CinemaKarnatakaLatestMain PostSandalwoodTV Shows

‘ಈ ಶನಿವಾರ ನಿನ್ನ ಮನೆಗೆ ಕಳಿಸ್ತಾರೆ’ ಎಂದು ಗುರೂಜಿಗೆ ಭವಿಷ್ಯ ನುಡಿದ ಸೋನು ಶ್ರೀನಿವಾಸ್ ಗೌಡ

ರಿಗೆ ಭವಿಷ್ಯ ಹೇಳುವ ಆರ್ಯವರ್ಧನ್ ಗುರೂಜಿಗೆ ಈ ಬಾರಿ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಭವಿಷ್ಯ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಆ ಭವಿಷ್ಯ ನಿಜವಾಗತ್ತೋ ಬಿಡತ್ತೋ. ಆದರೆ, ನಿಜವಾದರೆ ಸೋನು ಗೌಡನ ಬಾಯಿಗೆ ನೂರು ತೆಂಗಿನಕಾಯಿ ಒಡೆಯುವುದಾಗಿ ಗುರೂಜಿ ಹೇಳಿದ್ದಾರೆ. ಅಲ್ಲಿಗೆ ಈ ಶನಿವಾರ ಬಿಗ್ ಬಾಸ್ ಮನೆಯಿಂದ ಗುರೂಜಿ ಹೊರ ಬೀಳುತ್ತಾರಾ? ಅಥವಾ ಫಿನಾಲೆ ವಾರಕ್ಕೆ ಜಂಪ್ ಆಗ್ತಾರೆ ಎನ್ನುವುದು ಸದ್ಯದ ಕುತೂಹಲ.

ಆರ್ಯವರ್ಧನ್ (Aryavardhan) ಗುರೂಜಿದು ದಢೂತಿ ದೇಹವಿದ್ದರೂ ಸದಾ ಚಟುವಟಿಕೆಯಿಂದಲೇ ಇರುತ್ತಾರೆ. ಅಡುಗೆ ಮನೆಗೂ ಸೈ, ಆಟಕ್ಕೂ ಜೈ ಎನ್ನುವ ಅವರಿಗೆ ಮತ್ತೆ ಮತ್ತೆ ಮನೆ ನೆನಪಾಗುತ್ತಿದೆ. ‘ಮನೆಯಲ್ಲಿ ತಿಂದುಂಡು ಆರಾಮಾಗಿದ್ದವನನ್ನು ಯಾಕಪ್ಪ ಕರ್ಕೊಂಡ್ ಬಂದು ಹಿಂಸೆ ಕೊಡ್ತಿದ್ದೀರಿ’ ಎಂದು ನೇರವಾಗಿಯೇ ತಮಾಷೆಯ ನುಡಿಗಳಲ್ಲಿ ಆರ್ಯವರ್ಧನ್ ಬಿಗ್ ಬಾಸ್ ಮನೆಯಲ್ಲಿ ಮಾತನಾಡಿದ್ದಾರೆ. ನನಗೆ ಇಲ್ಲಿ ಇರೋಕೆ ಆಗ್ತಿಲ್ಲ ಎಂದೂ ಹೇಳಿಕೊಂಡಿದ್ದಾರೆ. ಇಷ್ಟೂ ವಿಷಯಗಳು ತಮಾಷೆ ಅನಿಸಿದರೂ, ಒಂದಷ್ಟು ವಿಷಯದಲ್ಲಿ ಅವರಿಗೆ ಬೇಸರವಾಗಿದೆ. ಇದನ್ನೂ ಓದಿ:ಪಾಕಿಸ್ತಾನಿ ಬೌಲರ್ ನಸೀಮ್ ಶಾಗೆ ಬೋಲ್ಡ್ ಆದ `ಐರಾವತ’ ನಟಿ

ಪದೇ ಪದೇ ‘ಯಾಕಪ್ಪ ನನ್ನ ಇಲ್ಲಿಗೆ ಕರ್ಕೊಂಡು ಬಂದ್ರಿ’ ಎಂದು ಗುರೂಜಿ (Guruji) ಆಡಿದಾಗ, ತಕ್ಷಣವೇ ಮಾತು ಪೋಣಿಸಿದ ಸೋನು ಶ್ರೀನಿವಾಸ್ ಗೌಡ ‘ಅಷ್ಟೊಂದು ನೊಂದ್ಕೊಬೇಡಿ. ಈ ಶನಿವಾರ ನಿಮ್ಮನ್ನ ಮನೆಗೆ ಕಳಿಸ್ತಾರೆ ಬಿಡಿ’ ಎನ್ನುತ್ತಾರೆ. ‘ಅಯ್ಯೋ.. ಹಾಗ್ ಏನಾದರೂ ಮಾಡಿದರೆ, ನಿನ್ನ ಬಾಯಿಗೆ ನೂರು ತೆಂಗಿನ ಕಾಯಿ ಒಡೆಯುತ್ತೇನೆ’ ಎಂದು ಸೋನುಗೆ ಹೇಳುತ್ತಾರೆ ಗುರೂಜಿ. ಸೋನು ಭವಿಷ್ಯ ನುಡಿದಂತೆ ಆಗತ್ತಾ? ಅಥವಾ ಗುರೂಜಿ ಸೇಫ್ ಆಗಿ ಮನೆಯಲ್ಲೇ ಉಳಿಯುತ್ತಾರಾ ಎನ್ನುವುದು ಸದ್ಯಕ್ಕಿರುವ ಕುತೂಹಲ.

ಸೋನು ಶ್ರೀನಿವಾಸ್ ಗೌಡ ಮತ್ತು ಗುರೂಜಿ ಇತ್ತೀಚಿನ ದಿನಗಳಲ್ಲಿ ತುಂಬಾ ಆತ್ಮೀಯರಾಗುತ್ತಿದ್ದಾರೆ. ಗುರೂಜಿ ಅಡುಗೆ ಮನೆಯಲ್ಲಿದ್ದರೆ, ಅವರ ಸಹಾಯಕ್ಕೆ ಸೋನು ಬರುತ್ತಾರೆ. ವಾಕಿಂಗ್ ಮಾಡುತ್ತಿದ್ದರೆ ಜೊತೆಯಾಗಿಯೇ ಹೆಜ್ಜೆ ಹಾಕುತ್ತಾರೆ. ಗುರೂಜಿ ಮಾತಿಗೆ ಸಖತ್ ಕೌಂಟರ್ ಕೊಡುತ್ತಾ ಮನರಂಜಿಸುತ್ತಿದ್ದಾರೆ. ಈ ವಾರದಲ್ಲಿ (Big Boss) ಮನೆಯಿಂದ ಸೋನು ಆಚೆ ಬರುತ್ತಾರಾ ಅಥವಾ ಗುರೂಜಿಗೆ ಏನಾದರೂ ಕೆಟ್ಟ ಭವಿಷ್ಯ ಕಾದಿದೆಯಾ ನೋಡಬೇಕು.

Live Tv

Leave a Reply

Your email address will not be published. Required fields are marked *

Back to top button