ಮದ್ಯ ಖರೀದಿಗೆ ಹಣ ಕೊಡಲಿಲ್ಲ ಅಂತ ತಂದೆಯನ್ನೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಮಗ

Public TV
1 Min Read
crime

ಜೈಪುರ: ಮದ್ಯ ಖರೀದಿಗೆ ಹಣ ನೀಡಿಲ್ಲ ಎಂದು ತಂದೆಯನ್ನೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಘಟನೆ ರಾಜಸ್ಥಾನದ (Rajastan) ಜೈಪುರ (Jaipur) ಮದ್ಯದಂಗಡಿ ಬಳಿ ನಡೆದಿದೆ.

19 ವರ್ಷದ ಕಿಶನ್ ಮದ್ಯದಂಗಡಿಯಲ್ಲಿ (Liquor Shop) ಮದ್ಯ ಸೇವಿಸಿ ತಂದೆ ಜಗದೀಶ್ ಸೋನಿ ಬಳಿ ಹಣ ಕೇಳಿದ್ದ. ಜಗದೀಶ್ ಹಣ ನೀಡಲು ನಿರಾಕರಿಸಿದ್ದರು. ಈ ವೇಳೆ ತಂದೆ ಮಗನ ನಡುವೆ ವಾಗ್ವಾದ ನಡೆದಿದೆ. ಹಣ ನೀಡಲು ನಿರಾಕರಿಸಿದ್ದಕ್ಕೆ ಕೋಪಗೊಂಡ ಕಿಶನ್, ತಂದೆಯ ತಲೆಗೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದ. ಇದನ್ನೂ ಓದಿ: ವಿಜಯನಗರ | ಗುಡೆಕೋಟೆಯಲ್ಲಿ ಗುಡುಗು, ಬಿರುಗಾಳಿ ಸಹಿತ ಆಲಿಕಲ್ಲು ಮಳೆ – ರೈತರಲ್ಲಿ ಹರ್ಷ

ಹಲ್ಲೆಗೊಳಗಾದ ಜಗದೀಶ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇದರಿಂದ ಭಯಭೀತನಾದ ಕಿಶನ್ ತಂದೆಯ ಮೃತದೇಹವನ್ನು ಮನೆಗೆ ತೆಗೆದುಕೊಂಡು ಹೋಗಿದ್ದ. ಬಳಿಕ ಸಹೋದರ ಬಳಿ ತಂದೆ ಆಕಸ್ಮಿಕವಾಗಿ ಮೃತಪಟ್ಟರು ಎಂದು ಸುಳ್ಳು ಹೇಳಿ, ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದ. ಆತನ ನಡವಳಿಕೆಯಿಂದ ಅನುಮಾನಗೊಂಡ ಸಹೋದರ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಇದನ್ನೂ ಓದಿ:  ಬಂಗಾಳದಲ್ಲಿ ವಕ್ಫ್‌ ಕಾಯ್ದೆ ವಿರೋಧಿಸಿ ಪ್ರತಿಭಟನೆ – ಘರ್ಷಣೆಯಲ್ಲಿ ಮೂವರು ಸಾವು

ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ಕಿಶನ್ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ ಆರೋಪಿ ಕಿಶನ್‌ನನ್ನು ಪೊಲೀಸರು ಬಂಧಿಸಿದ್ದಾರೆ.

Share This Article