ಬೆಂಗಳೂರು: ನಾಲ್ಕು ದಿನಗಳ ಹಿಂದೆ ತಂದೆ-ತಾಯಿಯನ್ನು ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದ ಮಗನನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶರತ್ (26) ಬಂಧಿತ ಹಂತಕ. ಈತ ಕಳೆದ ಮಂಗಳವಾರ ತಂದೆ-ತಾಯಿ ಹತ್ಯೆ ಮಾಡಿ ತಲೆಮರಿಸಿಕೊಂಡಿದ್ದ. ಸದ್ಯ ಕೋಡಿಗೆಹಳ್ಳಿ ಪೊಲೀಸರು ಕೊಡಗು ಜಿಲ್ಲೆಯಲ್ಲಿದ್ದವನನ್ನು ಹುಡುಕಿ ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ.
Advertisement
Advertisement
ವಿಚಾರಣೆಯ ವೇಳೆ, ಪೋಷಕರು ತನ್ನ ಬಗ್ಗೆ ನೆಗ್ಲೆಕ್ಟ್ ಮಾಡುತ್ತಿದ್ದರು. ಈ ಕಾರಣಕ್ಕಾಗಿ ತಾನು ಅವರನ್ನು ಕೊಲೆ ಮಾಡಿರುವುದಾಗಿ ಶರತ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಘಟನೆಯ ಬಳಿಕ ಕೊಡಗಿನ ಕಡೆಗೆ ಹೋಗಿರುವ ಈತ ಕಳೆದ ಮೂರು ದಿನದಿಂದ ಕಾರಿನಲ್ಲೆ ದಿನ ಕಳೆದಿರೋದು ಪೊಲೀಸರ ತನಿಖೆಯ ವೇಳೆ ಬಹಿಂಗವಾಗಿದೆ. ಇದನ್ನೂ ಓದಿ: ಅಪ್ಪ-ಅಮ್ಮನ ತಲೆಗೆ ರಾಡ್ನಿಂದ ಹೊಡೆದು ಕೊಂದು ಮಗ ಎಸ್ಕೇಪ್!
Advertisement
Advertisement
ಸದ್ಯ ಆರೋಪಿ ಶರತ್ನನ್ನು ಕೋಡಿಗೆಹಳ್ಳಿ ಪೊಲೀಸರು (Kodigehalli Police Station) ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ.
Web Stories