ಪಣಜಿ: ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದ, 2019ರಲ್ಲಿ ಹರಿಯಾಣ ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸೋನಾಲಿ ಪೋಗಟ್ ತನ್ನ 42ರ ವಯಸ್ಸಿನಲ್ಲಿ ಮಂಗಳವಾರ ಸಾವನ್ನಪ್ಪಿದ್ದಾರೆ. ಇದೀಗ ಸೋನಾಲಿ ಅವರ ಸಹೋದರ ಆಕೆಯನ್ನು ಇಬ್ಬರು ಸಹಚರರೇ ಕೊಲೆ ಮಾಡಿರುವುದಾಗಿ ಆರೋಪಿಸಿದ್ದಾರೆ.
ಈ ಬಗ್ಗೆ ಗೋವಾ ಪೊಲೀಸರಿಗೆ ಲಿಖಿತ ದೂರು ನೀಡಿರುವ ಸೋನಾಲಿ ಸಹೋದರ ರಿಂಕು ಢಾಕಾ, ಇದು ಪೂರ್ವ ಯೋಜಿತ ಕೊಲೆ. ಸೋನಾಲಿಯ ಆಪ್ತ ಸಹಾಯಕ ಸೇರಿದಂತೆ ನನಗೆ ಇಬ್ಬರ ಮೇಲೆ ಅನುಮಾನವಿದೆ. ಆಕೆಯ ಸಾವಿನ ಬಗ್ಗೆ ಸಿಬಿಐ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
Advertisement
Advertisement
ಅತ್ಯಾಚಾರ ಆರೋಪ:
ಸೋನಾಲಿ ಸಾವಿಗೂ ಮುನ್ನ, ಆಕೆಯನ್ನು ಅತ್ಯಾಚಾರ ಮಾಡಿ ಬ್ಲ್ಯಾಕ್‌ಮೇಲ್ ಮಾಡಲಾಗಿದೆ ಎಂದು ರಿಂಕು ಢಾಕಾ ಆರೋಪಿಸಿದ್ದಾರೆ. ಆಕೆಯ ಆಪ್ತ ಸಹಾಯಕ ಸುಧೀರ್ ಸಂಗ್ವಾನ್ ಹಾಗೂ ಆತನ ಸ್ನೇಹಿತ ಸುಖ್ವಿಂದರ್ ಆಕೆಗೆ ಆಹಾರದಲ್ಲಿ ಅಮಲು ಪದಾರ್ಥ ನೀಡಿ, ಅತ್ಯಾಚಾರವೆಸಗಿದ್ದಾರೆ. ಮಾತ್ರವಲ್ಲದೇ ಅದರ ವೀಡಿಯೋವನ್ನೂ ಮಾಡಿ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಆಕೆಯ ಆಸ್ತಿ ಕಬಳಿಸಿ ಹತ್ಯೆ ಮಾಡುವ ಬಗ್ಗೆ ಚರ್ಚೆ ನಡೆದಿದೆ ಎಂದು ಆರೋಪಿಸಿದ್ದಾರೆ.
Advertisement
ಸೋನಾಲಿ ತನ್ನ ಸಾವಿಗೂ ಸ್ವಲ್ಪ ಸಮಯದ ಮೊದಲು ತನ್ನ ತಾಯಿ, ಸಹೋದರಿ ಮತ್ತು ಸೋದರ ಮಾವನ ಜೊತೆ ಮಾತನಾಡಿದ್ದಳು. ಆದರೆ ಆಕೆಯ ಧ್ವನಿ ಎಂದಿನಂತಿರಲಿಲ್ಲ. ಮಾತ್ರವಲ್ಲದೇ ಆ ವೇಳೆ ತನ್ನ ಇಬ್ಬರು ಸಹೋದ್ಯೋಗಿಗಳ ವಿರುದ್ಧ ದೂರು ನೀಡಿದ್ದಳು ಎಂದು ರಿಂಕು ತಿಳಿಸಿದ್ದಾರೆ. ಇದನ್ನೂ ಓದಿ: ಶಾಲಾ ಶುಲ್ಕ ಪಾವತಿಸದ ವಿದ್ಯಾರ್ಥಿಗಳನ್ನು ಗ್ರಂಥಾಲಯದಲ್ಲಿ ಬಂಧಿಸಿದ ಶಿಕ್ಷಕರು
Advertisement
ಬಳಿಕ ಸೋನಾಲಿ ಸಾವಾಗಿದ್ದು, ಆಕೆ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಮೊದಲಿಗೆ ತಿಳಿಸಲಾಗಿತ್ತು. ಆದರೆ ಬಳಿಕ ಅದು ಅಸಹಜ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ತಾಕತ್ತಿದ್ರೆ ಅಂಬಾರಿ ದಿನ ಸಿದ್ದರಾಮಯ್ಯ ನಾನ್‍ವೆಜ್ ತಿಂದ ವೀಡಿಯೋ ಇದ್ರೆ ರಿಲೀಸ್ ಮಾಡು: ಸೀತಾರಾಂ ಸವಾಲ್