ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಗಾಯಗಳಾಗಿದೆ: ಪುತ್ರನ ಹೆಲ್ತ್ ಬಗ್ಗೆ ಅಪ್‌ಡೇಟ್‌ ಕೊಟ್ಟ ಪವನ್ ಕಲ್ಯಾಣ್

Public TV
1 Min Read
pawan kalyan

ಸಿಂಗಾಪುರದಲ್ಲಿ ನಿನ್ನೆ (ಏ.8) ನಡೆದ ಅಗ್ನಿ ಅವಘಡದಲ್ಲಿ ಆಂಧ್ರ ಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ (Pawan Kalyan) ಪುತ್ರ ಮಾರ್ಕ್ ಶಂಕರ್‌ಗೆ ಗಾಯಗಳಾಗಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಸಿಂಗಾಪುರಕ್ಕೆ ತೆರಳುವ ಮುನ್ನ ಪುತ್ರನ ಆರೋಗ್ಯ ಸ್ಥಿತಿ ಹೇಗಿದೆ ಎಂದು ಪವನ್ ಕಲ್ಯಾಣ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಶಂಕರ್‌ಗೆ ನಾವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಗಾಯಗಳಾಗಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ:ಸಿಂಗಾಪುರ ಶಾಲೆಯಲ್ಲಿ ಬೆಂಕಿ ಅವಘಡ – ಪವನ್ ಕಲ್ಯಾಣ್ ಕಿರಿಯ ಪುತ್ರನಿಗೆ ಗಂಭೀರ ಗಾಯ

Pawan Kalyans Son Injured In Singapore School Fire

ಮಾಧ್ಯಮಕ್ಕೆ ಪವನ್ ಕಲ್ಯಾಣ್ ಮಾತನಾಡಿ, ಪುತ್ರ ಮಾರ್ಕ್ ಶಂಕರ್ (Mark Shankar0 ಶಾಲೆಯ ಸಮ್ಮರ್ ಕ್ಯಾಂಪ್‌ಗೆ ಭಾಗಿಯಾಗಿದ್ದು, ಈ ವೇಳೆ ಬೆಂಕಿ ಅವಘಡ ಸಂಭವಿಸಿದೆ. ಪುತ್ರನೊಂದಿಗೆ ಇತರೆ ವಿದ್ಯಾರ್ಥಿಗಳು ಸಹ ಇದ್ದರು. ಮಗನ ಕೈ ಹಾಗೂ ಕಾಲುಗಳಿಗೆ ಸುಟ್ಟ ಗಾಯಗಳಾಗಿವೆ. ನಾವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಗಾಯಗಳಾಗಿದೆ ಎಂದಿದ್ದಾರೆ. ಇದನ್ನೂ ಓದಿ:ಇಂಟರ್ವಲ್ ಬಗ್ಗೆ ಸೃಷ್ಟಿಕರ್ತ ಸುಕಿ ತೆರೆದಿಟ್ಟ ಬೆರಗಿನ ಸಂಗತಿ!

pawan kalyan 1

ಮಗನ ಶ್ವಾಸಕೋಶವನ್ನು ಸರಿಪಡಿಸಲು ಬ್ರಾಂಕೋಸ್ಕೋಪಿ ಮಾಡಲಾಗಿದೆ. ಅವನ ದೇಹಕ್ಕೆ ಸಾಕಷ್ಟು ಹೊಗೆ ಸೇರಿದೆ. ಹಾಗಾಗಿ ಮಗನಿಗೆ ಚಿಕಿತ್ಸೆ ಮುಂದುವರೆದಿದೆ. ಈ ಬೆಂಕಿ ಅವಘಡದಲ್ಲಿ ನನ್ನ ಮಗನ ಮುಂದೆ ಕುಳಿತಿದ್ದ ಹುಡುಗನಿಗೆ ತೀವ್ರ ಗಾಯಗಳಾಗಿವೆ. ಮತ್ತೋರ್ವ ಹುಡುಗ ನಿಧನ ಹೊಂದಿದ್ದಾನೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.

ಸಹೋದರ ಮೆಗಾಸ್ಟಾರ್ ಚಿರಂಜೀವಿ ದಂಪತಿ ಜೊತೆ ಪವನ್ ಕಲ್ಯಾಣ್ ಸಿಂಗಾಪುರಕ್ಕೆ ತೆರಳಿದ್ದಾರೆ. ಮಗನನ್ನು ನೋಡಲು ಕುಟುಂಬದ ಜೊತೆ ಹೋಗಿದ್ದಾರೆ.

Share This Article