ತಮ್ಮ ‘ಕೊನೆ ಆಸೆ’ ತಿಳಿಸಿದ ಸೋನು ಶ್ರೀನಿವಾಸ್ ಗೌಡ: ಅವನಿಗೆ ಹೃದಯ ಪೂರ್ವಕ ಹಾರೈಕೆ

Advertisements

ಬಿಗ್ ಬಾಸ್ ಮನೆ ಅಂದಾಕ್ಷಣ ಥಟ್ಟನೆ ನೆನಪಾಗುವ ಹೆಸರು ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರದ್ದು. ಮೊದಲ ದಿನದಿಂದ ಕೊನೆಯ ದಿನದವರೆಗೂ ಜಗಳ, ಕೋಪ, ಪ್ರೀತಿ ಮಾಡಿಕೊಂಡೇ ಎಲ್ಲರ ಗಮನ ಸೆಳೆದವರು. ಅದರಲ್ಲೂ ಜಯಶ್ರೀ (Jayashree), ರಾಕೇಶ್ ಅಡಿಗ ಮತ್ತು ಸೋನು ಶ್ರೀನಿವಾಸ್ ಗೌಡ ಅವರ ತ್ರಿಕೋನ ಗೆಳೆತನ ನೋಡುಗರಿಗೆ ಸಾಕಷ್ಟು ಮನರಂಜನೆ ನೀಡಿತು. ಮನೆಯಿಂದ ಆಚೆ ಬರುತ್ತಿದ್ದಂತೆಯೇ ಅವರು ರಾಕೇಶ್ ಅಡಿಗನನ್ನು (Rakesh Adiga) ಸಖತ್ ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ. ಇದನ್ನೂ ಓದಿ:ಕೆಜಿಎಫ್ ತಾತಾ ನಟನೆಯ ‘ನ್ಯಾನೋ ನಾರಾಯಣಪ್ಪ’ ಟ್ರೇಲರ್ ರಿಲೀಸ್

Advertisements

ಈ ಕುರಿತು ಮಾತನಾಡಿರುವ ಸೋನು, ‘ನಾನು ರಾಕೇಶ್ ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಅವನು ಮುಂದಿನ ಹಂತ ತಲುಪಿದ್ದಾನೆ ಎಂದು ಕೇಳಿ ಸಂಭ್ರಮಿಸಿದೆ. ಮತ್ತೆ ಅವನು ಬಿಗ್ ಬಾಸ್ ಗೆದ್ದು ಬರಲಿ. ನನ್ನ ಕೊನೆ ಆಸೆ ಏನು ಅಂತ ಸದ್ಯ ಕೇಳಿದರೆ, ಅದು ರಾಕೇಶ್ ಬಿಗ್ ಬಾಸ್ (Bigg Boss OTT) ಮನೆಯಲ್ಲಿ ವಿನ್ ಆಗಬೇಕು’ ಎಂದಿದ್ದಾರೆ ಸೋನು. ತಮ್ಮಿಬ್ಬರ ಸ್ನೇಹ, ಪ್ರೀತಿ ಮತ್ತು ಪ್ರೇಮಕ್ಕಿಂತಲೂ ಮಿಗಿಲಾಗಿದ್ದು ಎನ್ನುವುದು ಸೋನು ಮಾತು.

Advertisements

ಸೋಷಿಯಲ್ ಮೀಡಿಯಾದಲ್ಲಿ ಅಪಾರ ಸಂಖ್ಯೆಯಲ್ಲಿ ಫಾಲೋವರ್ಸ್ ಹೊಂದಿರುವ ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಮೇಲೆ ಹಲವು ರೀತಿಯಲ್ಲಿ ಬದಲಾಗಿದ್ದಾರಂತೆ. ಮೊದ ಮೊದಲು ಇವರು ಸೋಷಿಯಲ್ ಮೀಡಿಯಾದಲ್ಲಿ ಏನೇ ಹಾಕಿದರೂ ಟ್ರೋಲ್ ಆಗುತ್ತಿದ್ದರು. ನೆಗೆಟಿವ್ (Negative) ಕಾಮೆಂಟ್ ಮಾಡಲಾಗುತ್ತಿತ್ತು. ಆದರೆ, ಇದೀಗ ನೆಗೆಟಿವ್ ಕಾಮೆಂಟ್ ಮಾಡುವವರ ಸಂಖ್ಯೆ ಸಾಕಷ್ಟು ಇಳಿಮುಖ ಆಗಿದೆಯಂತೆ.

Advertisements

ಈ ಕುರಿತು ಮಾತನಾಡಿರುವ ಅವರು, ಬಿಗ್ ಬಾಸ್ ಮನೆಯಿಂದ ಆಚೆ ಬಂದ ನಂತರ, ಪೋಸ್ಟ್ ಹಾಕಿದ್ದೆ. ನನ್ನನ್ನು ಜನರು ಎಷ್ಟು ಪ್ರೀತಿಸುತ್ತಿದ್ದಾರೆ ಎಂದು ಗೊತ್ತಾಯಿತು. ನೆಗೆಟಿವ್ ಕಾಮೆಂಟ್ ಒಂದೆರಡು ಬಂದಿರಬಹುದು. ಆದರೆ, ಪಾಸಿಟಿವ್ (Positive) ಆಗಿ ವಿಶ್ ಮಾಡಿದವರೇ ಹೆಚ್ಚು. ನೆಗೆಟಿವ್ ಕಾಮೆಂಟ್ ಗೆ ನಾನು ಮೊದಲಿನಿಂದಲೂ ಕೇರ್ ಮಾಡಿಲ್ಲ. ಈಗಲೂ ಮಾಡಿಲ್ಲ. ನಾನು ಹೇಗೆ ಎನ್ನುವುದು ನನ್ನನ್ನು ಪ್ರೀತಿಸುವವರಿಗೆ ಗೊತ್ತಿದೆ’ ಎಂದಿದ್ದಾರೆ ಸೋನು.

Live Tv

Advertisements
Exit mobile version