ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅಪ್ಪ-ಅಮ್ಮನನ್ನು ಮಗನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಏರ್ ಪೋರ್ಟ್ ರೋಡ್ ಬ್ಯಾಟರಾಯನಪುರದಲ್ಲಿ (Airport Road Bytarayanapura) ನಡೆದಿದೆ.
ತಾಯಿ ಶಾಂತ (60), ತಂದೆ ಭಾಸ್ಕರ್ (63) ಕೊಲೆಯಾದ ದುರ್ದೈವಿಗಳು. ಇವರನ್ನು ಮಗ ಶರತ್ (26) ಕೊಲೆ ಮಾಡಿದ್ದಾನೆ. ಕೊಲೆಯಾದ ದಂಪತಿ ಮಂಗಳೂರು (Mangaluru) ಮೂಲದವರು. 12 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ರು. ತಾಯಿ ಕೇಂದ್ರ ಸರ್ಕಾರದ ಸಿಬ್ಬಂದಿಯಾಗಿದ್ದು, ಇತ್ತೀಚೆಗೆ ನಿವೃತ್ತಿ ಹೊಂದಿದ್ದರು. ತಂದೆ ಖಾಸಗಿ ಕ್ಯಾಂಟೀನ್ ವೊಂದರಲ್ಲಿ ಕ್ಯಾಶಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ದಂಪತಿಗೆ ಇಬ್ಬರು ಮಕ್ಕಳಿದ್ದು, ಓರ್ವ ಮಗ ಕೆಲಸಕ್ಕೆ ಹೋಗುತ್ತಿದ್ದಾನೆ. ಆರೋಪಿ ಶರತ್ ಮನೆಯಲ್ಲೇ ಇರುತ್ತಿದ್ದನು. ಆಗಾಗ ಸೈಕೋ ರೀತಿ ವರ್ತಿಸ್ತಿದ್ದ ಶರತ್, ಸೋಮವಾರ ಸಂಜೆ ವೇಳೆಗೆ ಕುಡಿದು ಮನೆಯಲ್ಲಿ ಗಲಾಟೆ ಮಾಡಿದ್ದಾನೆ. ಈ ವೇಳೆ ರಾಡ್ ನಿಂದ ತಂದೆ-ತಾಯಿಯ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಗಂಭೀರ ಗಾಯಗೊಂಡ ದಂಪತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಇತ್ತ ತಂದೆ-ತಾಯಿ ಮೃತಪಟ್ಟಿರುವುದನ್ನು ಗಮನಿಸಿದ ಆರೋಪಿ ಮನೆ ಲಾಕ್ ಮಾಡಿ ಎಸ್ಕೇಪ್ ಆಗಿದ್ದಾನೆ. ಬೆಳಗ್ಗೆ ತಂದೆ-ತಾಯಿಗೆ ದೊಡ್ಡ ಮಗ ಕರೆ ಮಾಡಿದ್ದಾನೆ. ಈ ವೇಳೆ ಅವರು ಕರೆ ಸ್ವೀಕರಿಸಲಿಲ್ಲ. ಕೂಡಲೇ ಪಕ್ಕದ ಮನೆಯವ್ರಿಗೆ ಕರೆ ಮಾಡಿ ಚೆಕ್ ಮಾಡಲು ಹೇಳಿದ್ದಾನೆ. ಈ ವೇಳೆ ಡಬಲ್ ಮರ್ಡರ್ ಆಗಿರೋದು ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಈಶಾನ್ಯ ವಿಭಾಗ ಡಿಸಿಪಿ ಭೇಟಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಟೊಮೆಟೋ ಬೆಳೆದು ಒಂದೇ ತಿಂಗಳಲ್ಲಿ ಕೋಟಿ-ಕೋಟಿ ಬಾಚಿದ ರೈತ – ದಂಪತಿ ಫುಲ್ ಖುಷ್
ಈ ಸಂಬಂಧ ಸ್ಥಳೀಯ ನಿವಾಸಿ ಮುನಿರಾಜು ಪ್ರತಿಕ್ರಿಯಿಸಿ, ಕಳೆದ 28 ವರ್ಷಗಳಿಂದ ಇಲ್ಲಿಯೇ ವಾಸ ಮಾಡುತ್ತಿದ್ದರು. ಶಾಂತ ಐಟಿಐ ಫ್ಯಾಕ್ಟರಿಯಲ್ಲಿ ಉದ್ಯೋಗಿಯಾಗಿದ್ರು. ಈಗ ನಿವೃತ್ತರಾಗಿದ್ದಾರೆ. ಭಾಸ್ಕರ್ ಪರಿಚಿತರ ಕ್ಯಾಂಟೀನ್ ನಲ್ಲಿ ಕ್ಯಾಶಿಯರ್ ಆಗಿದ್ರು. ಆರೋಪಿ ಶರತ್ ಸೋಮವಾರ ಸಂಜೆ ನನಗೆ ಸಿಕ್ಕಿ ಮಾತನಾಡಿಸಿದ್ದ. ಭಾಸ್ಕರ್ ಕೆಲಸ ಮಾಡುತ್ತಿದ್ದ ಕ್ಯಾಂಟೀನ್ ರವರು ಕರೆ ಮಾಡಿದರೂ ಪಿಕ್ ಮಾಡಿರಲಿಲ್ಲ. ಹೀಗಾಗಿ ಕ್ಯಾಂಟೀನ್ ನವರು ದೊಡ್ಡ ಮಗನಿಗೆ ಕರೆ ಮಾಡಿದ್ದರು. ದೊಡ್ಡ ಮಗ ಬೇರೆ ಮನೆಯಲ್ಲಿ ವಾಸವಾಗಿದ್ದರು. ಹೀಗಾಗಿ ಅವರ ದೊಡ್ಡ ಮಗ ಇವತ್ತು ಬೆಳಗ್ಗೆ ಬಂದು ನೋಡಿದಾಗ ಕೊಲೆ ವಿಚಾರ ಗೊತ್ತಾಗಿದೆ. ನಂತರ ಪಕ್ಕದ ಮನೆಯ ಮಹಿಳೆಯೊಬ್ಬರನ್ನ ಕರೆದುಕೊಂಡು ಹೋಗಿದ್ದ. ನಂತರ ಪೆÇಲೀಸರಿಗೆ ಮಾಹಿತಿ ನೀಡಿದ್ದರು. ಮನೆಯಲ್ಲಿ ಮಗ ಮತ್ತು ತಂದೆ-ತಾಯಿ ನಡುವೆ ಆಗಾಗ ಗಲಾಟೆಯಾಗುತ್ತಿತ್ತು ಎಂದು ಮಾಹಿತಿ ನೀಡಿದರು.
Web Stories