ಬಾಲಿವುಡ್ (Bollywood) ಬ್ಯೂಟಿ ಸೋನಾಕ್ಷಿ ಸಿನ್ಹಾ (Sonakshi Sinha) ಇದೀಗ ಸೌತ್ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಈ ಹಿಂದೆ ತಲೈವಾ ಜೊತೆ `ಲಿಂಗ'(Linga) ಚಿತ್ರದಲ್ಲಿ ಸೋನಾಕ್ಷಿ ನಟಿಸಿದ್ದರು. ಅಪ್ಪನ ವಯಸ್ಸಿನ ನಟನ ಜೊತೆ ಕಾಣಿಸಿಕೊಂಡಿದ್ದೀರಾ ಎಂದು ನಟಿಯನ್ನ ಸಖತ್ ಟ್ರೋಲ್ ಮಾಡಲಾಗಿತ್ತು. ಇದೀಗ ಮತ್ತೆ ಅಪ್ಪನ ವಯಸ್ಸಿನ ನಟನ ಜೊತೆ ಸೋನಾಕ್ಷಿ ಕಾಣಿಸಿಕೊಂಡಿದ್ದಾರೆ.
ಸೋನಾಕ್ಷಿ ಕಡೆಯದಾಗಿ ಡಬಲ್ ಎಕ್ಸ್ಎಲ್ ಚಿತ್ರದಲ್ಲಿ ನಟಿಸಿದ್ದರು. ಇದೀಗ ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ಅಪ್ಪನ ವಯಸ್ಸಿನ ಸ್ಟಾರ್ ನಟನಿಗೆ ಸೋನಾಕ್ಷಿ ನಾಯಕಿಯಾಗ್ತಿದ್ದಾರೆ. 2014ರಲ್ಲಿ ರಜನಿಕಾಂತ್ ನಟನೆಯ ʻಲಿಂಗʼ ಚಿತ್ರದಲ್ಲಿ ನಾಯಕಿಯಾಗಿ ಸೈ ಎನಿಸಿಕೊಂಡಿದ್ದರು. ಅಂದು ಅಪ್ಪನ ವಯಸ್ಸಿನ ನಟನಿಗೆ ನಾಯಕಿನಾ ಅಂತಾ ನಟಿಯನ್ನ ಸಖತ್ ಟ್ರೋಲ್ ಮಾಡಲಾಗಿತ್ತು.
ಬಳಿಕ ತಮಗಿಂತ ಜಾಸ್ತಿ ವಯಸ್ಸಿನ ಅಂತರ ಇರುವ ನಟನ ಜೊತೆ ಸೋನಾಕ್ಷಿ ಕಾಣಿಸಿಕೊಂಡಿರಲಿಲ್ಲ. ಇದೀಗ ಮತ್ತೆ ತನಗಿಂತ ಜಾಸ್ತಿ ವಯಸ್ಸಿನ ಅಂತರವಿರುವ ತೆಲುಗಿನ ಸ್ಟಾರ್ ನಟ ಬಾಲಯ್ಯ ಚಿತ್ರಕ್ಕೆ ಓಕೆ ಅಂದಿದ್ದಾರೆ. `ವೀರ ಸಿಂಹ ರೆಡ್ಡಿ’ ಸಿನಿಮಾಗೆ ಈ ನಟಿ ನಾಯಕಿ. ಈ ಮುನ್ನ ಬಾಲಯ್ಯ ಚಿತ್ರದಲ್ಲಿ ನಟಿಸಲ್ಲ ಎಂದು ನಿರ್ದೇಶಕರಿಗೆ ಹೇಳಿದ್ದರಂತೆ ಈಗ ಮತ್ತೆ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದನ್ನೂ ಓದಿ:ಬಾದಷಾ ಶಾರುಖ್ ಖಾನ್ ನಿವಾಸದ ಗೇಟ್‌ಗೆ ವಜ್ರದ ಅಲಂಕಾರ
ಮುಂದಿನ ತಿಂಗಳಿಂದ ಚಿತ್ರೀಕರಣ ಶುರುವಾಗಲಿದೆ. ಚಿತ್ರದ ಮತ್ತಷ್ಟು ಮಾಹಿತಿಯನ್ನ ಚಿತ್ರತಂಡವೇ ತಿಳಿಸಲಿದೆ.