ಬೆಂಗಳೂರು: ಆಸ್ತಿಗಾಗಿ ಮಗನೊಬ್ಬ (Son) ತಂದೆಯನ್ನೇ (Father) ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಘಟನೆ ಬೆಂಗಳೂರಿನ (Bengaluru) ಪಣತ್ತೂರಿನ ಕಾವೇರಪ್ಪ ಲೇಔಟ್‍ನಲ್ಲಿ ನಡೆದಿದೆ.
ನಾರಾಯಣ್ ಸ್ವಾಮಿ ಕೊಲೆಯಾದ ವ್ಯಕ್ತಿ ಹಾಗೂ ಮಣಿಕಂಠ (37) ಬಂಧಿತ ಆರೋಪಿ. ಮಣಿಕಂಠ ಈ ಮೊದಲು ಮೊದಲ ಪತಿಯನ್ನು ಕೊಂದು ಜೈಲು (Jail) ಸೇರಿದ್ದ. ಅದಾದ ಬಳಿಕ ಜೈಲಿನಿಂದ ಹೊರಬಂದು 2ನೇ ವಿವಾಹವಾಗಿದ್ದ. ಎರಡನೇ ಮದುವೆ ಬಳಿಕವೂ ಬೇರೊಬ್ಬ ಮಹಿಳೆ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ. ವಿಚಾರ ಗೊತ್ತಾಗಿ ಪತಿಯಿಂದ ಎರಡನೇ ಪತ್ನಿ ದೂರವಿದ್ದಳು. ಡಿವೋರ್ಸ್ ವಿಚಾರವಾಗಿಯೂ ಮಾತುಕತೆ ನಡೆಯುತ್ತಿತ್ತು.
Advertisement
Advertisement
ಎರಡನೇ ಪತ್ನಿಗೆ ಒಂದು ಹೆಣ್ಣು ಮಗಳಿದ್ದಳು. ಆದರೆ ಡಿವೋರ್ಸ್ ಕೊಡೋದು ಬೇಡ ಎಂದು ಮಣಿಕಂಠ ತಂದೆ ನಾರಾಯಣಸ್ವಾಮಿ ಕೇಳಿಕೊಂಡಿದ್ದ. ಡಿವೋರ್ಸ್ ಬಳಿಕ ಸೊಸೆ ಹಾಗೂ ಮೊಮ್ಮಗಳಿಗೆ ಕಷ್ಟವಾಗಬಹುದು ಎಂದು ಅವರ ಜೀವನ ನಿರ್ವಹಣೆ ಕಷ್ಟ ಆಗುತ್ತೆ ಎಂದು ಸೈಟ್‍ವೊಂದನ್ನು ಅವರ ಹೆಸರಿಗೆ ಮಾಡಲು ಮುಂದಾಗಿದ್ದ. ಸೊಸೆ ಹಾಗೂ ಮೊಮ್ಮಗಳ ಹೆಸರಿಗೆ ನಿನ್ನೆ ಸೈಟ್ ರಿಜಿಸ್ಟ್ರೇಷನ್ ಮಾಡಲು ನಾರಾಯಣಸ್ವಾಮಿ ಮುಂದಾಗಿದ್ದ. ಆದರೆ ಇದು ಮಣಿಕಂಠನಿಗೆ ಇಷ್ಟವಿರಲಿಲ್ಲ. ಹಾಗಾಗಿ ತಂದೆ ಕೊಲೆಗೆ ಮಣಿಕಂಠ ತನ್ನ ಸ್ನೇಹಿತರ ಬಳಿಯೇ ಸುಪಾರಿ ನೀಡಿದ್ದ. ಇದನ್ನೂ ಓದಿ: BMTC ಬಸ್‍ನಿಂದ ಬರೋಬ್ಬರಿ 167 ಲೀಟರ್ ಡೀಸೆಲ್ ಕಳ್ಳತನ!
Advertisement
Advertisement
ತನ್ನ ಯೋಜನೆಯಂತೆ ಫೆ. 13 ಸುಪಾರಿ ಕೊಟ್ಟವರು ಕಣ್ಣೇದುರೆ ತಂದೆ ನಾರಾಯಣ್ ಸ್ವಾಮಿಯನ್ನ ಕೊಲೆ ಮಾಡಿದ್ದರೂ, ಕೊಲೆ ಬಗ್ಗೆ ಏನೂ ಗೊತ್ತಿಲ್ಲದಂತೆ ಪಾಪಿ ಪುತ್ರ, ತಂದೆ ಅಂತ್ಯಕ್ರಿಯೆ ಮಾಡಿದ್ದ. ಈ ಬಗ್ಗೆ ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಸುಪಾರಿ ಪಡೆದು ನಾರಾಯಣಸ್ವಾಮಿಯನ್ನು ಕೊಂದು ಎಸ್ಕೇಪ್ ಆಗಿದ್ದ ಹಾಗೂ ಮಣಿಕಂಠ, ಶಿವು ಸೇರಿ ಮೂರು ಆರೋಪಿಗಳ ಬಂಧನ ಮಾಡಿದ್ದಾರೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಇದನ್ನೂ ಓದಿ: ಯಾದಗಿರಿಯಲ್ಲಿ ಟಿಪ್ಪು ಸರ್ಕಲ್ ವಿವಾದ- ಸಂಘಟನೆಗಳಿಗೆ ವಾರ್ನಿಂಗ್, 144 ಸೆಕ್ಷನ್ ಜಾರಿ