ನವದೆಹಲಿ: ಕೆಲವು ಪಟ್ಟಭದ್ರ ಹಿತಾಸಕ್ತಿ (Vested Interest) ಗುಂಪುಗಳು ನ್ಯಾಯಾಂಗದ ಮೇಲೆ ಪ್ರಭಾವ ಬೀರುವ ಪ್ರಯತ್ನ ಮಾಡುತ್ತಿವೆ. ವಿಶೇಷವಾಗಿ ರಾಜಕೀಯ ನಾಯಕರ ಮತ್ತು ಭ್ರಷ್ಟಾಚಾರ ಆರೋಪಗಳನ್ನು ಒಳಗೊಂಡ ಪ್ರಕರಣಗಳಲ್ಲಿ ಹೆಚ್ಚು ಕಂಡುಬರುತ್ತಿದೆ ಎಂದು ಆರೋಪಿಸಿ ಭಾರತದ 600ಕ್ಕೂ ಹೆಚ್ಚು ವಕೀಲರು ಸುಪ್ರೀಂ ಕೋರ್ಟ್ (Supreme Court) ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ (DY Chandrachud) ಅವರಿಗೆ ಪತ್ರ ಬರೆದಿದ್ದಾರೆ.
ಹಿರಿಯ ವಕೀಲರಾದ ಹರೀಶ್ ಸಾಳ್ವೆ ಮತ್ತು ಪಿಂಕಿ ಆನಂದ್ ಸೇರಿದಂತೆ ಹಲವು ಪ್ರಮುಖ ವಕೀಲರು ಈ ಪತ್ರಕ್ಕೆ ಸಹಿ ಮಾಡಿ ನ್ಯಾಯಾಂಗದ ಫಲಿತಾಂಶಗಳ ಮೇಲೆ ಪ್ರಭಾವ ಬೀರಲು ಕೆಲವು ವಕೀಲರ ಗುಂಪು ಒತ್ತಡದ ತಂತ್ರಗಳನ್ನು ಬಳಸುತ್ತಿದೆ ಎಂದು ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಇಂತಹ ಬೆಳವಣಿಗೆ ಪ್ರಜಾಪ್ರಭುತ್ವ ಮತ್ತು ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ಇರಿಸಲಾಗಿರುವ ನಂಬಿಕೆಗೆ ಅಪಾಯವನ್ನು ಉಂಟುಮಾಡುತ್ತವೆ. ಇದೊಂದು ‘ನ್ಯಾಯಾಂಗಕ್ಕೆ ಬೆದರಿಕೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್‌ಗೆ ರಿಲೀಫ್ – ಸಿಎಂ ಸ್ಥಾನದಿಂದ ತೆರವು ಕೋರಿ ಸಲ್ಲಿಸಿದ್ದ ಅರ್ಜಿ ವಜಾ
Advertisement
Advertisement
ಸದ್ಯ ನ್ಯಾಯಾಲಯಗಳನ್ನು ಅಪಖ್ಯಾತಿಗೊಳಿಸುವ ಮತ್ತು ಸಾರ್ವಜನಿಕ ವಿಶ್ವಾಸವನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ. ಕೆಲ ವಕೀಲರು ತಮ್ಮ ರಾಜಕೀಯ ಕಾರ್ಯಸೂಚಿಯ ಆಧಾರದ ಮೇಲೆ ನ್ಯಾಯಾಲಯದ ನಿರ್ಧಾರಗಳ ಆಯ್ದ ಟೀಕೆ ಅಥವಾ ಹೊಗಳಿಕೆಯನ್ನು ಒಳಗೊಂಡಿರುವ ಕೆಲವು ತಂತ್ರಗಳನ್ನು ಮಾಡುತ್ತಿದ್ದಾರೆ. ಕೆಲವು ವಕೀಲರು ಹಗಲಿರುಳು ರಾಜಕಾರಣಿಗಳನ್ನು ರಕ್ಷಿಸುತ್ತಿದ್ದಾರೆ. ಮಾಧ್ಯಮಗಳ ಮೂಲಕ ನ್ಯಾಯಾಧೀಶರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದೆ ಎಂದು ಸಿಜೆಐಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಜೆಡಿಎಸ್‌ನಲ್ಲಿ ಉಳಿದಿರೋ ನಿಷ್ಠಾವಂತರು ‘ಇಂಡಿಯಾ’ ಕೂಟಕ್ಕೆ ಬೆಂಬಲ ಕೊಡ್ತೀವಿ: ಸಿಎಂ ಇಬ್ರಾಹಿಂ
