ರೀಲ್ಸ್ ರಾಣಿ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅಕ್ರಮವಾಗಿ ಮಗು ದತ್ತು ಪಡೆದ ವಿಚಾರವಾಗಿ ಜೈಲು ಸೇರಿದ್ದರು. ಇದೀಗ 11 ದಿನಗಳ ಕಾಲ ಜೈಲು ವಾಸದ ನಂತರ ಏ.6ರಂದು ರಿಲೀಸ್ ಆಗಿದ್ದಾರೆ. ಜೈಲಿನಿಂದ (Jail) ಹೊರಬಂದ್ಮೇಲೆ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ.
ಜೈಲಿನಿಂದ ಮುಕ್ತಿ ಸಿಗುತ್ತಿದ್ದಂತೆ ಸೋನು ಶ್ರೀನಿವಾಸ್ ಗೌಡ ಅವರು ಕಾರಿನಲ್ಲಿ ಕುಳಿತು ಕೂಲ್ ಆಗಿ ಜ್ಯೂಸ್ ಕುಡಿದು ಕ್ಯಾಮೆರಾ ಕಣ್ಣಿಗೆ ಮುಗುಳು ನಗೆ ಬೀರಿದ್ದಾರೆ. ಲೈಟ್ ಬಣ್ಣದ ಧಿರಿಸಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಅಮೆರಿಕಾದಲ್ಲಿ ಭೂಕಂಪ: ನಟ ನಿರೂಪ್ ಭಂಡಾರಿ ಬಿಚ್ಚಿಟ್ಟ ಅನುಭವ
ಪರಪ್ಪನ ಅಗ್ರಹಾರದಿಂದ ರಿಲೀಸ್ ಆದ್ಮೇಲೆ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡೋಕೆ ಸೋನು ನಿರಾಕರಿಸಿದ್ದರು. ಆದರೆ ಅವರ ಲಾಯರ್ ಸೂಚನೆಯ ಮೇರೆಗೆ ಸೋನು ಯಾವುದೇ ರಿಯಾಕ್ಷನ್ ನೀಡಿರಲಿಲ್ಲ. ಆದರೆ ಈ ಪ್ರಕರಣದ ಇನ್ನೂ ತನಿಖೆ ನಡೆಯುತ್ತಿದೆ.
ಅಕ್ರಮವಾಗಿ ಮಗು ದತ್ತು ಪಡೆದ ಪ್ರಕರಣದಲ್ಲಿ ಸೋನು ಮೊದಲ ಪ್ರತಿಕ್ರಿಯೆ ಮುಂದಿನ ನಡೆ ಏನು ಎಂಬುದರ ಬಗ್ಗೆ ಫ್ಯಾನ್ಸ್ಗೆ ಕುತೂಹಲ ಮೂಡಿಸಿದೆ. ಸದಾ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಇರುವ ನಟಿ ಈಗ ಸಿಕ್ಕಾಪಟ್ಟೆ ಸೈಲೆಂಟ್ ಆಗಿದ್ದರು. ವಿವಾದದಿಂದ ಸೋನು ಮೌನಕ್ಕೆ ಶರಣಾಗಿದ್ದರು. ಇದೀಗ ಮತ್ತೆ ಲವಲವಿಕೆಯಿಂದ ಕ್ಯಾಮೆರಾಗೆ ಪೋಸ್ ಕೊಟ್ಟು ಜ್ಯೂಸ್ ಕುಡುಯುತ್ತಿರುವ ಫೋಟೋ ಶೇರ್ ಮಾಡಿದ್ದಾರೆ. ಈ ಪ್ರಕರಣ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆದ್ರೂ ಉತ್ತರ ಕೊಡುತ್ತಾರಾ? ಕಾಯಬೇಕಿದೆ.
5 ದಿನಗಳ ಹಿಂದೆ ಸೋನುಗೌಡಗೆ ಕೋರ್ಟ್ನಿಂದ ಜಾಮೀನು ಮಂಜೂರಾಗಿತ್ತು. ಇಬ್ಬರ ಶ್ಯೂರಿಟಿ ಜೊತೆಗೆ 1 ಲಕ್ಷ ಬಾಂಡ್ ಷರತ್ತನ್ನು ನ್ಯಾಯಾಧೀಶರು ವಿಧಿಸಿದ್ದರು. ಏ.6ರಂದು ಜಾಮೀನು ಅರ್ಜಿಯ ಷರತ್ತುಗಳನ್ನ ಪೂರೈಸಿದ ಹಿನ್ನೆಲೆ ರಾತ್ರಿ 8:10ರ ಸುಮಾರಿಗೆ ಜೈಲಿನಿಂದ ಬಿಡುಗಡೆಯಾಗಿದ್ದರು.