ಚಿಕ್ಕಬಳ್ಳಾಪುರ: ತಂದೆಯೊಬ್ಬ ತನ್ನ ಮಗನ ಮೇಲೆ ಪೆಟ್ರೋಲ್ ಸುರಿದು ನಂತರ ಬೆಂಕಿ ಹಚ್ಚಿದ ಘಟನೆಯೊಂದು ದೊಡ್ಡಬಳ್ಳಾಪುರ (Doddaballapur) ತಾಲೂಕಿನ ವಾಣಿಗರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತನನ್ನು ಆದರ್ಶ್ (28) ಎಂದು ಗುರುತಿಸಲಾಗಿದೆ. ಈತನನ್ನು ತಂದೆ ಜಯರಾಮಯ್ಯ(58) ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಸಂಚಾರ ನಿಯಮ ಉಲ್ಲಂಘಿಸಿ ನಾಪತ್ತೆಯಾಗಿದ್ದ ಚಾಲಕ ಕೊಳೆತ ಶವವಾಗಿ ಪತ್ತೆ
ಆದರ್ಶ್ ದಿನನಿತ್ಯ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದನು. ಇತ್ತೀಚೆಗೆ ತಾಯಿಯ ಬಳಿಯೂ ಕುಡಿಯಲು ಹಣ ಕೇಳಿದ್ದ. ಈ ವೇಳೆ ಹಣ ನೀಡಲು ಒಪ್ಪದ ತಾಯಿಗೆ ಮನಬಂದಂತೆ ಥಳಿಸಿದ್ದನು. ಇದರಿಂದ ಬೇಸತ್ತು ತಂದೆ ಜಯರಾಮಯ್ಯ ಮಗನನ್ನು ಕೊಲೆ ಮಾಡಲು ನಿರ್ಧರಿಸಿದ್ದಾನೆ.
ಅಂತೆಯೇ ಶುಕ್ರವಾರ ರಾತ್ರಿ ಬಾರ್ ಬಳಿ ಮಗನಿಗೆ ತಂದೆ ಹೊಡೆದಿದ್ದಾನೆ. ಈ ವೇಳೆ ಆದರ್ಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ನಂತರ ಮಗನ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಈ ಘಟನೆ ಕುರಿತು ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ (Doddabelavangala Police Station) ಪ್ರಕರಣ ದಾಖಲಾಗಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]