ನವದೆಹಲಿ: ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಧ್ಯಕ್ಷತೆ ಕುರಿತು ಸಕ್ರೀಯ ರಾಜಕಾರಣದಿಂದ ದೂರವೇ ಉಳಿದಿರುವ ಅವರ ಅಳಿಯ ಇದೀಗ ರಾಜಕೀಯ ಪ್ರವೇಶಿಸುವ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಒಳಪಡಿಸಿರುವುದರ ವಿರುದ್ಧ ಕಿಡಿಕಾರಿರುವ ಅವರ ಅಳಿಯ ರಾಬರ್ಟ್ ವಾದ್ರಾ, ಅಗತ್ಯ ಉಂಟಾದರೆ ರಾಜಕೀಯಕ್ಕೆ ಪ್ರವೇಶಿಸುವ ಸುಳಿವು ನೀಡಿದ್ದಾರೆ. ಇದನ್ನೂ ಓದಿ: ಶಿವಾನಿ ಆತ್ಮಹತ್ಯೆ ಪ್ರಕರಣ – ಕಾಲೇಜ್‍ನಲ್ಲಿ ಕೊಟ್ಟ ಕಿರುಕುಳವೇ ಕಾರಣ: ಪೋಷಕರ ಆರೋಪ
Advertisement
Advertisement
ತನಿಖಾ ಸಂಸ್ಥೆಗಳನ್ನು ಬಿಜೆಪಿ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಈ ಸಂಸ್ಥೆಗಳು ವಿಚಾರಣೆಗೆ ಕರೆಸಿಕೊಂಡ ಒಬ್ಬ ಬಿಜೆಪಿ ನಾಯಕನ ಹೆಸರನ್ನು ಹೇಳಲಿ ನೋಡೋಣ. ಪ್ರತಿ ಬಾರಿಯೂ ತನ್ನ ನೀತಿಗಳ ಬಗ್ಗೆ ದೇಶಕ್ಕೆ ಅಸಮಾಧಾನ ಉಂಟಾಗುತ್ತಿದೆ ಎಂಬ ಭಾವನೆ ಬಿಜೆಪಿಯಲ್ಲಿ ಮೂಡಿದಾಗ, ಗಾಂಧಿ ಕುಟುಂಬಕ್ಕೆ ತೊಂದರೆ ಕೊಡಲು ಆರಂಭಿಸುತ್ತದೆ ಎಂದು ಟೀಕಿಸಿದ್ದಾರೆ.
Advertisement
ಈ ದೇಶದಲ್ಲಿ ಬದಲಾವಣೆಯ ಅಗತ್ಯವಿದೆ. ದೇಶಕ್ಕೆ ಅಗತ್ಯವಿರುವ ಬದಲಾವಣೆಯನ್ನು ನಾನು ತರಬಲ್ಲೆ ಎಂದು ಜನರಿಗೆ ಅನಿಸಿದರೆ, ನಾನು ರಾಜಕಾರಣ ಪ್ರವೇಶಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸೋನಿಯಾ ಗಾಂಧಿ ಆಪ್ತ ಸಹಾಯಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು
Advertisement
ಜನರು ಜಿಎಸ್‌ಟಿ ವಿಚಾರವಾಗಿ ಅಸಮಾಧಾನಗೊಂಡಿದ್ದಾರೆ ಎಂಬ ಕಾರಣಕ್ಕೆ ಇ.ಡಿ ಸೋನಿಯಾ ಗಾಂಧಿ ಅವರನ್ನು ವಿಚಾರಣೆಗೆ ಒಳಪಡಿಸುತ್ತಿದೆ. ನಾನು ಅವರಿಗೆ (ಸೋನಿಯಾ ಗಾಂಧಿ) ತನಿಖಾ ಸಂಸ್ಥೆಯನ್ನು ಹೇಗೆ ನಿಭಾಯಿಸಬೇಕು ಎಂದು ಸಲಹೆ ನೀಡಿದ್ದೆ. ಏಕೆಂದರೆ ನಾನು 15 ಬಾರಿ ಇ.ಡಿಗೆ ಹೋಗಿದ್ದೆ ಮತ್ತು 23,000 ದಾಖಲೆಗಳನ್ನು ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.