ಸೋಷಿಯಲ್ ಮೀಡಿಯಾದಲ್ಲಿ ಟಿಕ್ ಟಾಕ್ ಮೂಲಕ ವೈರಲ್ ಆದ ಪ್ರತಿಭೆ ಸೋನು ಗೌಡ(Sonu Srinivas Gowda) ಬಿಗ್ ಬಾಸ್ ಓಟಿಟಿಗೆ ಮಿಂಚಿದ್ದರು. ಗ್ರ್ಯಾಂಡ್ ಫಿನಾಲೆವರೆಗೂ ಪೈಪೋಟಿ ಕೊಟ್ಟ ಸ್ಪರ್ಧಿ ಸೋನು ಇದೀಗ ಟಿವಿ ಬಿಗ್ ಬಾಸ್‌ಗೆ ಬರಲಿದ್ದಾರೆ.
Advertisement
ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿದ ಬ್ಯೂಟಿ ಸೋನು ಶ್ರೀನಿವಾಸ್ ಗೌಡ ಓಟಿಟಿ ಬಿಗ್ ಬಾಸ್(Bigg Boss Ott) ಮೋಡಿ ಮಾಡಿದ್ದರು. ನೆಗೆಟಿವ್ ಮಾತುಗಳಿಂದ ಪ್ರಚಾರ ಪಡೆದುಕೊಂಡಿದ್ದರು. ತಮ್ಮ ಖಡಕ್ ಮಾತುಗಳಿಂದ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದು ಇದೆ. ಇದೀಗ ಬಿಗ್ ಬಾಸ್ ಸೀಸನ್ 9ಕ್ಕೆ ಸೋನು ಬರಲಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ. ಇದನ್ನೂ ಓದಿ: ರಿಷಬ್ ಶೆಟ್ಟಿ ಸಕ್ಸಸ್ ಸೀಕ್ರೆಟ್ ಬಗ್ಗೆ ತಂದೆ ಭಾಸ್ಕರ್ ಶೆಟ್ಟಿ ಮಾತು
Advertisement
Advertisement
ಬಿಗ್ ಬಾಸ್ ಸೀಸನ್ 9 ಕಾವೇರುತ್ತಿದೆ. ದಿನದಿಂದ ದಿನಕ್ಕೆ ಆಟಗಳು ಸಾಕಷ್ಟು ತಿರುವುಗಳನ್ನ ಪಡೆದುಕೊಳ್ಳುತ್ತಿದೆ. ಇದೀಗ ದೊಡ್ಮನೆಗೆ ಹೊಸ ಟ್ವಿಸ್ಟ್ ಕೊಡಲು ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಸೋನು ಬರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಓಟಿಟಿಯ ಗುರೂಜಿ, ರೂಪೇಶ್ ಶೆಟ್ಟಿ, ಸಾನ್ಯ, ರಾಕೇಶ್ ಬಳಿಕ 5ನೇ ಸ್ಪರ್ಧಿಯಾಗಿ ಬರಲಿದ್ದಾರೆ.
Advertisement
ಇನ್ನೂ ಓಟಿಟಿಯಲ್ಲಿ ರಾಕೇಶ್ ಮತ್ತು ಸೋನು ಆಪ್ತತೆ ಬೆಳೆದಿತ್ತು. ಟಿವಿ ಬಿಗ್ ಬಾಸ್‌ಗೆ ಸೋನು ಎಂಟ್ರಿ ಕೊಡುವುದರಿಂದ ಆಟ ಮತ್ತಷ್ಟು ರೋಚಕವಾಗಿರಲಿದೆ. ಅಷ್ಟಕ್ಕೂ ಸೋನು ಬಿಗ್ ಬಾಸ್ ಬರಲಿದ್ದಾರಾ ಎಂಬುದು ಅಧಿಕೃತವಾಗಿ ಎಂಟ್ರಿ ಆದ ಮೇಲೆ ತಿಳಿಯಲಿದೆ.