BollywoodCinemaLatestMain Post

ಬಾಯ್ಕಾಟ್ ಟ್ರೆಂಡ್ ಬೆಳೆಯದಂತೆ ಹತ್ತಿಕ್ಕಬೇಕು : ನಟ ಅರ್ಜುನ್ ಕಪೂರ್

ಬಾಲಿವುಡ್ ಸಿನಿಮಾಗಳ ಬಗ್ಗೆ, ಅದರಲ್ಲೂ ಖಾನ್ ಕುಟುಂಬದ ಸಿನಿಮಾಗಳ ಬಗ್ಗೆ ವಿಪರೀತ ನೆಗೆಟಿವ್ ಪ್ರಚಾರ ಮಾಡಲಾಗುತ್ತಿದೆ. ಆಮೀರ್ ಖಾನ್ ನಟಿಸಿ, ನಿರ್ಮಾಣ ಮಾಡಿರುವ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಾಯ್ಕಾಟಿಗೆ ಬಲಿಯಾಗಿದೆ. ಅಲ್ಲದೇ, ಇನ್ನೂ ಹಲವು ಸಿನಿಮಾಗಳನ್ನು ಬಹಿಷ್ಕರಿಸಬೇಕು ಎಂಬ ಕೂಗು ಎದ್ದಿದೆ. ಇದರ ಬೆನ್ನಲ್ಲೆ ನಟ ಅರ್ಜುನ್ ಕಪೂರ್ ಈ ಕುರಿತು ಅಸಮಾಧಾನ ಹೊರಹಾಕಿದ್ದಾರೆ.

ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಕರೀನಾ ಕಪೂರ್ ಕೂಡ ನಾಯಕಿಯಾಗಿ ನಟಿಸಿದ್ದಾರೆ. ಹೀಗಾಗಿ ಕರೀನಾ ಬೆನ್ನಿಗೆ ನಿಂತಿರುವ ಅರ್ಜುನ್ ಕಪೂರ್, ಬಾಯ್ಕಾಟ್ ಟ್ರೆಂಡ್ ಯಾರಿಗೂ ಒಳ್ಳೆಯದಲ್ಲ. ಇದರಿಂದ ಅದೆಷ್ಟು ಕುಟುಂಬಗಳ ನಾಶವಾಗುತ್ತವೆ ಎನ್ನುವ ಅರಿವು ಹೋರಾಟ ಮಾಡುತ್ತಿರುವವರಿಗೆ ಇಲ್ಲ. ಅಲ್ಲದೇ, ಇಂತಿಷ್ಟೇ ಜನರನ್ನೇ ಅವರು ಟಾರ್ಗೆಟ್ ಮಾಡುತ್ತಿದ್ದಾರೆ. ಹೀಗಾಗಿ ಇದನ್ನು ಚಿಗುರಿನಲ್ಲೇ ಚಿವುಟ ಬೇಕು ಎಂದು ಅರ್ಜುನ್ ಕಪೂರ್ ಹೇಳಿದ್ದಾರೆ.  ಇದನ್ನೂ ಓದಿ:ಶಿವಣ್ಣ -ಪ್ರಭುದೇವ ಹೊಸ ಪ್ರಾಜೆಕ್ಟ್‌ಗೆ ಈ ನಾಯಕಿಯರು ಫಿಕ್ಸ್

ಆಮೀರ್ ಖಾನ್ ಸಿನಿಮಾ ಅಷ್ಟೇ ಅಲ್ಲ, ಇನ್ನೂ ಹಲವು ಸಿನಿಮಾಗಳಿಗೆ ಬಾಯ್ಕಾಟ್ ಬಿಸಿ ತಾಗಿದೆ. ಅಕ್ಷಯ್ ಕುಮಾರ್ ನಟನೆಯ ರಕ್ಷಾ ಬಂಧನ್ ಚಿತ್ರಕ್ಕೂ ಬಾಯ್ಕಾಟ್ ಹೇಳಲಾಗಿತ್ತು. ಶಾರುಖ್ ಖಾನ್ ಸಿನಿಮಾವನ್ನು ಬಾಯ್ಕಾಟ್ ಮಾಡಿ ಎಂಬ ಕೂಗು ಎದ್ದಿದೆ. ಹೀಗೆ ಆದರೆ, ಬಾಲಿವುಡ್ ಸಿನಿಮಾಗಳು ಸೋಲಿನಲ್ಲೇ ಸಾವನ್ನಪ್ಪಬೇಕಾಗುತ್ತವೆ. ಹಾಗಾಗಿ ಇದರ ವಿರುದ್ಧ ದೊಡ್ಡ ಮಟ್ಟದಲ್ಲೇ ಧ್ವನಿ ಎತ್ತಬೇಕು ಎಂದು ಅವರು ಹೇಳಿದ್ದಾರೆ.

Live Tv

Leave a Reply

Your email address will not be published.

Back to top button