ನವದೆಹಲಿ: ಇನ್ನು ಮುಂದೆ ನೀವು ನೆಟ್‍ವರ್ಕ್ ಸಿಗ್ನಲ್ ಇಲ್ಲದೇ ಇದ್ದರೂ ಮೊಬೈಲ್ ಮೂಲಕವೇ ಲ್ಯಾಂಡ್‍ಲೈನ್, ಮೊಬೈಲ್‍ಗೆ ಕರೆ ಮಾಡಬಹುದು.
ಹೌದು. ನೆಟ್ ವರ್ಕ್ ಸಿಗದಿರುವ ಜಾಗದಲ್ಲೂ ಇಂಟರ್ ನೆಟ್ ಟೆಲಿಫೋನಿ ಆಪ್ ಬಳಸಿ ಲ್ಯಾಂಡ್ ಲೈನ್, ಮೊಬೈಲ್ ಗಳಿಗೆ ಕರೆಗಳನ್ನು ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.
Advertisement
ಮನೆ ಅಥವಾ ಕಚೇರಿಯ ವೈಫೈ ಬ್ರಾಡ್ ಬ್ಯಾಂಡ್ ನೆಟ್‍ವರ್ಕ್‍ಗೆ ಕನೆಕ್ಟ್ ಆಗಿ ಕರೆಗಳನ್ನು ಮಾಡಬಹುದಾದ ಇಂಟರ್ ನೆಟ್ ಟೆಲಿಫೋನಿ ತಂತ್ರಜ್ಞಾನವನ್ನು ದೇಶದಲ್ಲಿ ಪರಿಚಯಿಸುವಂತೆ ಕಳೆದ ಅಕ್ಟೋಬರ್ ನಲ್ಲಿ ಭಾರತೀಯ ದೂರಸಂಪರ್ಕ ಪ್ರಾಧಿಕಾರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಈ ಶಿಫಾರಸಿಗೆ ಸರ್ಕಾರ ಮಂಗಳವಾರ ಅಸ್ತು ಎಂದಿದೆ.
Advertisement
ಏನಿದು ಟೆಲಿಫೋನಿ ಸೇವೆ?
ಟೆಲಿಫೋನಿ ಪರವಾನಗಿ ಪಡೆದಿರುವ ಟೆಲಿಕಾಂ ಕಂಪನಿ ಅಥವಾ ಖಾಸಗಿ ಕಂಪನಿಗಳು ಗ್ರಾಹಕರಿಗೆ ಹೊಸ ಫೋನ್ ನಂಬರ್ ನೀಡುತ್ತವೆ. ಇದಕ್ಕೆ ಸಿಮ್ ಅವಶ್ಯಕತೆ ಇರುವುದಿಲ್ಲ. ಇಂಟರ್ ನೆಟ್ ಟೆಲಿಫೋನಿ ಆಪ್ ಡೌನ್ ಲೋಡ್ ಮಾಡಿಕೊಳ್ಳುವ ಮೂಲಕ ನಂಬರ್ ಅನ್ನು ಆಕ್ಟೀವ್ ಮಾಡಬಹುದಾಗಿದೆ.
Advertisement
ರಿಲಯನ್ಸ್ ಜಿಯೋ, ಬಿಎಸ್‍ಎನ್‍ಎಲ್, ಏರ್‍ಟೆಲ್, ಹಾಗೂ ಇನ್ನಿತರ ಟೆಲಿಕಾಂ ಆಪರೇಟರ್ ಗಳು ಹೊಸ ಇಂಟರ್ ನೆಟ್ ಟೆಲಿಫೋನಿ ಸೇವೆಯನ್ನು ಒದಗಿಸಲಿವೆ ಎಂದು ಟ್ರಾಯ್ ಸಲಹೆಗಾರ ಅರವಿಂದ್ ಕುಮಾರ್ ತಿಳಿಸಿದ್ದಾರೆ.
Advertisement
ಹೊಸ ವ್ಯವಸ್ಥೆಯನ್ನು ಬಳಸಲು ಟೆಲಿಕಾಂ ಕಂಪನಿ ತಯಾರಿಸಿದ ಇಂಟರ್ ನೆಟ್ ಟೆಲಿಫೋನಿ ಆಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. ಬಳಕೆದಾರನಿಗೆ 10 ಸಂಖ್ಯೆ ನಂಬರ್ ಸಿಗುತ್ತದೆ. ಉದಾಹರಣೆಗೆ ಏರ್‍ಟೆಲ್ ಸಿಮ್ ಬಳಸುತ್ತಿದ್ದರೆ ಜಿಯೋ ಆಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಈ ಸಂದರ್ಭದಲ್ಲಿ ಹೊಸ ನಂಬರ್ ಸಿಗಲಿದೆ. ಒಂದು ವೇಳೆ ನೀವು ಬಳಸುತ್ತಿರುವ ಸಿಮ್ ಕಂಪನಿಯ ಟೆಲಿಫೋನಿ ಆಪ್ ಅನ್ನು ಡೌನ್ ಲೋಡ್ ಮಾಡಿಕೊಂಡಲ್ಲಿ ಹೊಸ ಫೋನ್ ನಂಬರ್ ನ ಅವಶ್ಯಕತೆ ಇರುವುದಿಲ್ಲ. ಅದೇ ಫೋನ್ ನಂಬರ್ ಅನ್ನು ಬಳಸಿ ಕರೆಗಳನ್ನು ಮಾಡಬಹುದಾಗಿದೆ.
ಟೆಲಿಕಾಂ ಕಂಪೆನಿಗಳ ಮಧ್ಯೆ ಕಾಲ್ ಡ್ರಾಪ್ (ಒಂದು ಕಂಪೆನಿಯಿಂದ ಮತ್ತೊಂದು ಕಂಪೆನಿಗೆ ಕರೆ ಮಾಡಿದಾಗ ಅರ್ಧದಲ್ಲೇ ಕರೆ ಕಡಿತಗೊಳ್ಳುವುದು) ಸಮಸ್ಯೆಗೆ ಟೆಲಿಫೋನಿ ಪರಿಹಾರವಾಗಬಲ್ಲದು ಎಂದು ಅರವಿಂದ್ ಕುಮಾರ್ ತಿಳಿಸಿದರು.
ವೈಫೈ, ಬ್ರಾಡ್ ಬ್ಯಾಂಡ್ ಮೂಲಕ ಕರೆ ಮಾಡಿದಾಗ ಡೇಟಾಗೆ ಮಾತ್ರ ಶುಲ್ಕ ವಿಧಿಸುವುದರಿಂದ ಕಡಿಮೆ ದರದಲ್ಲಿ ಕರೆಗಳನ್ನು ಮಾಡಬಹುದಾಗಿದೆ. ಇದನ್ನೂ ಓದಿ: ಶೀಘ್ರದಲ್ಲಿ ಕಡಿಮೆಯಾಗಲಿದೆ ಕರೆ ದರ: ಏನಿದು ಐಯುಸಿ? ಈಗ ಈ ದರ ಎಷ್ಟಿದೆ?