ಸೋನು ಶ್ರೀನಿವಾಸ್‌ ಗೌಡ ಜೈಲಿನಿಂದ ರಿಲೀಸ್‌

Public TV
0 Min Read
sonu srinivas gowda

ರೀಲ್ಸ್‌ ರಾಣಿ ಹಾಗೂ ಬಿಗ್‌ಬಾಸ್‌ ಸ್ಪರ್ಧಿ ಸೋನು ಶ್ರೀನಿವಾಸ್‌ ಗೌಡ ಪರಪ್ಪನ ಅಗ್ರಹಾರ ಜೈಲಿನಿಂದ ಶನಿವಾರ ರಿಲೀಸ್‌ ಆಗಿದ್ದಾರೆ.

ಕಾನೂನುಬಾಹಿರವಾಗಿ ಮಗುವನ್ನು ದತ್ತು ಪಡೆದ ಪ್ರಕರಣದಲ್ಲಿ ಸೋನು ಗೌಡ ಜೈಲು ಸೇರಿದ್ದರು. 11 ದಿನಗಳ ಬಳಿಕ ರಿಲೀಸ್‌ ಆಗಿದ್ದಾರೆ. ಬಿಡುಗಡೆ ಬಳಿಕ ಅಕ್ಕನ ಜೊತೆ ತೆರಳಿದ್ದಾರೆ.

ಮೂರು ದಿನಗಳ ಹಿಂದೆ ಸೋನುಗೌಡಗೆ ಕೋರ್ಟ್‌ನಿಂದ ಜಾಮೀನು ಮಂಜೂರಾಗಿತ್ತು. ಇಬ್ಬರ ಶ್ಯೂರಿಟಿ ಜೊತೆಗೆ 1 ಲಕ್ಷ ಬಾಂಡ್ ಷರತ್ತನ್ನು ನ್ಯಾಯಾಧೀಶರು ವಿಧಿಸಿದ್ದರು. ಇಂದು ಜಾಮೀನು ಅರ್ಜಿಯ ಷರತ್ತುಗಳನ್ನ ಪೂರೈಸಿದ ಹಿನ್ನೆಲೆ ರಾತ್ರಿ 8:10 ರ ಸುಮಾರಿಗೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

Share This Article