Bigg Boss: ಬಿಗ್ ಬಾಸ್ ಮನೆಯಲ್ಲಿ ಕಬಡ್ಡಿ ಆಡಿ, ಗಾಯ ಮಾಡಿಕೊಂಡ ಸೋನು ಶ್ರೀನಿವಾಸ್ ಗೌಡ

Public TV
1 Min Read
sonu srinivas gowda

ಬಿಗ್ ಬಾಸ್ ಮನೆಯಲ್ಲಿ ರಂಗು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಒಂದಲ್ಲಾ ಒಂದು ವಿಚಾರವಾಗಿ ಟ್ರೋಲ್ ಕ್ವೀನ್ ಸೋನು ಸದಾ ಸುದ್ದಿಯಲ್ಲಿರುತ್ತಾರೆ. ಈಗ ಸೋನು ಸೋಮಾರಿ ಆಕೆಯ ಕೈಯಲ್ಲಿ ಎನು ಆಗಲ್ಲ ಅಂದವರಿಗೆ ತಿರುಗೇಟು ನೀಡಿದ್ದಾರೆ. ಕೈ ಗಾಯವಾಗಿದ್ದರೂ ಆಟ ಆಡಿ, ತಂಡವನ್ನ ಗೆಲ್ಲಿಸಿ ಕೊಟ್ಟಿದ್ದಾರೆ.

sonu gowda 2

ದೊಡ್ಮನೆಯಲ್ಲಿ ಪ್ರತಿ ವಾರ ವಿವಿಧ ರೀತಿಯ ಟಾಸ್ಕ್‌ಗಳನ್ನು ನೀಡಲಾಗುತ್ತಿದೆ. ಈ ವಾರ ಎರಡು ತಂಡಗಳನ್ನಾಗಿ ಮಾಡಿ ಹಲವು ಫಿಸಿಕಲ್ ಟಾಸ್ಕ್‌ಗಳನ್ನು ಕೊಡಲಾಗುತ್ತಿದೆ. ಒಂದು ತಂಡಕ್ಕೆ ಸೋಮಣ್ಣ ಮಾಚಿಮಾಡ ಕ್ಯಾಪ್ಟನ್ ಆದರೆ, ಮತ್ತೊಂದು ಟೀಂಗೆ ನಂದು ನಾಯಕಿ. ನಂದು ಟೀಂನಲ್ಲಿ ಸೋನು ಗೌಡ ಕೂಡ ಇದ್ದಾರೆ. ಅವರು ಟಾಸ್ಕ್ ಅನ್ನು ಆಡಿ ಸೈ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ:ಬಾಯ್ಕಾಟ್ ಟ್ರೆಂಡ್ ಬೆಳೆಯದಂತೆ ಹತ್ತಿಕ್ಕಬೇಕು : ನಟ ಅರ್ಜುನ್ ಕಪೂರ್

sonu srinivasgowda 2

ಆಟ ಆಡುವುದಕ್ಕೂ ಮುನ್ನ ಸೋನು ಗೌಡ ಗಾಯ ಮಾಡಿಕೊಂಡರು. ಸೋಮಣ್ಣ ಜತೆ ಕಬಡ್ಡಿ ಆಡೋಕೆ ಹೋಗಿ ಕೈ ಗಾಯ ಮಾಡಿಕೊಂಡರು. ಇದರಿಂದ ಅವರಿಗೆ ತೀವ್ರ ನೋವಾಗಿದೆ. ಕೈಗೆ ಹೊಲಿಗೆ ಕೂಡ ಹಾಕಲಾಗಿದೆ. ಆದರೂ ಅವರು ಟಾಸ್ಕ್ ಆಡಿದ್ದಾರೆ. ಫಿಸಿಕಲ್ ಟಾಸ್ಕ್ ಆಗಿದ್ದರೂ ಅದನ್ನು ಆಡಿ ಗೆದ್ದಿದ್ದಾರೆ.

big boss ott 2ಸೋನು ಅವರು ಟಾಸ್ಕ್ ಗೆಲ್ಲುತ್ತಿದ್ದಂತೆ ಮನೆ ಮಂದಿ ಎಲ್ಲರೂ ಅವರಿಗೆ ಮೆಚ್ಚುಗೆ ಸೂಚಿಸಿದರು. ನೋವಿನ ಮಧ್ಯೆಯೂ ಗೆದ್ದು ತೋರಿಸಿದ ಅವರನ್ನು ಎಲ್ಲರೂ ಪ್ರಶಂಸೆ ವ್ಯಕ್ತಪಡಿಸಿದ್ದರು. ಈ ಕಾರಣಕ್ಕೆ ಸೋನು ಹೈಲೈಟ್ ಆಗಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *