Connect with us

Cricket

ದಿಢೀರ್ ವಿದಾಯ ಘೋಷಿಸಿದ ದಕ್ಷಿಣ ಆಫ್ರಿಕಾ ದಿಗ್ಗಜ ಆಟಗಾರ

Published

on

ಜೋಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಪರವಾಗಿ ಕಳೆದ ಮೂರು ದಿನಗಳ ಅವಧಿಯಲ್ಲಿ ಮತ್ತೊಬ್ಬ ದಿಗ್ಗಜ ಆಟಗಾರ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಘೋಷಿಸಿದ್ದಾರೆ. ಸೋಮವಾರ ಡೇಲ್ ಸ್ಟೇಯ್ನ್ ಟೆಸ್ಟ್ ಕ್ರಿಕೆಟ್‍ಗೆ ವಿದಾಯ ಹೇಳಿದ್ದರು. ಆ ಬಳಿಕ ಅನುಭವಿ ಆಟಗಾರ ಹಾಶೀಮ್ ಆಮ್ಲಾ ವಿದಾಯ ಘೋಷಿಸಿದ್ದಾರೆ.

ತಮ್ಮ ವಿಶೇಷ ಬ್ಯಾಟಿಂಗ್ ಶೈಲಿ ಮತ್ತು ಏಕಾಗ್ರತೆ 36 ವರ್ಷದ ಅಮ್ಲಾ ಅವರಿಗೆ ಕ್ರಿಕೆಟ್‍ನಲ್ಲಿ ವಿಶೇಷ ಸ್ಥಾನಮಾನ ಲಭಿಸುವಂತೆ ಮಾಡಿತ್ತು. ಸದ್ಯ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿರುವ ಅವರು ದೇಶಿಯ ಟೂರ್ನಿಗಳಲ್ಲಿ ಆಡುವುದಾಗಿ ಹೇಳಿದ್ದಾರೆ.

ಇತ್ತೀಚೆಗೆ ಫಾರ್ಮ್ ಸಮಸ್ಯೆ ಎದುರಿಸಿದ್ದ ಆಮ್ಲಾ ಅಂತಿಮ 29 ಟೆಸ್ಟ್ ಇನ್ನಿಂಗ್ಸ್ ಗಳಲ್ಲಿ 1 ಶತಕವನ್ನು ಗಳಿಸಿರಲಿಲ್ಲ. ಅಲ್ಲದೇ ವಿಶ್ವಕಪ್ ಕ್ರಿಕೆಟ್‍ನಲ್ಲೂ 7 ಇನ್ನಿಂಗ್ಸ್ ಗಳಿಂದ ಕೇವಲ 203 ರನ್ ಸಿಡಿಸಿದ್ದರು. ಇದುವರೆಗೂ 124 ಟೆಸ್ಟ್ ಆಡಿರುವ ಆಮ್ಲಾ 9,282 ರನ್ ಗಳಿಸಿದ್ದಾರೆ. ವಿಶೇಷ ಎಂದರೆ ದಕ್ಷಿಣ ಆಫ್ರಿಕಾ ಪರ ಟೆಸ್ಟ್ ಕ್ರಿಕೆಟ್‍ನಲ್ಲಿ ತ್ರಿಶತಕ ಸಿಡಿಸಿದ ಏಕೈಕಾ ಆಟಗಾರರಾಗಿದ್ದಾರೆ. ಅಜೇಯ 311 ರನ್ ಅವರ ಟೆಸ್ಟ್ ಕ್ರಿಕೆಟ್‍ನ ಅಧಿಕ ಸ್ಕೋರ್. 181 ಏಕದಿನ ಪಂದ್ಯಗಳಿಂದ 8,113 ರನ್ ಗಳಿಸಿದ್ದು, ಇದರಲ್ಲಿ 27 ಶತಕ, 39 ಅರ್ಧ ಶತಕಗಳು ಸೇರಿದೆ. ಉಳಿದಂತೆ 44 ಟಿ20 ಪಂದ್ಯಗಳನ್ನು ಆಡಿದ್ದು, 8 ಅರ್ಧ ಶತಕ ಗಳಿಸಿ 1,277 ರನ್ ಗಳಿಸಿದ್ದಾರೆ.

ಭಾರತದಲ್ಲಿ ನಡೆದ ಕ್ರಿಕೆಟ್ ಸರಣಿಗಳಲ್ಲಿ ಭಾಗವಹಿಸಿದ್ದ ಆಮ್ಲಾ 2004 ರಲ್ಲಿ ವಿಫಲವಾದರು 2008ರಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. 2010ರ ಸರಣಿಯಲ್ಲಿ ಆಡಿದ ಮೂರು ಇನ್ನಿಂಗ್ಸ್ ಗಳಲ್ಲಿ ಅಜೇಯ 253 ರನ್, 114 ರನ್, ಅಜೇಯ 123 ರನ್ ಗಳಿಸಿ ಸರಣಿಯನ್ನು ಸ್ಮರಣೀಯವಾಗಿಕೊಂಡಿದ್ದರು. ಅಲ್ಲದೇ 2015 ರಲ್ಲಿ ತಂಡದ ನಾಯಕತ್ವದೊಂದಿಗೆ ಆಗಮಿಸಿ ಸರಣಿಯನ್ನು 0-3 ಅಂತರದಲ್ಲಿ ಗೆದ್ದುಕೊಂಡಿದ್ದರು. ಅದರಲ್ಲೂ ದೆಹಲಿಯಲ್ಲಿ ನಡೆದಿದ್ದ, ಟೆಸ್ಟ್ ಪಂದ್ಯದಲ್ಲಿ ತಂಡದ ಗೆಲುವಿಗಾಗಿ 244 ಎಸೆತಗಳಲ್ಲಿ 25 ರನ್ ಗಳಿಸಿದ್ದರು ಮಾತ್ರ ಯಾರು ಮರೆಯಲು ಸಾಧ್ಯವಿಲ್ಲ. ಉಳಿದಂತೆ ಐಪಿಎಲ್ ನಲ್ಲೂ ಆಡಿದ್ದ ಆಮ್ಲಾ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಗಿದ್ದರು. ಉಳಿದಂತೆ ಕೆರಿಬಿಯನ್ ಪ್ರೀಮಿಯರ್ ಲೀಗ್ ನಲ್ಲಿಯೂ ಆಡಿದ್ದರು.

Click to comment

Leave a Reply

Your email address will not be published. Required fields are marked *