Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಇನ್ನು ಮುಂದೆ ಸಿಗ್ನಲ್ ಇಲ್ದೇ ಇದ್ರೂ ಮೊಬೈಲ್, ಲ್ಯಾಂಡ್‍ಲೈನಿಗೆ ಕಾಲ್ ಮಾಡಬಹುದು!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಇನ್ನು ಮುಂದೆ ಸಿಗ್ನಲ್ ಇಲ್ದೇ ಇದ್ರೂ ಮೊಬೈಲ್, ಲ್ಯಾಂಡ್‍ಲೈನಿಗೆ ಕಾಲ್ ಮಾಡಬಹುದು!

Latest

ಇನ್ನು ಮುಂದೆ ಸಿಗ್ನಲ್ ಇಲ್ದೇ ಇದ್ರೂ ಮೊಬೈಲ್, ಲ್ಯಾಂಡ್‍ಲೈನಿಗೆ ಕಾಲ್ ಮಾಡಬಹುದು!

Public TV
Last updated: May 2, 2018 5:12 pm
Public TV
Share
2 Min Read
mobile phone 760
SHARE

ನವದೆಹಲಿ: ಇನ್ನು ಮುಂದೆ ನೀವು ನೆಟ್‍ವರ್ಕ್ ಸಿಗ್ನಲ್ ಇಲ್ಲದೇ ಇದ್ದರೂ ಮೊಬೈಲ್ ಮೂಲಕವೇ ಲ್ಯಾಂಡ್‍ಲೈನ್, ಮೊಬೈಲ್‍ಗೆ ಕರೆ ಮಾಡಬಹುದು.

ಹೌದು. ನೆಟ್ ವರ್ಕ್ ಸಿಗದಿರುವ ಜಾಗದಲ್ಲೂ ಇಂಟರ್ ನೆಟ್ ಟೆಲಿಫೋನಿ ಆಪ್ ಬಳಸಿ ಲ್ಯಾಂಡ್ ಲೈನ್, ಮೊಬೈಲ್ ಗಳಿಗೆ ಕರೆಗಳನ್ನು ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ಮನೆ ಅಥವಾ ಕಚೇರಿಯ ವೈಫೈ ಬ್ರಾಡ್ ಬ್ಯಾಂಡ್ ನೆಟ್‍ವರ್ಕ್‍ಗೆ ಕನೆಕ್ಟ್ ಆಗಿ ಕರೆಗಳನ್ನು ಮಾಡಬಹುದಾದ ಇಂಟರ್ ನೆಟ್ ಟೆಲಿಫೋನಿ ತಂತ್ರಜ್ಞಾನವನ್ನು ದೇಶದಲ್ಲಿ ಪರಿಚಯಿಸುವಂತೆ ಕಳೆದ ಅಕ್ಟೋಬರ್ ನಲ್ಲಿ ಭಾರತೀಯ ದೂರಸಂಪರ್ಕ ಪ್ರಾಧಿಕಾರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಈ ಶಿಫಾರಸಿಗೆ ಸರ್ಕಾರ ಮಂಗಳವಾರ ಅಸ್ತು ಎಂದಿದೆ.

ಏನಿದು ಟೆಲಿಫೋನಿ ಸೇವೆ?
ಟೆಲಿಫೋನಿ ಪರವಾನಗಿ ಪಡೆದಿರುವ ಟೆಲಿಕಾಂ ಕಂಪನಿ ಅಥವಾ ಖಾಸಗಿ ಕಂಪನಿಗಳು ಗ್ರಾಹಕರಿಗೆ ಹೊಸ ಫೋನ್ ನಂಬರ್ ನೀಡುತ್ತವೆ. ಇದಕ್ಕೆ ಸಿಮ್ ಅವಶ್ಯಕತೆ ಇರುವುದಿಲ್ಲ. ಇಂಟರ್ ನೆಟ್ ಟೆಲಿಫೋನಿ ಆಪ್ ಡೌನ್ ಲೋಡ್ ಮಾಡಿಕೊಳ್ಳುವ ಮೂಲಕ ನಂಬರ್ ಅನ್ನು ಆಕ್ಟೀವ್ ಮಾಡಬಹುದಾಗಿದೆ.

ರಿಲಯನ್ಸ್ ಜಿಯೋ, ಬಿಎಸ್‍ಎನ್‍ಎಲ್, ಏರ್‍ಟೆಲ್, ಹಾಗೂ ಇನ್ನಿತರ ಟೆಲಿಕಾಂ ಆಪರೇಟರ್ ಗಳು ಹೊಸ ಇಂಟರ್ ನೆಟ್ ಟೆಲಿಫೋನಿ ಸೇವೆಯನ್ನು ಒದಗಿಸಲಿವೆ ಎಂದು ಟ್ರಾಯ್ ಸಲಹೆಗಾರ ಅರವಿಂದ್ ಕುಮಾರ್ ತಿಳಿಸಿದ್ದಾರೆ.

