ನವದೆಹಲಿ: ನಮ್ಮ ಸೌರಮಂಡಲದ ಪ್ರಮುಖ ನಕ್ಷತ್ರವಾಗಿರುವ ಸೂರ್ಯನ ಈಶಾನ್ಯ ಪಾರ್ಶ್ವದಲ್ಲಿ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ.
https://twitter.com/JonathanBrisby1/status/1554271963836735491
Advertisement
ಯೂನಿವರ್ಸಲ್ ಟೈಮ್ ಕೊಆರ್ಡಿನೇಷನ್’ (UTC) ಪ್ರಕಾರ, ಜು. 31ರ 23:09 ಗಂಟೆಗೆ (ಭಾರತೀಯ ಕಾಲಮಾನದ ಆ.1ರ ಬೆಳಗ್ಗಿನ ಜಾವ 4:30ರ ಸುಮಾರಿಗೆ) ಈ ಸ್ಫೋಟ (C9.3 ವರ್ಗದ ಜ್ವಾಲೆ ಎಂದು ಹೆಸರಿಸಲಾಗಿದೆ) ಸಂಭವಿಸಿದ್ದು, ಅದನ್ನು ನಾಸಾದ `ಸೋಲಾರ್ ಡೈನಮಿಕ್ಸ್ ಅಬ್ಸರ್ವೇಟರಿ’ (SDO) ಸೆರೆಹಿಡಿದಿದೆ. ಇದನ್ನೂ ಓದಿ: ಅಲ್‌ಖೈದಾ ಮುಖ್ಯಸ್ಥ ಝವಾಹಿರಿ ಹತ್ಯೆ- ಮೋಸ್ಟ್ ವಾಂಟೆಡ್ ಉಗ್ರನ ಮೇಲೆ ಡ್ರೋಣ್ ಸ್ಟ್ರೈಕ್
Advertisement
Advertisement
ಭೂಮಿಯ ಕಡೆಯಿಂದ ಸೆರೆಹಿಡಿದಿರುವ ಈ ವೀಡಿಯೋದಲ್ಲಿ ಸ್ಫೋಟದ ಕೆನ್ನಾಲಿಗೆಗಳು ಸೂರ್ಯನ ಮೇಲ್ಮೈ ನಿಂದ ಹೊರಚಾಚಿರುವ ದೃಶ್ಯಗಳಿದ್ದು, ಅವು ಅಸ್ಪಷ್ಟವಾಗಿವೆ. ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದೂ ಇನ್ನೂ ತಿಳಿದುಬಂದಿಲ್ಲ. ಆದರೆ ಸ್ಫೋಟದಿಂದ ಹೊರಬಿದ್ದ ಕಿಡಿಗಳು ಬಾಹ್ಯಾಕಾಶದಲ್ಲಿ ಹಾರಿ ಹೋಗುತ್ತಿರುವುದನ್ನು ಅಬ್ಸರ್ವೇಟರಿ ಸೆರೆಹಿಡಿದಿದೆ ಎಂದು ನಾಸಾ ಹೇಳಿದೆ. ಇದನ್ನೂ ಓದಿ: ಭಾರತಕ್ಕೆ ಮತ್ತೊಂದು ಚಿನ್ನ ತಂದುಕೊಟ್ಟ ವೈಟ್‍ಲಿಫ್ಟರ್ ‘ಅಚಿಂತಾ ಶೆಯುಲಿ’ – ಮೋದಿಯಿಂದ ಅಭಿನಂದನೆ
Advertisement
ಇತ್ತೀಚೆಗೆ ಸೂರ್ಯನ ಜ್ವಾಲೆಗಳು ಹೆಚ್ಚೆಚ್ಚು ಉದ್ದುದ್ದವಾಗಿ ಕಾಣಿಸಿಕೊಳ್ಳುತ್ತಿದೆ. ಕಳೆದ 11 ವರ್ಷಗಳಿಂದ ಹೀಗಾಗುತ್ತಿದ್ದು, ಈಗ ಅದರ ಮೇಲ್ಮೈ ಮೇಲೆ ಸ್ಫೋಟವಾಗಿರುವುದು ಅಧ್ಯಯನದ ಬೇರೊಂದು ಆಯಾಮವನ್ನು ವಿಜ್ಞಾನಿಗಳ ಮುಂದೆ ತೆರೆದಿಟ್ಟಿದೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡಿವೆ.
Live Tv
[brid partner=56869869 player=32851 video=960834 autoplay=true]