– ಕುವೆಂಪು, ಬಸವಣ್ಣನವರ ನಾಡಲ್ಲಿ ದ್ವೇಷ ಹಬ್ಬಿಸುತ್ತಿದೆ ಬಿಜೆಪಿ ಎಂದ ಸೋನಿಯಾ
ಹುಬ್ಬಳ್ಳಿ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಘೋಷಣೆಯಾದ ಬಳಿಕ ಇದೇ ಮೊದಲ ಬಾರಿಗೆ ಪ್ರಚಾರದ ಅಖಾಡದಲ್ಲಿ ಎಐಸಿಸಿ ಅಗ್ರ ನಾಯಕಿ ಸೋನಿಯಾ ಗಾಂಧಿ (Sonia Gandhi) ಕಾಣಿಸಿಕೊಂಡಿದ್ದಾರೆ.
ಹುಬ್ಬಳ್ಳಿಯಲ್ಲಿ ಶನಿವಾರ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರು ಒಟ್ಟಾಗಿ ಶೆಟ್ಟರ್ ಪರ ಪ್ರಚಾರ (Election Campaign) ನಡೆಸಿದ್ದಾರೆ.
Advertisement
Advertisement
ಇದೇ ವೇಳೆ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕಾಗಿ ಕೋಮು ಗಲಭೆ ಮಾಡಿಸ್ತಿದೆ. ಕುವೆಂಪು, ಬಸವಣ್ಣನವರ ನಾಡಲ್ಲಿ ದ್ವೇಷ ಹಬ್ಬಿಸುತ್ತಿದೆ ಎಂದು ಸೋನಿಯಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಖಲಿಸ್ತಾನಿ ಕಮಾಂಡೋ ಹತ್ಯೆ
Advertisement
Advertisement
ಯಮಕನಮರಡಿ, ಚಿಕ್ಕೋಡಿಯಲ್ಲೂ ರಾಹುಲ್ ಗಾಂಧಿ ಮತಬೇಟೆ ಮಾಡಿದ್ರು. ಚಿಕ್ಕಮಗಳೂರಲ್ಲಿ ಪ್ರಚಾರ ನಡೆಸಿದ ಸಿದ್ದರಾಮಯ್ಯ, ಸಿಟಿ ರವಿ, ಶೋಭಾ ಕರಂದ್ಲಾಜೆ ವಿರುದ್ಧ ವಾಗ್ದಾಳಿ ನಡೆಸಿದ್ರು. ಗಂಡಸಿ, ಕುಣಿಗಲ್, ಮದ್ದೂರು, ನಾಗಮಂಗಲ, ಚನ್ನಪಟ್ಟಣದಲ್ಲಿ ಡಿಕೆ ಶಿವಕುಮಾರ್ ಕ್ಯಾಂಪೇನ್ ಮಾಡಿದರು.
ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕರು ಜೆಡಿಎಸ್‌ಗೆ 20 ಸೀಟ್ ಬರಲ್ಲ. ನನಗೊಂದು ಅವಕಾಶ ಕೊಡಿ ಎಂದು ಮನವಿ ಮಾಡಿಕೊಂಡರು. ಬಬಲೇಶ್ವರದಲ್ಲಿ ನಟಿ ರಮ್ಯಾ, ಹುಬ್ಬಳ್ಳಿಯಲ್ಲಿ ಶೆಟ್ಟರ್ ಪರವಾಗಿ ನಟ ಶಿವಣ್ಣ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು. ಇದನ್ನೂ ಓದಿ: ಜಿದ್ದಾಜಿದ್ದಿನ ಹೋರಾಟಕ್ಕಿಳಿದ ಕೈ, ಬಿಜೆಪಿ ಅಭ್ಯರ್ಥಿಗಳು- ಯಾರಿಗೆ ಒಲಿಯಲಿದೆ ಮಡಿಕೇರಿ ಕ್ಷೇತ್ರ?