ಹೊಸ ವ್ಯವಸ್ಥೆಯನ್ನು ಬಳಸಲು ಟೆಲಿಕಾಂ ಕಂಪನಿ ತಯಾರಿಸಿದ ಇಂಟರ್ ನೆಟ್ ಟೆಲಿಫೋನಿ ಆಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. ಬಳಕೆದಾರನಿಗೆ 10 ಸಂಖ್ಯೆ ನಂಬರ್ ಸಿಗುತ್ತದೆ. ಉದಾಹರಣೆಗೆ ಏರ್‍ಟೆಲ್ ಸಿಮ್ ಬಳಸುತ್ತಿದ್ದರೆ ಜಿಯೋ ಆಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಈ ಸಂದರ್ಭದಲ್ಲಿ ಹೊಸ ನಂಬರ್ ಸಿಗಲಿದೆ. ಒಂದು ವೇಳೆ ನೀವು ಬಳಸುತ್ತಿರುವ ಸಿಮ್ ಕಂಪನಿಯ ಟೆಲಿಫೋನಿ ಆಪ್ ಅನ್ನು ಡೌನ್ ಲೋಡ್ ಮಾಡಿಕೊಂಡಲ್ಲಿ ಹೊಸ ಫೋನ್ ನಂಬರ್ ನ ಅವಶ್ಯಕತೆ ಇರುವುದಿಲ್ಲ. ಅದೇ ಫೋನ್ ನಂಬರ್ ಅನ್ನು ಬಳಸಿ ಕರೆಗಳನ್ನು ಮಾಡಬಹುದಾಗಿದೆ.

ಟೆಲಿಕಾಂ ಕಂಪೆನಿಗಳ ಮಧ್ಯೆ ಕಾಲ್ ಡ್ರಾಪ್ (ಒಂದು ಕಂಪೆನಿಯಿಂದ ಮತ್ತೊಂದು ಕಂಪೆನಿಗೆ ಕರೆ ಮಾಡಿದಾಗ ಅರ್ಧದಲ್ಲೇ ಕರೆ ಕಡಿತಗೊಳ್ಳುವುದು) ಸಮಸ್ಯೆಗೆ ಟೆಲಿಫೋನಿ ಪರಿಹಾರವಾಗಬಲ್ಲದು ಎಂದು ಅರವಿಂದ್ ಕುಮಾರ್ ತಿಳಿಸಿದರು.

ವೈಫೈ, ಬ್ರಾಡ್ ಬ್ಯಾಂಡ್ ಮೂಲಕ ಕರೆ ಮಾಡಿದಾಗ ಡೇಟಾಗೆ ಮಾತ್ರ ಶುಲ್ಕ ವಿಧಿಸುವುದರಿಂದ ಕಡಿಮೆ ದರದಲ್ಲಿ ಕರೆಗಳನ್ನು ಮಾಡಬಹುದಾಗಿದೆ. ಇದನ್ನೂ ಓದಿ: ಶೀಘ್ರದಲ್ಲಿ ಕಡಿಮೆಯಾಗಲಿದೆ ಕರೆ ದರ: ಏನಿದು ಐಯುಸಿ? ಈಗ ಈ ದರ ಎಷ್ಟಿದೆ?

TAGGED:internetInternet telephonyPublic TVTelecom Regulatory Authority of IndiaWIFI Broad Bandಇಂಟರ್ ನೆಟ್ಇಂಟರ್ ನೆಟ್ ಟೆಲಿಫೋನಿಪಬ್ಲಿಕ್ ಟಿವಿಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವೈಫೈ ಬ್ರಾಡ್ ಬ್ಯಾಂಡ್
Share This Article
Facebook Whatsapp Whatsapp Telegram

Cinema news

darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood
Udupi Rishab Shetty Home Bhajane Kunitha Yakshagana Harake
ನಟ ರಿಷಬ್ ಶೆಟ್ಟಿ ಮನೆಯಲ್ಲಿ ಕುಣಿತ ಭಜನೆ, ಯಕ್ಷಗಾನ ಹರಕೆ ಪ್ರದರ್ಶನ
Cinema Districts Karnataka Latest Sandalwood Top Stories Udupi

You Might Also Like

SR Mahesh
Districts

ಸ್ಥಳೀಯ ಸಂಸ್ಥೆ ಚುನಾವಣೆ ಮಾಡಲು ರಾಜ್ಯ ಸರ್ಕಾರಕ್ಕೆ ಭಯ: ಸಾರಾ ಮಹೇಶ್

Public TV
By Public TV
3 minutes ago
Vinay Kulkarni 2
Bengaluru City

ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ – ಶಾಸಕ ಸ್ಥಾನ ರದ್ದು

Public TV
By Public TV
35 minutes ago
Raichur 1
Districts

ರಾಯಚೂರಿನಲ್ಲಿ ಬಿಸಿಲಿನ ಬೇಗೆ – 44.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲು

Public TV
By Public TV
1 hour ago
Vinay Kulkarni 1 1
Bengaluru City

ಯೋಗೀಶ್‌ ಗೌಡ ಕೊಲೆ ಕೇಸ್‌ – ವಿನಯ್‌ ಕುಲಕರ್ಣಿ ಸೇರಿ 16 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Public TV
By Public TV
1 hour ago
Rahul Gandhi
Latest

ಮಹಿಳಾ ಸಬಲೀಕರಣ ಅಲ್ಲ, ಭಾರತದ ಚುನಾವಣಾ ನಕ್ಷೆ ಬದಲಿಸುವ ಬಿಲ್: ರಾಹುಲ್ ಗಾಂಧಿ ಆರೋಪ

Public TV
By Public TV
2 hours ago
pm modi parliament
Latest

ಸೂಕ್ಷ್ಮ ನಿರ್ಧಾರ ತೆಗೆದುಕೊಳ್ಳಿ, ತಿದ್ದುಪಡಿಗಳನ್ನು ಬೆಂಬಲಿಸಿ: ಮಹಿಳಾ ಮೀಸಲಾತಿ ಕಾನೂನು ಬೆಂಬಲಕ್ಕೆ ಮೋದಿ ಮನವಿ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?