Connect with us

Bengaluru City

ದುಂಡುಮಲ್ಲಿ, ಹಾಟ್ ಬೆಡಗಿ ನಮಿತಾಗೆ ಶಾದಿ ಭಾಗ್ಯ!

Published

on

– ತಂದೆಯ ವಯಸ್ಸಿನ ನಟನ ಜೊತೆ ಪ್ರಣಯ

ಬೆಂಗಳೂರು: ಸ್ಯಾಂಡಲ್‍ವುಡ್, ಟಾಲಿವುಡ್, ಮಾಲಿವುಡ್ ಸಿನಿಮಾಗಳಲ್ಲಿ ಹೆಸರು ಮಾಡಿರುವ ಹಾಟ್ ಆ್ಯಂಡ್ ಸೆಕ್ಸಿ ನಟಿ ನಮಿತಾ ಮುಖೇಶ್ ವೆಂಕವಾಲ್ ಈಗ ಮದುವೆ ಆಗಲಿದ್ದಾರೆ ಎಂಬ ಸುದ್ದಿಯೊಂದು ಸೌಥ್ ಸಿನಿ ಅಂಗಳದಲ್ಲಿ ಹರಿದಾಡುತ್ತಿದೆ.

16 ರಿಂದ 60ರ ವಯಸ್ಸಿನ ತನಕದ ಅಭಿಮಾನಿಗಳನ್ನು ಹೊಂದಿರುವ ನಮಿತಾ ಹುಟ್ಟಿದ್ದು ಗುಜರಾತ್ ನಲ್ಲಿ. ಆದರೆ ಸೌಥ್ ಸಿನಿ ಅಂಗಳದಲ್ಲಿ ಹೆಸರು ಮಾಡಿದ್ದಾರೆ. 15 ವರ್ಷಕ್ಕೆ ಮಾಡೆಲ್ ಆದ ನಮಿತಾ 2002ರಲ್ಲಿ ಟಾಲಿವುಡ್ ನ `ಸ್ವತಂ’ ಅನ್ನೊ ಸಿನಿಮಾದ ಮೂಲಕ ಬಣ್ಣದ ಬದುಕಿಗೆ ಎಂಟ್ರಿಕೊಟ್ಟಿದ್ದರು. ಹೀಗೆ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ದಕ್ಷಿಣ ಭಾರತ ಟಾಪ್ ನಟರ ಜೊತೆ ಹೆಜ್ಜೆ ಹಾಕಿದ್ದಾರೆ.

ಯಾರನ್ನ ಮದ್ವೆ ಆಗ್ತಾರೆ?: ಆಗಾಗ ನಮಿತಾರ ಹೆಸರು ಕೆಲ ನಟರ ಹೆಸರಿನ ಜೊತೆ ಥಳುಕು ಹಾಕಿಕೊಳ್ಳುತ್ತಿತ್ತು. ಆದರೆ ಅದು ಮದುವೆ ತನಕ ಬರುತ್ತಿರಲಿಲ್ಲ. ಫಸ್ಟ್ ಟೈಮ್ ನಮಿತಾ ಮದುವೆಯ ವಿಚಾರದ ಬಗ್ಗೆ ಬಿಸಿ ಬಿಸಿ ಚರ್ಚೆಗಳಾಗುತ್ತಿವೆ. ಅದು ಬಹುಭಾಷಾ ನಟ, ಹಿರಿಯ ಕಲಾವಿದ ಶರತ್ ಬಾಬು ಅವರನ್ನು ನಮಿತಾ ಮದುವೆ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

35ರ ಹರೆಯದ ನಮಿತಾ 66ರ ವರ್ಷದ ಶರತ್ ಬಾಬುರವನ್ನ ಮದುವೆಯಾಗ್ತಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಶರತ್ ಬಾಬುರವರಿಗೆ ಈಗಾಗಲೇ ಎರಡು ಮದುವೆಯಾಗಿದೆ. ಶರತ್ ಬಾಬು ತಮ್ಮ ಎರಡನೇ ಮದುವೆಯಾಗುವಾಗ ನಾನು ಇನ್ನೂ 35 ವರ್ಷದ ಯುವಕನಂತೆಯೇ ಇದ್ದು ನನ್ನಲ್ಲಿನ್ನೂ ಅದಮ್ಯ ಉತ್ಸಾಹವಿದೆ ಅಂತಾ ಹೇಳಿದ್ದರು. ಈಗ ನಮಿತಾರ ಜೊಗೆ ಮೂರನೇ ವೆಡ್ಡಿಂಗ್ ಕಾರ್ಡ್ ಪ್ರಿಂಟ್ ಮಾಡುತ್ತಿದ್ದಾರೆ ಎಂಬ ಗುಮಾನಿಗಳು ಹಬ್ಬಿವೆ.

ಈ ಬಗ್ಗೆ ನಮಿತಾ ಹಾಗೂ ಶರತ್ ಬಾಬುರವರ ಕಡೆಯಿಂದ ಸ್ಪಷ್ಟತೆ ಬಂದಿಲ್ಲ. ಸದ್ಯಕ್ಕೆ ನಮಿತಾ ಮಲೆಯಾಳಂ ಸೂಪರ್ ಹಿಟ್ ಸಿನಿಮಾ `ಪುಲಿಮುರುಗನ್’ ಚಿತ್ರದಲ್ಲಿ ಬಿಟ್ರೇ ಬೇರೆ ಯಾವ ಚಿತ್ರದಲ್ಲಿಯೂ ಕಾಣಿಸಿಕೊಂಡಿಲ್ಲ. ಒಂದು ಲೆಕ್ಕದಲ್ಲಿ ನಮಿತಾ ಸಖತ್ ಫ್ರೀಯಾಗಿದ್ದಾರೆ. ತನ್ನ ಬೇಡಿಕೆ ಕಡಿಮೆಯಾಗುತ್ತಿರುವ ಕಾರಣ ನಮಿತಾ ತಾಳಿಗೆ ಕತ್ತು ಕೊಡಲು ಸಿದ್ದವಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ರೈಟ್ ಟೈಮ್‍ನಲ್ಲೇ ಇಂಥದೊಂದು ಬಿಗ್ ಗಾಸಿಪ್ ಅಕ್ಕ-ಪಕ್ಕದ ಟಾಲಿವುಡ್ ಮತ್ತು ಕಾಲಿವುಡ್ ನಿಂದ ಸ್ಯಾಂಡಲ್‍ವುಡ್ ತನಕ ಹಬ್ಬಿದೆ.

 

https://www.instagram.com/p/BZvKQRjH6UE/?hl=en&taken-by=namita.official

https://www.instagram.com/p/BY3liTrHX83/?hl=en&taken-by=namita.official

https://www.instagram.com/p/BVhPEaZnaVr/?hl=en&taken-by=namita.official

https://www.instagram.com/p/BSlSUeEleTs/?hl=en&taken-by=namita.official

https://www.instagram.com/p/BSfiEsml8m0/?hl=en&taken-by=namita.official

https://www.instagram.com/p/BRx_HqNl-xL/?hl=en&taken-by=namita.official

https://www.instagram.com/p/BR0iEsxF2_1/?hl=en&taken-by=namita.official

https://www.instagram.com/p/BQmxCdAl-yY/?hl=en&taken-by=namita.official

https://www.instagram.com/p/BP0AwbtDs43/?hl=en&taken-by=namita.official

Click to comment

Leave a Reply

Your email address will not be published. Required fields are marked *