Advertisement
Advertisement
ಬೆಂಚ್ ಫಿಕ್ಸಿಂಗ್‌ನ ಸಂಪೂರ್ಣ ಸಿದ್ಧಾಂತವನ್ನು ಕೆಲ ಗುಂಪು ನಡೆಸುತ್ತಿದೆ ಎಂದು ಪತ್ರದಲ್ಲಿ ಹೈಲೈಟ್ ಮಾಡಿದೆ ಮತ್ತು ‘ರಾಜಕೀಯ ಫ್ಲಿಪ್-ಫ್ಲಾಪಿಂಗ್’ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ರಾಜಕಾರಣಿಗಳು ಯಾರೋ ಒಬ್ಬರ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿ ನ್ಯಾಯಾಲಯದಲ್ಲಿ ಸಮರ್ಥಿಸಿಕೊಳ್ಳುವುದು ವಿಚಿತ್ರವಾಗಿದೆ. ನ್ಯಾಯಾಲಯದ ತೀರ್ಪಿಗೆ ಮಣಿಯದಿದ್ದರೆ ನ್ಯಾಯಾಲಯದ ಒಳಗೆ ಹಾಗೂ ಮಾಧ್ಯಮಗಳ ಮೂಲಕ ತ್ವರಿತವಾಗಿ ನ್ಯಾಯಾಲಯಗಳನ್ನು ಟೀಕಿಸುತ್ತಾರೆ ಎಂದು ವಕೀಲರು ಹೇಳಿದ್ದಾರೆ. ಇದನ್ನೂ ಓದಿ: ಹಾಸನ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
2024ರ ಲೋಕಸಭೆ ಚುನಾವಣೆಗೆ ಮುನ್ನವೇ ಈ ಬೆಳವಣಿಗೆಗಳು ನಡೆಯುತ್ತಿವೆ ಎಂದು ಒತ್ತಿ ಹೇಳಿರುವ ವಕೀಲರ ಗುಂಪು, ಕೆಲವು ಅಂಶಗಳು ನ್ಯಾಯಾಧೀಶರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿವೆ ಮತ್ತು ಅವರ ಪ್ರಕರಣಗಳಲ್ಲಿ ನಿರ್ದಿಷ್ಟ ರೀತಿಯಲ್ಲಿ ತೀರ್ಪು ನೀಡುವಂತೆ ನ್ಯಾಯಾಧೀಶರ ಮೇಲೆ ಒತ್ತಡ ಹೇರಲು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳುಗಳನ್ನು ಹರಡುತ್ತಿವೆ ಎಂದು ಪತ್ರದಲ್ಲಿ ಆರೋಪಿಸಿದೆ. ಇಂತಹ ದಾಳಿಗಳಿಂದ ನಮ್ಮ ನ್ಯಾಯಾಲಯಗಳನ್ನು ರಕ್ಷಿಸಲು ನಾವು ಬಲವಾಗಿ ನಿಲ್ಲುವಂತೆ ಮತ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ಸುಪ್ರೀಂ ಕೋರ್ಟ್‌ಗೆ ವಿನಂತಿಸುತ್ತೇವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಭಾರತ ಸಮನ್ಸ್ ನೀಡಿದರೂ ಕೇಜ್ರಿವಾಲ್ ಬಂಧನ ಬಗ್ಗೆ ಅಮೆರಿಕ ಮತ್ತೆ ಪ್ರತಿಕ್ರಿಯೆ