ಬೀದರ್: ಕತ್ತು ಕೊಯ್ದು ಯುವಕನ ಭೀಕರವಾಗಿ ಕೊಲೆ ಮಾಡಿದ ಘಟನೆ ಬೀದರ್ ಜಿಲ್ಲೆಯ ಚಿಟಗುಪ್ಪ ತಾಲೂಕಿನ ದೇವಗಿರಿ ತಾಂಡದಲ್ಲಿ ನಡೆದಿದೆ.
30 ವರ್ಷದ ತಾರಾಸಿಂಗ್ ಪವಾರ್ ಕೊಲೆಯಾದ ದುರ್ವೈವಿ ಯುವಕ. ಮಾರಕಾಸ್ತ್ರಗಳಿಂದ ಈತನ ಕುತ್ತಿಗೆ ಕೊಯ್ದು ಬರ್ಬರವಾಗಿ ಕೊಲೆ ಮಾಡಲಾಗಿದೆ. ಇದನ್ನೂ ಓದಿ: ಮಹಿಳೆಯ ಬೆತ್ತಲೆ ದೇಹ ಸೂಟ್‍ಕೇಸ್‍ನಲ್ಲಿ ಪತ್ತೆ – ರೇಪ್ ಶಂಕೆ
ಕೊಲೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಕುಡಿದು ಬಂದು ಪ್ರತಿನಿತ್ಯ ತಾಯಿ (Mother) ಭೀಮಣಿಭಾಯಿ ಜೊತೆ ಜಗಳವಾಡುತ್ತಿದ್ದ. ನಿನ್ನೆ ರಾತ್ರಿಯೂ ತಾಯಿ ಜೊತೆ ಜಗಳವಾಡಿ ಮನೆಯಿಂದ ಹೊರಗೆ ಹೋದಾಗ ಕೊಲೆ ನಡೆದಿದೆ.
ವಿಷಯ ತಿಳಿದು ಬೇಮಳಖೇಡಾ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಿತ್ತಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಡ್ರೈನೇಜ್ ಬ್ಲಾಕ್ ದಂಧೆ – ಹಣಕ್ಕಾಗಿ ಮಿಡ್‌ನೈಟ್ ಆಪರೇಷನ್