ತುಮಕೂರು: ನಾನು ಖಂಡಿತವಾಗಿಯೂ ರಾಜ್ಯ ಆಳ್ತೀನಿ ಎಂಬ ಭಯ ಕೆಲವರಿಗೆ ಇತ್ತು. ಹಾಗಾಗಿ ಎಲ್ಲರೂ ಸೇರಿ ನನ್ನನ್ನ ಮುಗಿಸಲು ಮುಂದಾಗಿದ್ದರು ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ (KRPP) ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ (Janardhana Reddy) ಹೇಳಿದ್ದಾರೆ.
ಪಾವಗಡ ಪಟ್ಟಣದಲ್ಲಿ ನಡೆದ ಪಕ್ಷದ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ನನ್ನನ್ನು ಮನೆಯಲ್ಲೇ ಕೂರಿಸಬೇಕು. ಇವನು ಹೊರಗಡೆ ಎಂದೂ ಬರಬಾರದು ಎಂದು ಕೆಲವರು ಪ್ರಯತ್ನಿಸಿದ್ದರು. ನನ್ನನ್ನ ಹೇಗಾದರೂ ಮಾಡಿ ಮುಗಿಸಬೇಕು ಎಂದು ಎಲ್ಲರೂ ಪ್ರಯತ್ನಪಟ್ಟರು. ಆದರೆ ದೇವರಿಚ್ಛೆ ಬೇರೆಯೇ ಇತ್ತು. ಹಾಗಾಗಿ ನಾನು 12 ವರ್ಷಗಳ ಬಳಿಕ ನಿಮ್ಮ ಮುಂದೆ ಮತ್ತೆ ಬಂದಿದ್ದೇನೆ ಎಂದು ತಿಳಿಸಿದ್ದಾರೆ.
ಒಬ್ಬ ಮನುಷ್ಯನನ್ನ ಮುಗಿಸಬೇಕು, ಬೆಳೆಸಬೇಕು ಅಂದ್ರೆ ಆ ಪರಮಾತ್ಮನೇ ಬರಬೇಕು. ಹಾಗಾಗಿ ಇವತ್ತು 12 ವರ್ಷಗಳ ನಂತರ ನಾನು ನಿಮ್ಮ ಮುಂದೆ ಇದ್ದೇನೆ. ಜನರ ಪ್ರೀತಿ ಅಭಿಮಾನ ಭಗವಂತನ ಆಶೀರ್ವಾದದಿಂದ ಮತ್ತೇ ನಿಮ್ಮ ಮುಂದೆ ಇದ್ದೇನೆ ಎಂದು ತಾವು ಜೈಲಿಗೆ ಹೋಗಿದ್ದ ದಿನಗಳನ್ನ ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಸಹಾಯಕ ಪ್ರಾಧ್ಯಾಪಕರನ್ನ ನೇಮಿಸೋಕೆ ಸುಧಾಕರ್ 50 ಲಕ್ಷ ಕೇಳಿದ್ದಾರೆ – ಹೆಚ್‌ಡಿಕೆ ಆರೋಪ
ಪಾವಗಡದಲ್ಲಿ ನೇರಳೆಕೆರೆ ನಾಗೇಂದ್ರ ಕಳೆದ ನಾಲ್ಕೈದು ವರ್ಷಗಳಿಂದ ಸಮಾಜ ಸೇವೆ ಮಾಡಿಕೊಂಡು ಬಂದಿದ್ದಾರೆ. ಅವರು ಸಮಾಜ ಸೇವೆ ಮಾಡಬೇಕು ಎಂಬ ಉತ್ಸಾಹ ಹೊಂದಿದ್ದಾರೆ. ನಾಗೇಂದ್ರ ಅವರು ಕೆಆರ್‌ಪಿಪಿ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಈ ವೇಳೆ ಘೋಷಣೆ ಮಾಡಿದರು. ಇದನ್ನೂ ಓದಿ: ಈ ವರ್ಷದಲ್ಲೇ ಮೋದಿ ಪಾಕಿಸ್ತಾನವನ್ನ ಸಂಕಷ್ಟದಿಂದ ಪಾರು ಮಾಡ್ತಾರೆ – RAW ಮಾಜಿ ನಿರ್ದೇಶಕ