ಸ್ಯಾಂಡಲ್‌ವುಡ್ ಬ್ಯೂಟಿ ಸೋನು ಗೌಡ ಗುಳ್ಟು, ಐ ಲವ್ ಯೂ, ಯುವರತ್ನ ಚಿತ್ರದ ಯಶಸ್ಸಿನ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ ಸೋನು ಗೌಡ ಕುರಿತು ಇಂಟರೆಸ್ಟಿಂಗ್ ಮಾಹಿತಿಯೊಂದು ಹೊರ ಬಿದ್ದಿದೆ. ನಟಿ ಸೋನುಗೆ ಸೌತ್‌ನ ಮಹಾನಟಿ ಕೀರ್ತಿ ಬೆಸ್ಟ್ ಫ್ರೆಂಡ್ ಆಗಿದ್ದು, ಇದೀಗ ಇಬ್ಬರು ಒಟ್ಟಿಗೆ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇವರಿಬ್ಬರ ಫ್ರೇಂಡ್‌ಶಿಪ್ ನೋಡಿ ನೆಟ್ಟಿಗರು ಅಚ್ಚರಿ ಪಟ್ಟಿದ್ದಾರೆ.
ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ಇವರೆಗೂ ಒಂದೇ ಒಂದು ಕನ್ನಡದ ಚಿತ್ರದಲ್ಲಿ ನಟಿಸಿಲ್ಲ. ಆದರೆ ಕನ್ನಡದ ನಟಿ ಜತೆ ಒಳ್ಳೆಯ ನಂಟಿದೆ. ನಟಿ ಸೋನು ಜೊತೆ ಒಳ್ಳೆಯ ಬಾಂಧವ್ಯವಿದೆ. ಇವರಿಬ್ಬರು ಸಾಕಷ್ಟು ವರ್ಷಗಳಿಂದ ಪರಿಚಯವಿದ್ದು, ಇದೀಗ ಒಟ್ಟಿಗೆ ಕ್ಯಾಮೆರಾ ಕಣ್ಣಿಗೆ ಪೋಸ್ ಮಾಡಿರುವ ಫೋಟೋ ವೈರಲ್ ಆಗಿದೆ. ಇದನ್ನೂ ಓದಿ: ಅಭಿಮಾನಿ ಜೊತೆ ಬಾಡಿಗಾರ್ಡ್ ರೇಗಾಡಿದಕ್ಕೆ ಗರಂ ಆದ ರಶ್ಮಿಕಾ ಮಂದಣ್ಣ
View this post on Instagram
ಕೀರ್ತಿ ಸುರೇಶ್ ಮತ್ತು ಸೋನು ಗೌಡ ಒಂದೇ ಗ್ಯಾಂಗ್‌ನ ಸ್ನೇಹಿತರು. ಕೀರ್ತಿ ಮತ್ತು ಸೋನುಗೆ ಪರಿಚಯವಿರುವ ಸ್ನೇಹಿತರಿಂದ ಪರಿಚಯವಾಗಿದ್ದು, ಸಾಕಷ್ಟು ವರ್ಷಗಳಿಂದ ಈ ಸ್ನೇಹ ಸಂಬಂಧ ಸಾಗುತ್ತಿದೆ. ಇದೀಗ ಸ್ನೇಹಿತರ ಮದುವೆ ಪಾರ್ಟಿಯಲ್ಲಿ ಇಬ್ಬರು ಭಾಗಿಯಾಗಿದ್ದು, ಕೀರ್ತಿ ಸುರೇಶ್ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಇನ್ನು ಕೀರ್ತಿಯ ಫೋಟೋಗೆ ಕಿಟ್ಟಿ ಎಂದು ಸೋನು ಕಮೆಂಟ್ ಮಾಡಿದ್ದಾರೆ. ನಟಿ ಕೀರ್ತಿ ಅನ್ನು ಸೋನು `ಕಿಟ್ಟಿ’ ಎಂದು ಕರೆಯುತ್ತಾರೆ. ಇನ್ನು ಇವರಿಬ್ಬರ ಫ್ರೆಂಡ್‌ಶಿಪ್ ನೋಡಿ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ.