ತಿರುವನಂತಪುರಂ: ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಮಗನೊಬ್ಬ ತನ್ನ ತಾಯಿ ಪುನರ್ ವಿವಾಹ ಆಗಿದ್ದಕ್ಕೆ ಶುಭಾಶಯವನ್ನು ಕೋರಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾನೆ. ಇದೀಗ ಆ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಗೋಕುಲ್ ಶ್ರೀಧರ್ ತಾಯಿಯ ಪುನರ್ ವಿವಾಹಕ್ಕೆ ಶುಭಾಶಯ ಕೋರಿ ಪೋಸ್ಟ್ ಮಾಡಿದ್ದಾನೆ. ಶ್ರೀಧರ್ ಕೊಲ್ಲಂನಲ್ಲಿ ಎಂಜಿನಿಯರ್ ವ್ಯಾಸಂಗ ಮಾಡುತ್ತಿದ್ದಾನೆ. ತಾಯಿಯ ತ್ಯಾಗದ ಬಗ್ಗೆ ನೆನಪಿಸಿಕೊಂಡು ಬರೆದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾನೆ.
Advertisement
ಶ್ರೀಧರ್ ‘ಇದು ನನ್ನ ತಾಯಿಯ ವಿವಾಹವಾಗಿದ್ದು’ ಎಂದು ಮಲೆಯಾಳಂ ಭಾಷೆಯಲ್ಲಿ ಬರೆದಿದ್ದು, ಜೊತೆಗೆ ತನ್ನ ತಾಯಿಯ ಫೋಟೋವನ್ನು ಹಂಚಿಕೊಂಡಿದ್ದಾನೆ.
Advertisement
Advertisement
ಪೋಸ್ಟ್ ನಲ್ಲಿ ಏನಿದೆ?
ನನ್ನನ್ನು ಹೆತ್ತು, ನನಗಾಗಿ ಬದುಕು ನಡೆಸಿಕೊಂಡು ಬಂದು, ನನ್ನ ಯಶಸ್ಸಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟರು. ನನ್ನ ತಾಯಿಯ ಮೊದಲನೇ ಮದುವೆಯಿಂದ ಸಾಕಷ್ಟು ನೋವು ಅನುಭವಿಸಿದ್ದಾರೆ ಎಂದು ಹೇಳಿಕೊಂಡಿದ್ದಾನೆ. ಅದರಲ್ಲಿ ಒಂದು ಘಟನೆಯನ್ನು ನೆನಪಿಸಿಕೊಂಡು “ಒಮ್ಮೆ ಪತಿಯಿಂದ ಹೊಡೆಸಿಕೊಂಡು ತಲೆಯಿಂದ ರಕ್ತ ಸೋರುತ್ತಿದ್ದನ್ನು ನೋಡಿದೆ. ಆಗ ನಾನು ಯಾಕೆ ಇಷ್ಟು ಕಷ್ಟವನ್ನು ಸಹಿಸಿಕೊಳ್ಳುತ್ತಿದ್ದೀಯಾ? ಎಂದು ಪ್ರಶ್ನೆ ಮಾಡಿದ್ದೆ. ಅದಕ್ಕೆ ಅಮ್ಮ ನಿನಗಾಗಿ ನಾನು ಬದುಕುತ್ತಿದ್ದೇನೆ. ಹೀಗಾಗಿ ನಿನಗಾಗಿ ನಾನು ಇದೆಲ್ಲವನ್ನು ಸಹಿಸಿಕೊಳ್ಳುತ್ತಿರುವುದು ಎಂದು ಹೇಳಿದ್ದರು ಎಂದು ಪೋಸ್ಟ್ ನಲ್ಲಿ ತಿಳಿಸಿದ್ದಾನೆ.
Advertisement
ಕೊನೆಗೆ ನನ್ನ ತಾಯಿ ಮೊದಲನೆ ಪತಿಯನ್ನು ಬಿಟ್ಟು ನನ್ನ ಕೈಯನ್ನು ಹಿಡಿದು ಆ ಮನೆಯಿಂದ ಹೊರಬಂದರು. ಆಗ ನಾನು ತಾಯಿಗೆ ಪುನರ್ ವಿವಾಹವನ್ನು ಮಾಡಬೇಕು ಎಂದು ನಿರ್ಧರಿಸಿದ್ದೆ. ಆಗ ನಾನು 10ನೇ ತರಗತಿಯಲ್ಲಿ ಓದುತ್ತಿದ್ದೆ. ನನ್ನ ತಾಯಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಅಮ್ಮ ನನಗಾಗಿ ಅವರ ಕಸುಗಳೆಲ್ಲವನ್ನು ತ್ಯಾಗ ಮಾಡಿದ್ದರು. ನಂತರ ಅಮ್ಮ ಕೆಲಸ ಬಿಟ್ಟರು. ಈಗ ನಾನು ಕೆಲಸದ ನೆಪದಲ್ಲಿ ದೂರ ಹೋದರೆ ಅಮ್ಮ ಒಬ್ಬಂಟಿಯಾಗುತ್ತಾರೆಂದು ಪುನರ್ ವಿವಾಹದ ಬಗ್ಗೆ ತಾಯಿಗೆ ಹೇಳಿದೆ.
https://www.facebook.com/gokul.sreedar/posts/2056174421177935
ಮೊದಲಿಗೆ ಅವರು ಒಪ್ಪಲಿಲ್ಲ. ಅಮ್ಮನ ಸಹೋದ್ಯೋಗಿಗಳ ಕಡೆಯಿಂದಲೇ ಪುನರ್ ವಿವಾಹ ಸಂಬಂಧ ಬಂದಿತ್ತು. ನಂತರ ನಾನು ಬಲವಂತ ಮಾಡಿ ಒಪ್ಪಿಸಿದೆ. ಈಗ ಅಮ್ಮ ಮರು ಮದುವೆಯಾಗಿ ಸಂತೋಷದಿಂದ ಇದ್ದಾರೆ ಎಂದು ಬರೆದಿದ್ದಾನೆ.
ಶ್ರೀಧರ್ ಈ ಪೋಸ್ಟ್ ಮಾಡಿದ ಬಳಿಕ ಇದುವರೆಗೂ 37,000 ಜನರು ಲೈಕ್ಸ್ ಮಾಡಿದ್ದು, 4.1 ಸಾವಿರ ಮಂದಿ ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲದೇ 3.3 ಸಾವಿರ ಜನರು ಕಮೆಂಟ್ಸ್ ಮೂಲಕ ಶುಭಕೋರಿದ್ದಾರೆ. ಜೊತೆಗೆ ಮಗನ ಕಾರ್ಯವನ್ನು ಶ್ಲಾಘಿಸಿದ್ದಾರೆ.