ಬೆಂಗಳೂರು: ನಮ್ಮ ಮೆಟ್ರೊ ಮೊದಲ ಹಂತದ ಉತ್ತರ-ದಕ್ಷಣ ಕಾರಿಡಾರ್‍ನ ಯೆಲಚೇನಹಳ್ಳಿ ಮತ್ತು ಸಂಪಿಗೆಹಳ್ಳಿ ನಡುವಿನ ಮಾರ್ಗ ಜನರ ಸೇವೆಗೆ ಸಿದ್ಧವಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಸಂಚಾರ ಪ್ರಾರಂಭವಾಗುವ ಎಲ್ಲ ಲಕ್ಷಣಗಳು ಕಂಡುಬಂದಿವೆ.
ಕಳೆದ ನಾಲ್ಕು ದಿನಗಳಿಂದ ಈ ಮಾರ್ಗದ ತಪಾಸಣೆ ನಡೆಸಿರುವ ರೈಲು ಸುರಕ್ಷತಾ ಆಯುಕ್ತ ಕೆ ಎ ಮನೋಹರ್ ಅವರು ಮುಂದಿನ ವಾರವೇ ಸುರಕ್ಷತಾ ಪ್ರಮಾಣ ಪತ್ರ ಸಲ್ಲಿಸುವ ನಿರೀಕ್ಷೆಯಲ್ಲಿದ್ದಾರೆ.
Advertisement
ಈ ಮಾರ್ಗದಲ್ಲಿ ಯಾವುದೇ ಬದಲಾವಣೆ ಮಾಡುವ ಆಗತ್ಯವಿಲ್ಲ ಸಂಚಾರಕ್ಕೆ ಸಂಪೂರ್ಣ ಸುರಕ್ಷತೆಯಿಂದ ಕೂಡಿದೆ ಅಂತಾ ತಿಳಿದು ಬಂದಿದೆ. ಈಗಾಗಲೇ ಸುರಕ್ಷತಾ ಪರೀಕ್ಷೆಯಲ್ಲಿ ಈ ಮಾರ್ಗ ಉತ್ತೀರ್ಣವಾಗಿದ್ದು, ಸುರಕ್ಷತಾ ಪ್ರಮಾಣ ಪತ್ರ ದೊರೆತ ಮೇಲೆ ಸಂಚಾರಕ್ಕೆ ಮುಕ್ತವಾಗಲಿದೆ.
Advertisement
ಸಂಪಿಗೆಹಳ್ಳಿಯಿಂದ ನ್ಯಾಷನಲ್ ಕಾಲೇಜಿನವರೆಗೆ ಅಂಡರ್‍ಪಾಸ್ ಕಾಮಗಾರಿ ಸಂಪೂರ್ಣ ಮುಗಿದಿದೆ. ಕೆಲ ಸಣ್ಣಪುಟ್ಟ ಕೆಲಸಗಳು ಬಾಕಿಯಿದ್ದು ಅತಿ ಶೀಘ್ರದಲ್ಲೇ ಜನರ ಸೇವೆಗೆ ಈ ಮಾರ್ಗ ಲಭ್ಯವಾಗಲಿದೆ.