ಮಡಿಕೇರಿ: ಹೊಳೆಗೆ ಬಿದ್ದ ಮಗನನ್ನು ರಕ್ಷಿಸಲು ಹೋಗಿರುವ ತಾಯಿ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು, ಸಾವನ್ನಪಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ರೇವತಿ(32), ಕಾರ್ಯಪ್ಪ (12)ಮೃತರಾಗಿದ್ದಾರೆ. ಜಾನುವಾರುಗಳಿಗೆ ಕೆರೆಯಲ್ಲಿ ನೀರು ಕುಡಿಸಲು ಹೋದ ಬಾಲಕನೋರ್ವ ಅಕಸ್ಮಿಕವಾಗಿ ಕೆರೆಗೆ ಕಾಲು ಜಾರಿ ಬಿದ್ದು, ರಕ್ಷಣೆಗಾಗಿ ಮೊರೆ ಇಟ್ಟ ಪರಿಣಾಮ ಮನೆ ಕೆರೆಯ ಸಮೀಪ ಇದ್ದ ತಾಯಿ ಮಗನನ್ನು ರಕ್ಷಣೆ ಮಾಡಲು ಮುಂದಾಗಿ ತಾಯಿ ಮಗ ಇಬ್ಬರು ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಪೋನ್ನಂಪೇಟೆ ತಾಲೂಕಿನ ಶ್ರೀಮಂಗಲ ಗ್ರಾಮದಲ್ಲಿ ನಡೆದಿದೆ.
ನಿನ್ನೆ ಕಾರ್ಯಪ್ಪ ಮನೆಯಲ್ಲಿ ಇದ್ದ ಜಾನುವಾರುಗಳನ್ನು ಕಾಡಿನಲ್ಲಿ ಮೇಯಿಸಿ ಬಳಿಕ ಮನೆಗೆ ಸಮೀಪ ಇರುವ ಕರೆಗೆ ನೀರು ಕುಡಿಸಲು ಮುಂದಾಗಿದ್ದಾನೆ. ಈ ವೇಳೆ ಆಕಸ್ಮಿಕವಾಗಿ ಕೆರೆಗೆ ಬಿದ್ದು ಕಾರ್ಯಪ್ಪ ರಕ್ಷಣೆ ಮಾಡುವಂತೆ ಕೂಗಿದ್ದಾನೆ. ಮಗನ ಕಿರುಚಾಟ ಕೇಳಿ ಕೆರೆ ಬಳಿ ಬಂದ ಕಾರ್ಯಪ್ಪ ತಾಯಿ ರೇವತಿ ಮಗನ ರಕ್ಷಣೆ ಮುಂದಾಗಿದ್ದಾರೆ. ಅದರೆ ಕೆರೆಯಲ್ಲಿ ಹೆಚ್ಚು ಕೆಸರು ಇದ್ದ ಪರಿಣಾಮ ಕೆರೆಯಿಂದ ಹೊರ ಬರಲಾಗದೆ ತಾಯಿ ಮಗ ಇಬ್ಬರು ಕೆರೆಯಲ್ಲಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ರತ್ನನ್ ಪ್ರಪಂಚ ನೋಡಿ ಕರೆ ಮಾಡಿದ್ರು: ಡಾಲಿ ಧನಂಜಯ್
ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಪೋನ್ನಂಪೇಟೆ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಮೃತ ತಾಯಿ ಮಗನ ಮೃತ ದೇಹ ಸಿಕ್ಕಿದೆ. ವರ್ಷದ ಹಿಂದಷ್ಟೇ ಅನಾರೋಗ್ಯದಿಂದ ರೇವತಿಯವರ ಪತಿ ಮೃತಪಟ್ಟಿದ್ದು, ಮನೆಯಲ್ಲಿ ಯಾರು ಇಲ್ಲದೇ ಇರುವುದರಿಂದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಪೋನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಅಗಿದೆ.