ಬಾಲಿವುಡ್(Bollywood) ನಟಿ ಸೋನಂ ಕಪೂರ್(Sonam Kapoor) ಸದ್ಯ ಮುದ್ದು ಮಗನ ಆಗಮನದ ಖುಷಿಯಲ್ಲಿದ್ದಾರೆ. ತಾಯ್ತನದ ಖುಷಿಯನ್ನು ಸವಿಯುತ್ತಿದ್ದಾರೆ. ಮಗನ ಪಾಲನೆಯಲ್ಲಿ ಬ್ಯುಸಿಯಿರುವ ನಟಿ ಇದೀಗ ಮೊದಲ ಬಾರಿಗೆ ತನ್ನ ಹೆರಿಗೆಯ ಬಗ್ಗೆ ಸೋನಂ ಮಾತನಾಡಿದ್ದಾರೆ.

ಈಸಿ ಹೆರಿಗೆಗೆ ಜೆಂಟಲ್ ಬರ್ತ್ ಮೆಥಡ್(Gentle Birth Method) ಅನ್ನು ಅನುಸರಿಸಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ ತಮ್ಮ ಹೆರಿಗೆ ನಾರ್ಮಲ್ ಆಯ್ತು ಎಂದು ತಿಳಿಸಿದ್ದಾರೆ. ನನ್ನ ಗರ್ಭಧಾರಣೆ ವಿಧಾನ ತುಂಬಾ ಭಿನ್ನವಾಗಿದೆ ಎಂದು ಸೋನಂ ಮಾತನಾಡಿದ್ದಾರೆ. ಇದನ್ನೂ ಓದಿ: ಟಾಲಿವುಡ್ ಲೆಜೆಂಡ್ ಬಾಲಯ್ಯ ಮುಂದೆ ಅಬ್ಬರಿಸಲಿದ್ದಾರೆ `ಕೆಜಿಎಫ್ 2′ ನಟ
ಇನ್ನೂ `ಜೆಂಟಲ್ ಬರ್ತ್ ಮೆಥಡ್’ ಎಂದರೆ ಎಲ್ಲಾ ತಾಯಿಂದರು ಹೆಚ್ಚು ಆರಾಮದಾಯಕ, ಆತ್ಮವಿಶ್ವಾಸದಿಂದ ಮತ್ತು ಸಹಜವಾಗಿ ಜನನ ಪ್ರತಿಕ್ರಿಯೆಯನ್ನು ಹೊಂದಲು ಡಾ.ಮೋತಾ ವಿನ್ಯಾಸಗೊಳಿಸಿದ ವಿಧಾನವಾಗಿದೆ.



