ಬಾಲಿವುಡ್ (Bollywood) ನಟ ಸೋನು ಸೂದ್ (Sonu Sood) ಸಿನಿಮಾ ಮತ್ತು ಸಾಮಾಜಿಕ ಕಾರ್ಯಗಳ ಮೂಲಕ ಅನೇಕ ಅಭಿಮಾನಿಗಳ ಮನಗೆದ್ದಿದ್ದಾರೆ. ಹೀಗಿರುವಾಗ ಇದೀಗ ನಟ ಸೋನು ನಡೆಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ರೈಲಿನಲ್ಲಿ ಪ್ರಯಾಣ ಮಾಡಿರುವ ಸೋನು, ಅಪಾಯಕಾರಿ ಸ್ಥಳದಲ್ಲಿ ಕೂತು ವೀಡಿಯೋ ಮಾಡಿದ್ದಾರೆ. ಈ ವೀಡಿಯೋ ಟ್ರೋಲಿಗರ ಬಾಯಿಗೂ ಆಹಾರವಾಗಿದೆ. ನಟನ ನಡೆಗೆ ಮುಂಬೈ ರೈಲ್ವೆ ಅಧಿಕಾರಿಗಳು (Mumbai Railway Officers) ಎಚ್ಚರಿಕೆ ಕೊಟ್ಟಿದ್ದಾರೆ.
ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ಸೋನು ಸೂದ್ ಮಿಂಚಿದ್ದಾರೆ. ಚಿತ್ರಗಳಲ್ಲಿ ಮಾತ್ರವಲ್ಲದೇ ತೆರೆ ಹಿಂದೆ ಕೂಡ ರಿಯಲ್ ಹೀರೋ ಆಗಿ ಸಂಕಷ್ಟದಲ್ಲಿರುವವರಿಗೆ ಸೋನು ಸಾಥ್ ನೀಡಿದ್ದಾರೆ. ಇತ್ತೀಚೆಗೆ ಅವರು ರೈಲ್ವೆ ನಿಲ್ದಾಣದ ನಲ್ಲಿಯಲ್ಲಿ ನೀರು ಕುಡಿದು ಸುದ್ದಿಯಾಗಿದ್ದರು. ಆದರೆ ಈ ಬಾರಿ ಅವರು ಟ್ರೋಲ್ ಆಗುವಂತಹ ವೀಡಿಯೋ ಸದ್ದು ಮಾಡ್ತಿದೆ. ರೈಲು ಬೋಗಿಯ ಮೆಟ್ಟಿಲಿನ ಸಮೀಪದಲ್ಲಿ ಸೋನು ಸೂದ್ ಕುಳಿತುಕೊಂಡಿದ್ದಾರೆ. ರೈಲು ಜೋರಾಗಿ ಚಲಿಸುತ್ತಿರುವಾಗ ತುದಿಗಾಲಿನಲ್ಲಿ ಕುಳಿತು ಅವರು ವೀಡಿಯೋಗೆ ಪೋಸ್ ನೀಡಿದ್ದಾರೆ. ಇದನ್ನೂ ಓದಿ: ಪ್ರೆಗ್ನೆನ್ಸಿ ಬಗ್ಗೆ ಸೀಕ್ರೆಟ್ ಮಾಡಿದ್ಯಾಕೆ ಎಂದು ಅಸಲಿ ವಿಚಾರ ಬಿಚ್ಚಿಟ್ಟ `ಕಬ್ಜ’ ಸುಂದರಿ
ಈ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಸೋನು ಸೂದ್ ಹಂಚಿಕೊಂಡಿದ್ದಾರೆ. ಅದನ್ನು ಕಂಡು ಅನೇಕರು ಬುದ್ಧಿ ಮಾತು ಹೇಳಿದ್ದಾರೆ. ಇದು ನಿಜಕ್ಕೂ ಬೇಜವಾಬ್ದಾರಿಯುತ ನಡವಳಿಕೆ. ಈ ರೀತಿ ಪ್ರಯಾಣ ಮಾಡುವುದು ಸುರಕ್ಷಿತವಲ್ಲ, ಅಭಿಮಾನಿಗಳಿಗೆ ಮಾದರಿ ಆಗಿರುವ ನೀವು ಈ ರೀತಿ ನಡೆದುಕೊಳ್ಳಬಾರದು ಎಂದು ಕೂಡ ಜನರು ಕಾಮೆಂಟ್ ಮಾಡಿದ್ದಾರೆ.
View this post on Instagram
ಮುಂಬೈ ರೈಲ್ವೆ ಪೊಲೀಸರ ಅಧಿಕೃತ ಟ್ವಿಟ್ಟರ್ ಖಾತೆಯಲ್ಲೂ ಈ ಬಗ್ಗೆ ಪ್ರತಿಕ್ರಿಯೆ ನೀಡಲಾಗಿದೆ. ಈ ರೀತಿ ಪ್ರಯಾಣ ಮಾಡುವುದು ಸಿನಿಮಾಗಳಲ್ಲಿ ಮನರಂಜನೆ ನೀಡಬಹುದು. ಆದರೆ ನಿಜ ಜೀವನದಲ್ಲಿ ಅಲ್ಲ. ಎಲ್ಲ ಸುರಕ್ಷತಾ ಕ್ರಮಗಳನ್ನು ಪಾಲಿಸೋಣ ಎಂದು ಅಧಿಕಾರಿಗಳು ಟ್ವೀಟ್ ಮಾಡಿ, ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.