ನ್ಯಾಯಾಂಗ ಬಂಧನದಲ್ಲಿರುವ ದರ್ಶನ್‌ರನ್ನು(Darshan) ನೋಡಲು ಪರಪ್ಪನ ಅಗ್ರಹಾರದ ಜೈಲಿಗೆ ಪತ್ನಿ ವಿಜಯಲಕ್ಷ್ಮಿ(Vijayalakshmi) ಭೇಟಿ ನೀಡಿದ್ದಾರೆ. ಇದನ್ನೂ ಓದಿ:ನಾವು ಒಟ್ಟಿಗೆ ಇಲ್ಲದಿದ್ದರೂ, ನಮ್ಮ ಬಾಂಧವ್ಯ ಮರೆಯಾಗುವುದಿಲ್ಲ- ಸೋನಲ್
ಇದೀಗ 8ನೇ ಬಾರಿ ವಿಜಯಲಕ್ಷ್ಮಿ ಜೈಲಿಗೆ ಭೇಟಿ ಕೊಟ್ಟಿದ್ದಾರೆ. ಪ್ರತಿ ವಾರದಂತೆ ಈ ವಾರವು ಕೂಡ ದರ್ಶನ್‌ರನ್ನು ನೋಡಲು ಬಂದಿರುವ ಅಮ್ಮನ ಜೊತೆ ಪುತ್ರ ವಿನೀಶ್ (Vineesh) ಕೂಡ ಜೈಲಿಗೆ ಭೇಟಿ ನೀಡಿದ್ದಾರೆ.
ಅಂದಹಾಗೆ, ಕಳೆದ ವಾರ ವಿಜಯಲಕ್ಷ್ಮಿ ಜೊತೆ ಶ್ರುತಿ ನಾಯ್ಡು ಭೇಟಿ ಕೊಟ್ಟಿದ್ದರು. ಬಳಿಕ ಅಭಿಷೇಕ್ ಜೊತೆ ಚಿಕ್ಕಣ್ಣ, ಧನ್ವೀರ್ ಕೂಡ ದರ್ಶನ್ ಭೇಟಿಗೆ ಜೈಲಿಗೆ ಬಂದಿದ್ದರು. ಇನ್ನೂ ಇನ್ನೂ ಜೈಲು ನಿಯಮಗಳ ಪ್ರಕಾರ, ಒಂದು ವಾರದಲ್ಲಿ 2 ಬಾರಿಯಷ್ಟೇ ಭೇಟಿಯಾಗಲು ಅವಕಾಶವಿರುತ್ತದೆ.