ಚಿಕ್ಕಮಗಳೂರು: ಕುಡಿದ ಮತ್ತಿನಲ್ಲಿ ಅಳಿಯನೇ ಅತ್ತೆಯನ್ನ ಪೊರಕೆಯಲ್ಲಿ ಹೊಡೆದು ಕೊಲೆಗೈದಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಕಿಚ್ಚಬ್ಬಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನ ಕಾಳಮ್ಮ(60) ಎಂದು ಗುರುತಿಸಲಾಗಿದೆ. ರಮೇಶ್ (35) ಅತ್ತೆಯನ್ನ ಕೊಂದ ಅಳಿಯ. ಹಳ್ಳಿ-ಹಳ್ಳಿಗಳ ಮೇಲೆ ಕೆಲಸಕ್ಕೆ ಹೋಗುವ ರಮೇಶ್ ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದನು. ಆರೋಪಿ ರಮೇಶ್ಗೆ 10 ವರ್ಷದೊಳಗಿನ ನಾಲ್ವರು ಮಕ್ಕಳಿದ್ದಾರೆ.
Advertisement
Advertisement
ಆಗಾಗ್ಗೆ ಮನೆಗೆ ಬರುತ್ತಿದ್ದ ರಮೇಶ್, ಭಾನುವಾರ ಮಧ್ಯಾಹ್ನವೂ ಮನೆಗೆ ಬಂದಿದ್ದ. ಬಂದಾಗಲೇ ಅತ್ತೆ ಜೊತೆ ಸಣ್ಣದಾಗಿ ಜಗಳವಾಡಿ ಸಮಾಧಾನವಾಗಿದ್ದ. ಸಂಜೆ ಆತನೇ ಹೋಗಿ 5 ಕ್ವಾಟರ್ ಎಣ್ಣೆ, 1 ಕೆ.ಜಿ. ಚಿಕನ್ ಹಾಗೂ ಪೋರ್ಕ್ ತಂದಿದ್ದನು. ರಾತ್ರಿ ಆರೋಪಿ ರಮೇಶ್, ಪತ್ನಿ ಮಂಜುಳಾ ಹಾಗೂ ಅತ್ತೆ ಕಾಳಮ್ಮ ಎಲ್ಲರೂ ಕೂತು ಮದ್ಯ ಸೇವಿಸಿ ಊಟ ಮಾಡಿದ್ದಾರೆ. ಬಳಿಕ ಮತ್ತೆ ಮಾತಿಗೆ ಮಾತು ಬೆಳೆದು ಇಬ್ಬರು ನಡುವೆ ಜಗಳ ನಡೆದಿದೆ. ಈ ವೇಳೆ ಆರೋಪಿ ರಮೇಶ್ ಮೃತ ಕಾಳಮ್ಮ ಮೇಲೆ ಹಲ್ಲೆ ಮಾಡಿದ್ದಾನೆ. ಅವರ ತಲೆ, ಕುತ್ತಿಗೆ ಬಳಿ ಗಾಯವಾಗಿತ್ತು. ಇದನ್ನೂ ಓದಿ: ಬೆಂಗ್ಳೂರಲ್ಲಿ ಅಗ್ನಿ ಅವಘಡ – ಕೆಮಿಕಲ್ ಫ್ಯಾಕ್ಟರಿಗೆ ಬೆಂಕಿ, ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ
Advertisement
Advertisement
ನನ್ನ ಗಂಡನೇ ಹೊಡೆದು, ಪೊರಕೆಯಲ್ಲಿ ಹೊಡೆದು ಮನೆಯಿಂದ ಆಚೆ ತಳ್ಳಿದ್ದ ಎಂದು ರಮೇಶ್ ಪತ್ನಿ ಮಾಹಿತಿ ನೀಡಿದ್ದಾಳೆ. ಹಲ್ಲೆ ಮಾಡಿ ರಾತ್ರಿ ಹೊರಗಡೆ ತಳ್ಳಿದ್ದ ಕಾಳಮ್ಮ ಇಡೀ ರಾತ್ರಿ ಚಳಿಯಲ್ಲಿ ಹೊರಗಿದ್ದು ಸಾವನ್ನಪ್ಪಿದ್ದಾಳೆ. ಮೃತ ಕಾಳಮ್ಮ ಕಣ್ಣು ಕೂಡ ಮುಚ್ಚಿಲ್ಲ. ಹಾಗೇ ಸಾವನ್ನಪ್ಪಿದ್ದಾಳೆ. ಬೆಳಗ್ಗೆ ವಿಷಯ ತಿಳಿದು ರಮೇಶ್ ನಾಪತ್ತೆಯಾಗಿದ್ದ. ಬಳಿಕ ವಿಷಯ ತಿಳಿದ ಪೊಲೀಸರು ಆರೋಪಿ ರಮೇಶ್ನನ್ನ ಬಂಧಿಸಿದ್ದಾರೆ. ಈ ಸಂಬಂಧ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.