ಅಪ್ಪ-ಅಮ್ಮನ ಕೊಲೆಗೈದು ಎಸ್ಕೇಪ್ ಆಗಿದ್ದ ಮಗ ಅರೆಸ್ಟ್

Public TV
1 Min Read
FATHER MOTHER SON

ಬೆಂಗಳೂರು: ನಾಲ್ಕು ದಿನಗಳ ಹಿಂದೆ ತಂದೆ-ತಾಯಿಯನ್ನು ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದ ಮಗನನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶರತ್ (26) ಬಂಧಿತ ಹಂತಕ. ಈತ ಕಳೆದ ಮಂಗಳವಾರ ತಂದೆ-ತಾಯಿ ಹತ್ಯೆ ಮಾಡಿ ತಲೆಮರಿಸಿಕೊಂಡಿದ್ದ. ಸದ್ಯ ಕೋಡಿಗೆಹಳ್ಳಿ ಪೊಲೀಸರು ಕೊಡಗು ಜಿಲ್ಲೆಯಲ್ಲಿದ್ದವನನ್ನು ಹುಡುಕಿ ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ.

ವಿಚಾರಣೆಯ ವೇಳೆ, ಪೋಷಕರು ತನ್ನ ಬಗ್ಗೆ ನೆಗ್ಲೆಕ್ಟ್ ಮಾಡುತ್ತಿದ್ದರು. ಈ ಕಾರಣಕ್ಕಾಗಿ ತಾನು ಅವರನ್ನು ಕೊಲೆ ಮಾಡಿರುವುದಾಗಿ ಶರತ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಘಟನೆಯ ಬಳಿಕ ಕೊಡಗಿನ ಕಡೆಗೆ ಹೋಗಿರುವ ಈತ ಕಳೆದ ಮೂರು ದಿನದಿಂದ ಕಾರಿನಲ್ಲೆ ದಿನ ಕಳೆದಿರೋದು ಪೊಲೀಸರ ತನಿಖೆಯ ವೇಳೆ ಬಹಿಂಗವಾಗಿದೆ. ಇದನ್ನೂ ಓದಿ: ಅಪ್ಪ-ಅಮ್ಮನ ತಲೆಗೆ ರಾಡ್‍ನಿಂದ ಹೊಡೆದು ಕೊಂದು ಮಗ ಎಸ್ಕೇಪ್!

ಸದ್ಯ ಆರೋಪಿ ಶರತ್‍ನನ್ನು ಕೋಡಿಗೆಹಳ್ಳಿ ಪೊಲೀಸರು (Kodigehalli Police Station) ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article