ಈಗಾಗಲೇ ನನಗೊಬ್ಬ ಬಾಯ್ ಫ್ರೆಂಡ್ ಇದ್ದ, ಅವನು ಮೋಸ ಮಾಡಿದ ಎಂದು ಬಿಗ್ ಬಾಸ್ ಮನೆಯೊಳಗೆ ಬಂದ ಮೊದಲ ದಿನವೇ ಕಣ್ಣೀರು ಹಾಕಿದ್ದ ಟಿಕ್ ಟಾಕ್ ಸ್ಟಾರ್ ಸೋನು ಶ್ರೀನಿವಾಸ ಗೌಡ, ದೊಡ್ಮನೆ ಒಳಗೆ ಹೋಗಿ ಒಂದು ವಾರ ಕೂಡ ಆಗಿಲ್ಲ, ಆಗಲೇ ತನ್ನ ಸಹಸ್ಪರ್ಧಿ ರಾಕೇಶ್ ಮೇಲೆ ಫೀಲಿಂಗ್ಸ್ ಇದೆ ಎಂದು ಹೇಳುವ ಮೂಲಕ ಟ್ರೋಲ್ ಗೆ ಗುರಿಯಾಗಿದ್ದಾರೆ.
Advertisement
ಫೀಲಿಂಗ್ಸ್ ಎನ್ನುವುದು ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡ ನಂತರ ಹುಟ್ಟುವಂಥದ್ದು. ಆದರೆ, ತತಕ್ಷಣವೇ ಸೋನು ಗೌಡ ಈ ರೀತಿ ಹೇಳುತ್ತಿದ್ದಾರೆ ಅಂದರೆ, ಆ ಹುಡುಗಿಯಲ್ಲಿ ಏನೋ ದೋಷವಿದೆ ಎಂದು ಕಾಮೆಂಟ್ ಮಾಡಲಾಗುತ್ತಿದೆ. ರಾಕೇಶ್ ವಿಚಾರವಾಗಿ ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಸ್ಪೂರ್ತಿ ಗೌಡ ಮತ್ತು ಸೋನು ಶ್ರೀನಿವಾಸ್ ಗೌಡ ಇಬ್ಬರೂ ಕಿತ್ತಾಡುತ್ತಿದ್ದಾರೆ. ಇಬ್ಬರೂ ರಾಕೇಶ್ ನತ್ತ ಒಲವು ಬೆಳೆಸಿಕೊಳ್ಳಲು ಏನೆಲ್ಲ ಮಾಡುತ್ತಿದ್ದಾರೆ. ಈ ಮಧ್ಯೆ ರಾಕೇಶ್ ಮೇಲೆ ತಮಗೆ ಫೀಲ್ ಆಗಿರುವ ಕುರಿತು ಸೋನು ನೇರವಾಗಿಯೇ ಮಾತನಾಡಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಟ್ರಯಾಂಗಲ್ ಲವ್ ಸ್ಟೋರಿ: ರಾಕೇಶ್ ಅಡಿಗ ಪ್ರೇಮ ಪುರಾಣ
Advertisement
Advertisement
ರೂಪೇಶ್ ಶೆಟ್ಟಿ ಬಳಿ ಬರುವ ಸೋನು, ತನಗೆ ಸೀರಿಯಸ್ ಆಗಿ ರಾಕೇಶ್ ಇಷ್ಟವಾಗುತ್ತಿದ್ದಾನೆ ಎಂದು ಹೇಳಿದರೆ, ನೇರವಾಗಿ ರಾಕೇಶ್ ಬಳಿಯೇ ಬಂದು, ನೀನು ಒಪ್ಪುತ್ತಿಯೋ, ಇಲ್ಲವೋ ಗೊತ್ತಿಲ್ಲ. ನಿನ್ನ ಮೇಲೆ ಫೀಲಿಂಗ್ಸ್ ಆಗ್ತಿದೆ ಎಂದು ನೇರವಾಗಿಯೇ ಹೇಳಿದ್ದಾರೆ ಸೋನು. ಅದಕ್ಕೆ ಅಚ್ಚರಿ ವ್ಯಕ್ತ ಪಡಿಸಿರುವ ರಾಕೇಶ್, ನಿಜ ಹೇಳ್ತಿದ್ದೀಯಾ ಎಂದು ಕೇಳಿದ್ದಾರೆ. ಈ ಮಧ್ಯೆ ರಾಕೇಶ್ ನನ್ನು ತುಂಬಾ ಹಚ್ಚಿಕೊಂಡಿರುವ ಸ್ಪೂರ್ತಿ ಗೌಡ ಯಾವ ರೀತಿಯಲ್ಲಿ ಈ ವಿಷಯವನ್ನು ತಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕು.