಔಟಾದರು. ಈ ಬೆನ್ನಲ್ಲೇ ನಾಯಕ ತೆಂಬಾ ಬವುಮಾ 28 ರನ್‌, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ 21 ರನ್‌ ಗಳಿಸಿ ಔಟಾದರು. ಆದ್ರೆ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಏಡನ್‌ ಮಾರ್ಕ್ರಮ್‌ (Aiden Markram) ಜವಾಬ್ದಾರಿಯುತ ಬ್ಯಾಟಿಂಗ್‌ ಮಾಡಿದರು. ಕೊನೆಯವರೆಗೂ ಹೋರಾಡಿದ ಮಾರ್ಕ್ರಮ್‌ 93 ಎಸೆತಗಳಲ್ಲಿ 91 ರನ್‌ (3 ಸಿಕ್ಸರ್‌, 7 ಬೌಂಡರಿ) ಗಳಿಸಿ ಔಟಾದರು.

ಇತ್ತ ಮಾರ್ಕ್ರಮ್‌ ಔಟಾಗುತ್ತಿದಂತೆ ಒಂದೊಂದು ವಿಕೆಟ್‌ ಪತನಗೊಳ್ಳಲು ಶುರುವಾಯಿತು. ಇನ್ನೇನು ಗೆಲುವು ಪಾಕ್‌ ತಂಡದ್ದೇ ಎನ್ನುವಷ್ಟರಲ್ಲಿ ವಿರೋಚಿತ ಸೋಲು ಅನುಭವಿಸಬೇಕಾಯಿತು. ಹೆನ್ರಿಚ್‌ ಕ್ಲಾಸೆನ್‌ 12 ರನ್‌, ಡೇವಿಡ್‌ ಮಿಲ್ಲರ್‌ 29 ರನ್‌, ಮಾರ್ಕೊ ಜಾನ್ಸೆನ್‌ 20 ರನ್‌, ಜೆರಾಲ್ಡ್ ಕೋಟ್ಜಿ 10 ರನ್‌ ಗಳಿಸಿದ್ರೆ, ಕೊನೆಯಲ್ಲಿ ಅಜೇಯ 7 ರನ್‌, ತಬ್ರೈಜ್ ಶಮ್ಸಿ ಅಜೇಯ 4 ರನ್‌ ಗಳಿಸುವ ಮೂಲಕ ತಂಡಕ್ಕೆ ಗೆಲುವು ತಂಡುಕೊಟ್ಟರು.

ಪಾಕಿಸ್ತಾನ ಪರ ಶಾಹೀನ್‌ ಶಾ ಅಫ್ರಿದಿ 3 ವಿಕೆಟ್‌ ಕಿತ್ತರೆ, ಹ್ಯಾರಿಸ್‌ ರೌಫ್‌, ಮೊಹಮ್ಮದ್‌ ವಸೀಮ್‌, ಉಸ್ಮಾ ಮಿರ್‌ ತಲಾ 2 ವಿಕೆಟ್‌ ಪಡೆದು ಮಿಂಚಿದರು.

Pakistan 7

ಬ್ಯಾಟಿಂಗ್​ನಲ್ಲಿ ಸಾಧಾರಣ ಪ್ರದರ್ಶನ ನೀಡಿದ ಪಾಕಿಸ್ತಾನ, ಆಫ್ರಿಕಾ ಬೌಲಿಂಗ್ ದಾಳಿಗೆ ನಡುಗಿತು. ಮೊದಲು ಬ್ಯಾಟಿಂಗ್​ ಮಾಡಿದ ಪಾಕ್​, ಆರಂಭದಲ್ಲೇ ಆಘಾತಕ್ಕೊಳಗಾಯಿತು. ಆರಂಭಿಕರಾದ ಇಮಾಮ್ ಉಲ್ ಹಕ್ 12 ರನ್‌, ಅಬ್ದುಲ್ಲಾ ಶಫೀಕ್ 9 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿ ನಿರಾಸೆ ಮೂಡಿಸಿದರು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಬಾಬರ್ ಆಜಂ (Babar Azam) ತಂಡಕ್ಕೆ ಆಸರೆಯಾದರು. ಬಾಬರ್‌ 65 ಎಸೆತಗಳಲ್ಲಿ 50 ರನ್‌ ಗಳಿಸಿ ಔಟಾಗುತ್ತಿದ್ದಂತೆ ಮೊಹಮ್ಮದ್‌ ರಿಜ್ವಾನ್‌ (Mohammad Rizwan) 31 ರನ್‌, ಇಫ್ತಿಕಾರ್‌ ಅಹ್ಮದ್‌ 21 ರನ್‌ಗಳಿಗೆ ವಿಕೆಟ್‌ ಒಪ್ಪಿಸಿ ಹೊರನಡೆದರು.

Pak vs SA 3

141ಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಪಾಕಿಸ್ತಾನಕ್ಕೆ ಸೌದ್ ಶಕೀಲ್ ಮತ್ತು ಶಾದಾಬ್ ಖಾನ್ ಅದ್ಭುತ ಜೊತೆಯಾಟ ನೀಡಿದರು. 71 ಎಸೆತಗಳಲ್ಲಿ ಈ ಜೋಡಿ 84 ರನ್‌ಗಳ ಜೊತೆಯಾಟ ನೀಡುವ ಮೂಲಕ 250 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾದರು. ಶಕೀಲ್‌ 52 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್‌ ಜೊತೆಗೆ 52 ರನ್‌ ಚಚ್ಚಿದರೆ, ಶಾದಾಬ್‌ 43 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು. ಆ ನಂತರ ಮೊಹಮ್ಮದ್‌ ನವಾಜ್‌ 24 ರನ್‌ಗಳ ಕೊಡುಗೆ ನೀಡಿದರು. ಅಂತಿಮವಾಗಿ ಪಾಕ್‌ ತಂಡ 270 ರನ್‌ಗಳಿಗೆ ಸರ್ವಪತನ ಕಂಡಿತು.

ಶಂಸಿ ಶೈನ್‌: ಸ್ಪಿನ್​ ಟ್ರ್ಯಾಕ್​ನಲ್ಲಿ ಮಿಂಚಿದ ತಬ್ರೈಜ್ ಶಂಸಿ, ಕ್ರೀಸ್​​ನಲ್ಲಿ ಸೆಟಲ್ ಆಗಿದ್ದ ಆಟಗಾರರಿಗೆ ಗೇಟ್ ಪಾಸ್ ಕೊಡಿಸುವಲ್ಲಿ ಯಶಸ್ವಿಯಾದರು. ತಬ್ರೈಜ್ ಶಂಸಿ 4 ವಿಕೆಟ್‌ ಪಡೆದರೆ, ಜಾನ್ಸನ್ 3 ವಿಕೆಟ್, ಜೆರಾಲ್ಡ್ ಕೊಯೆಟ್ಜಿ 2 ವಿಕೆಟ್, ಲುಂಗಿ ಎನ್​ಗಿಡಿ 1 ವಿಕೆಟ್ ಕಬಳಿಸಿ ಸಾಥ್ ನೀಡಿದರು.

Web Stories

Share This Article