ಕೋಲ್ಕತ್ತಾ: ಮಾಜಿ ಕ್ರಿಕೆಟಿಗ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಅವರ ಪತ್ನಿ ಡೋನಾ ಗಂಗೂಲಿ (Dona Ganguly) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಜ್ವರ, ಕೀಲು ನೋವು ಮತ್ತು ದದ್ದುಗಳಂತಹ ಚಿಕೂನ್ಗೂನ್ಯಾ (Chikungunya) ರೋಗದಿಂದ ಬಳಲುತ್ತಿದ್ದ ಡೋನಾ ಗಂಗೂಲಿ ಅವರನ್ನು ಮಂಗಳವಾರ ತಡರಾತ್ರಿ ಕೋಲ್ಕತ್ತಾದ (Kolkata) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕ್ಯಾಲಿಫೋರ್ನಿಯಾ – ಕಿಡ್ನ್ಯಾಪ್ ಆಗಿದ್ದ ಭಾರತ ಮೂಲದ ಒಂದೇ ಕುಟುಂಬ ನಾಲ್ವರು ಶವವಾಗಿ ಪತ್ತೆ
ಡೋನಾ ಗಂಗೂಲಿ ಅವರು ಚಿಕೂನ್ಗುನ್ಯಾದಿಂದ ಬಳಲುತ್ತಿದ್ದಾರೆ. ಜ್ವರದಿಂದ ಬಳಲುತ್ತಿದ್ದೂ ಸದ್ಯಕ್ಕೆ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವುಡ್ಲ್ಯಾಂಡ್ಸ್ ಆಸ್ಪತ್ರೆಯ (Woodlands Hospital) ಎಂಡಿ ಮತ್ತು ಸಿಇಒ ಡಾ.ರೂಪಾಲಿ ಬಸು ಹೇಳಿದ್ದಾರೆ. ಇದನ್ನೂ ಓದಿ: ಬಾಲಿವುಡ್ ಗೆ ಪವನ್ ಒಡೆಯರ್: ‘ನೋಟರಿ’ ಮೂಲಕ ಬಿಟೌನ್ ಗೆ ಎಂಟ್ರಿ
ಖ್ಯಾತ ಒಡಿಸ್ಸಾ ನೃತ್ಯಗಾರ್ತಿಯಾಗಿರುವ ಡೊನಾ ಗಂಗೂಲಿ ಅವರ ಆರೋಗ್ಯದ ಬಗ್ಗೆ ತೀವ್ರ ನಿಗಾವಹಿಸಲಾಗುತ್ತಿದೆ ಎಂದು ಸಿಇಒ ಡಾ.ರೂಪಾಲಿ ಬಸು ತಿಳಿಸಿದ್ದಾರೆ.